ಗೊರಕೆ ಹೊಡೆವನೋ? ಗೊರಕೆ ಹೊಡೆಯುತ್ತಿದ್ದುದೇ ಆದರೆ ಅದರ ನಾದದ ಬಗೆ ಯಾರ ರೀತಿ ಯಿರ್ತದೆ ಯಂಬುದೇ ಆಗಿರುತ್ತಿತ್ತು. ತಿಳಿದುಕೊಳ್ಳಲು ಅವರಿವರನ್ನು ಪರಾಂಬರಿಸುತ್ತಿದ್ದುದೋ? ಕಾವಲು ಮಂದಿ ಅಂಥವರನ್ನು ಅಟ್ಟಾಡಿಸಿಕೊಂಡು ಮೋಡಿಸುತ್ತಿದ್ದುದೋ? ಆದರೆ ಯಾರು ಯಷ್ಟೇ ಪ್ರಯತ್ನ ಪಡುತಲಿದ್ದರೂ ಮನ್ರೋನ ಕೆಲವು ಖಾಸಗಿ ಸಂಗತಿಗಳು ಬಿಲ್ಕುಲ್ ಕಿವಿಗೆಟಕುತ್ತಲಿರಲಿಲ್ಲ.. ವಟ್ಟಿನಲ್ಲಿ ಆತನ ವಾಸ್ತವ್ಯವು ಆತ ಮೊಖ್ಕಾಮು ಹೂಡುತಲಿದ್ದ ಗ್ರಾಮ ಜನ ಜೀವನಕ್ಕೆ ಹೆಚ್ಚು ನಿಕಟವಾಗುತ್ತಲೇ ಸಾಗಿತ್ತು. ಆದರಾತನು ವುಚ್ಚವರಣೀ ಯರಿಗೆ ಬದಲಾಗಿ ಕೆಳದರ್ಜೆಯ ಸೂದ್ರವರಣೀಯರನ್ನು ಹೆಚ್ಚು ಹಚ್ಚಿಕೊಳ್ಳುತಲಿದ್ದುದನ್ನು ಕಂಡು....
ಅಲುಪಸಂಖ್ಯಾತ ಪದವಿಗಿಳಿದಿದ್ದ ಸಾಸ್ತ್ರಿದ್ವಯರು ಕಯ್ನ ಕಯ್ಯೊಳಗಿಟುಕೊಂಡು ‘ಅಯ್ಯೋ ತಮ ಹಿಂದೂ ಧರುಮವೇ’ ಯಂದು ಪೇಚಾಡಿಕೊಳ್ಳುತಲಿದ್ದುದು ಬಹಿರಂಗಗೊಂಡಿರಲಿಲ್ಲ.. ತಮ್ಮೀರ್ವರ ನಡೆ ನುಡಿ, ಸರೀರ ಸಂಬಂಧೀ ಯೀಸೇಸಗಳನ್ನು ಅನುಕರಣೆ ಮಾಡುತ ಹಿಂದೂ ಧರುಮವನ್ನು ಪುನಸ್ಚೇತನಗೊಳಿಸುವ ಬದಲು ಗ್ರಾಮೀಣ ಮಂದಿಯು ಯಿಂಗಲೀಸಿಗನಾದ ಕಲೆಟ್ಟರು ಸಾಹೇಬನನ್ನು ಅನುಕರಣೆ ಮಾಡುತಲಿರುವರಲ್ಲಾ? ಯಂದವರು ತಮ್ಮೀರ್ವರಿಗೆ ಮಾತ್ರಕೇಳಿಸುವಂತೆ ಪೇಚಾಡಿ ಕೊಳ್ಳುತಲಿದ್ದರು.. ವುದ್ದನೆಯ ನಿಲುವಂಗಿಗಳನು ತೊಟ್ಟಿರುತಲಿದ್ದ ಪಾದರಿಗಳು ಬಿಳಿ ಹಮುಸ ಪಕ್ಷಿಗಳಂತೆ ಆಗೊಮ್ಮೆ, ಯೀಗೊಮ್ಮೆ ಬಂದು ಮನ್ರೋನನ್ನು ಕಂಡ ಮಣಗಟ್ಟಲೆ ಮಾತಾಡಿ ಹೋಗುತಲಿದ್ದುದೂ ಅವರಿಗೆ ನುಂಗಲಾರದ ತುತ್ತಾಗಿತ್ತು. ಅವರ ಮಾತುಗಳನ್ನಿವರು ಗುಟ್ಟಾಗಿ ಕೇಳಿಸಿಕೊಳ್ಳುವ ಪ್ರಯತ್ನವ ಮಾಡದೆಯಿರುತ್ತಿರಲಿಲ್ಲ. ವಂದು ರೀತಿಯ ನಿರುವುದಿಗ್ನ ಮಾತು ಕಥೆ.. ಮನ್ರೋನ ಸರಳ ಸಜ್ಜನಿಕೆಗಳನ್ನೇ ಬಂಡವಾಳವಾಗಿಟ್ಟುಕೊಂಡು ಅವರೇನಾದರೂ ಗ್ರಾಮಕ್ಕೊಂದೊಂದು ಯಿಗರ್ಜಿಗಳನ್ನು ನಿರುಮಿಸಲೆತ್ನಿಸಿದರೆ, ಗ್ರಾಮೀಣ ಮಂದಿಯ ಸವುಕಳಿ ತನವನ್ನೆ ಆಧಾರವಾಗಿಟ್ಟುಕೊಂಡು ಮತಾಂತರ ಮಾಡಿಸಲೆತ್ನಿಸಿದರೆ?... ಸಾಸ್ತ್ರಿದ್ವಯರು ಯೋಚಿಸೀ ಯೋಚಿಸೀ ಅವಿಯಾಗುತಲಿದ್ದರು. ಕುಂಪಣಿ ಸರಕಾರ ತಳವÆರಿ ಬಲಿಷವಿವಾಗಬೇಕಾದರೆ ಮನುಸ್ಮ್ನೃತಿಯನ್ನು ಜನಪ್ರಿಯಗೊಳಿಸಬೇಕೆಂದೂ, ಮನು ಪ್ರಣೀತ ಸಾಮಾಜಿಕ ಸಂವಿಧಾನವನ್ನು ಕರಗತ ಮಾಡಿಕೊಳ್ಳಬೇಕೆಂದೂ ತಾವು