ವಿಷಯಕ್ಕೆ ಹೋಗು

ಪುಟ:Aramane.pdf/೬೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹುತ್ತ ಕೇಳಿಸಿಕೊಂತು.. ಪಟ್ಟಣದ ಲಕ್ಷಾಂತರ ಕಿವಿಗಳು ಕೇಳಿಸಿಕೊಂಡವು.. ಅರಮನೆಯ ನವರಂದ್ರಗಳಿಂದ ಜಿನುಗಲಾರಂಭಿಸಿದ ಸದರಿ ವರ್ತಮಾನವು ವಂದು ಗ್ರಾಮ ಅಂಬದೆ, ವಂದು ವೂರು ಅಂಬದೆ ಪ್ರವಾಹದೋಪಾದಿ ಯಲ್ಲಿ ಹರಕೋತ ಹರಕೋತ....

ಅಗೋಚರವಾದದ್ದೊಂದು ಅಂಗಳದಾಗ ಬಂದಂಗಾತಲ್ಲ .. ಮನೆಯೊಳಗ ಬಂದಂಗಾತಲ್ಲಾ.. ತಮ್ಮ ಕಿವಿಯೊಳಗ ಬಂದಂಗಾತಲ್ಲ.. ಮಯ್ಯ ಸಂದುಗಳಲ್ಲಿ ಕಚಗುಳ್ಳಿ ಯಿಟ್ಟಂಗಾತಲ್ಲಾ.. ಯಿದೇನಿದ್ದೀತು?

ಅದೇ ಕಣರಪ್ಪಾ.. ಸಾಂಬಯ್ಯಗೆ, ಸಾಂಬವಿಯ ವರಪುತ್ರಂಗೆ, ಅದೇ ಕುದುರೆಡವಿನ ಅನಭಿಷಕ್ತ ಸಾಮ್ರಾಂಟಂಗೆ.. ಹೊದವಾರ ಹರೇವು ಕಾಣಿಸಿಕೊಂಡಿತಂತೆ.. ನಿನ್ನೆ ಅವಯ್ಯ ಪಿಳ್ಳೆ ಬಗಸವನಂತೆ...

ಹೆಣ್ಣು ಮಕ್ಕಳನು ಹಡಕೊಂಡಿದ್ದೋರು ಕುಂತಳ ಸೀಮೆಯೊಳಗ ಮಸ್ತುಮಂದಿ ಯಿದ್ದರಲ್ಲಾ.. ಅಂಥವರು ತಮ ತಮ್ಮ ಸಾಲಂಕ್ರುತ ಪಳ್ಳೆಗಳನು ಬೆನ್ನ ಹಿಂದ ಯಿಟುಕೊಂಡು ಕುದುರೆಡವ ಹಾದಿ ಹಿಡಿದರು. ಅರಮನೆಯ ದಸ್ತಾವೇಜುಗಳೊಳಗ ತಮ್ಮ ಪಿಳ್ಳೆಗಳ ನಾಮಾಂಕಿತಗಳನು ನೋಂದಣಿ ಮಾಡಿಸ ತೊಡಗಿದರು. ತಾವೇ ವರದಕ್ಷಿಣೆ, ವರೋಪಚಾರ ಕೊಟ್ಟು ಸೊಂತ ಖರಚೀಲೆ ತಮ್ಮ ಪಿಳ್ಳೆಗಳನು ಧಾರೆ ಯರದು ಕೊಡತೇವಿ ಯಂದು ಪಟ್ಟಣ ಸೋಮಿಗಳನ್ನಂಗಲಾಚ ತೊಡಗಿದರು. ಪಟ್ಟಣ ಸೋಮಿಗಳು ಯೀ ಪಿಳ್ಳೇನ ಮಾಡಿಕೋತಿಯಾ, ಆ ಪಿಳ್ಳೇನ ಮಾಡಿಕೋತಿಯಾ ಯಂದು ಕೇಳುತ್ತಿದ್ದ ಕಾವಯ್ಯನು ದಿಕ್ಕೇ ತೋಚದವನಂತಾಗುತ್ತಿದ್ದನು....

  • * * *

ಹ್ಹಾ.. ಹ್ಹಾ.. ನನ್ನ ರೂರಲ್ಲಿಂಡಿಯಾವೇ.. ಹೋ ಹೋ ನನ್ನ ರೂರಲ್ಲಿಂಡಿಯಾವೇ.. ಸಯ್.. ಸಯ್.. ನನ್ನ ರೂರಲ್ಲಿಂಡಿಯಾವೇ ಯಂದು ದಿವಸಕೊಂದು ಹತ್ತು ಸಲವಾದರೂ ವುದ್ಗಾರ ತೆಗೆಯೂತ ವಂದು ವೂರು ಅಂಬದೆ ವಂದು ಗ್ರಾಮ ಅಂಬದೆ ವಂದು ಪಟ್ಟಣ ಅಂಬದೆ ತಿರುಗುತಲಿದ್ದ ಮನ್ರೋಸಾಹೇಬನು ತನ್ನ ಸರೀರದ ವಂದರ್ದ ಭಾಗವನ್ನು ಜಮೀಂದಾರರಿಗೆ ಮೀಸಲಿಟ್ಟಿದ್ದರೆ ವುಳಿದರ್ದ ಭಾಗವನ್ನು ಮೋಣಿ ಮೋಣಿಗಳಿಗೆ, ಸಂಧುಸಂದಿಗಳಿಗೆ, ಬೆಮರು ವಾಸಣೆಗೆ ಬೆನ್ನಿಂಗಟ್ಟಿದ್ದ ಹೊಟ್ಟೆಗಳಿಗೆ ಆಳಕ್ಕಿಳಿದ ಕಣ್ಣುಗಳಿಗೆ, ತರಾವರಿ ಯಿಸುಮಯಗಳಿಗಾಗಿ ಮೀಸಲಿಟ್ಟಿದ್ದನು. ಕಲಿಯೂತ, ಕಲಿಸೂತ