ವಿಷಯಕ್ಕೆ ಹೋಗು

ಪುಟ:Aramane.pdf/೬೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತನ್ನ ರಾಜ್ಯದೊಳಗೆ ಹಜಾಮತಿಯನ್ನು ಕಟ್ಟು ನಿಟ್ಟಾಗಿ ನಿಷೇದಿsಸಿದನು. ಕುಲ ರುತ್ತಿಬಿಟ್ಟ ಹಜಾಮರಿಗೆ ಪುನರ್ವಸತಿ ಮಾಡಿಕೊಟ್ಟನು. ಯಷ್ಟೋ ಮಂದಿ ಹಜಾಮರು ಅಲ್ಲಿಂದ ಪಲಾಯನಗಯ್ದು ಕುಂತಲಸೀಮೆಯನ್ನು ಸೇರಿಕೊಂಡರು(ಕುದುರೆಡವರಸರ ಆಸ್ಥಾನ ಕ್ಷವುರಿಕನಾಗಿರುವ ನಾದಿರ ಗೋಯಿಂದನ ಮುತ್ತಾತ ಯಂಟೇಸುವು ಅಲ್ಲಿಂದ ಯಿಲ್ಲಿಗೆ ವಲಸೆ ಬಂದಿದ್ದನು).

ಸಿಂಗಮ ನಾಯಕನು ತನ್ನ ಆಡಳಿತಾವದಿsಯಲ್ಲಿ ಜಾರಿಗೆ ತಂದ ಘನ ಕಾರ್ಯಗಳು ವಂದಾ, ಯರಡಾ!.. ಪ್ರತಿ ಸಂವತ್ಸರ ಪಾಲ್ಗುಣ ಮಾಸ ತ್ರಯೋದಸಿ ಮೂಲಾ ನಕ್ಷತ್ರದಂದು ಯಳೆದು ಜಾತ್ರೆಮಾಡಲಕಂತ ಜೋಡು ರಥಗಳನ್ನು ಮಾಡಿಸಿದ್ದಲ್ಲದೆ ಸಾವುರೆಕರೆ ಜಮೀನನ್ನು ಯಿನಾಮಿನ ರೂಪದಲ್ಲಿ ನೀಡಿದನು. ದೂರದಮರಾವತಿ ಪಟ್ಟಣದಿಂದ ಪೆದಗಂಟಾಸಾಸ್ತ್ರಿ, ಚಿನಗಂಟಾಸಾಸ್ತ್ರಿಯಂಬವಳಿ ಸೋದರರನ್ನು ಕರೆಯಿಸಿ ಮೀಸೆಮ್ಮ, ಗಡ್ಡಮ್ಮ ಪುರಾಣವನ್ನು ನಾರಿಕೇಳಪಾಕ ಯಂಬ ಛಂದಸ್ಸಿನಲ್ಲಿ ಬರೆಯಿಸಿ ತೆಲುಗು, ಅರವ ದೇಸಗಳಲ್ಲಿ ವುಚಿತವಾಗಿ ಹಂಚಿಸಿದನು. ಮುಖ್ಯವಾಗಿ ಸತ್ಪತಿಯಂಬ ವುಭಯ ಭಾಷಾ ಪಂಡಿತರ ಕಯ್ಯಿಂದ ಅದನ್ನು ವರಿಯಾ ಭಾಷೆಗೆ ಅನುವಾದಿಸಿ ಕಳಿಂಗ ನಾಡಿನ ತುಂಬೆಲ್ಲ ಪ್ರಚಾರಮಾಡಿದನು. ಅದರ ಪರಿಣಾಮವಾಗಿ ಕಳಿಂಗ ನಾಡಿನ ಮೂಲೆ ಮೂಲೆಗಳಿಂದ ಭಕುತರು ಅಯಿಸಿಲಕ್ಕೆ ಬರು ವಂತಾಯಿತು. ನಾಯಕನ ದೂರದ್ರುಸ್ಟಿಯ ಪರಿಣಾಮವಾಗಿಯೆ ಜಾತ್ರೆಸಂದರ್ಭದಲ್ಲಿ ಮೀಸೆ ಗಡ್ಡ ಸ್ಪರ್ಧೆ ಪ್ರದರ್ಯನವು ನಡೆಯುತ್ತಿರುವುದು. ಅದಕ್ಕೆಂದೇ ಚಿನ್ನದ, ಬೆಳ್ಳಿಯ ಪದಕಗಳನ್ನು ಯಿಜೇತರಿಗೆ ನೀಡಲಾಗುವುದು. ಅಂಥ ಯಿಜೇತರಿಗೆ ಸಂದರ್ಸಕ ಪ್ರಾಧ್ಯಾಪಕ ಹುದ್ದೆ ನೀಡಿ ಮೀಸೆ ಗಡ್ಡವನ್ನು ಹೇಗೆ ಬೆಳೆಸಿದೆವು, ಬೆಳೆಸುವಾಗ ತಾವು ಸೇವನೆ ಮಾಡಿದ ಪವುಷಿವಿಕ ಆಹಾರಗಳು ಯಾವುವು? ತಮ್ಮ ಮುಖ ಗಳಿಂದ ಗಡ್ಡ ಮೀಸೆಗಳನ್ನು ಕದಿಯುವ ಕಾನೂನುಬಾಹಿರ ಪ್ರಯತ್ನಗಳು ನಡೆದ ಬಗ್ಗೆ, ತಾವು ಕಯ್ಯಿಕೊಂಡ ರಕ್ಷಣೋಪಾಯಗಳ ಕುರಿತು ಯಂಬಿವೇ ಮೊದಲಾದ ಯಿಷಯಗಳನ್ನು ಕುರಿತು ವುಪನ್ಯಾಸ ನೀಡಲು ಪಾಠಶಾಲೆಯಿಂದ ಹಿಡಿದು ಯಿಸ್ವಯಿದ್ಯಾಲಯಗಳವರೆಗೆ ಸೂಕ್ತ ಗವುರವಧನ ನೀಡಿ ಕಳಿಸುತ್ತಿದ್ದರು. ಪಡುವಣಕ್ಕಿರುವ ದ್ರೊಣಾಚಲಂ ಯಿಸ್ವ ಯಿದ್ಯಾಲಯದಲ್ಲಿ ರೋಮ ಯಿಗ್ನಾನ ಸಂಸ್ಥೆಯನ್ನು ಸಿಂಗಮ ನಾಯಕನ ದೇಣಿಗೆಯಿಂದ ಸ್ಥಾಪಿಸಲಾಗಿದೆ. ಮತ್ತು ಭಾಷಾ ಅಧ್ಯಯನ ಯಿಭಾಗ ದಲ್ಲಿ ಮೀಸೆ ಗಡ್ಡವನ್ನು ಸ್ರುಜನಸೀಲವಾಗಿ