ವಿಷಯಕ್ಕೆ ಹೋಗು

ಪುಟ:Aramane.pdf/೬೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ರುದ್ದ ಸಿಪಾಯಿಯು ಆಗಂತುಕರು ಕುದುರೆಡವು ಮೂಲದವರೆಂದು ಕೇಳಿ ತಿಳಿದು ಸರೀರ ಸವುಷವಿವ ಮಾತ್ರದಿಂದ ತಾನು ವೂಹಿಸಿದ್ದು ಖರೇವಾಯಿತೆಂದು ತನಗೆ ತಾನೇ ವುಬ್ಬುತ್ತ ಅರಮನೆಯಂ ಪೊಕ್ಕು ನಿಮ ನಿಮ್ಮ ಶಕ್ತಾನುಸಾರವಾಗಿ ಅರಸನನ್ನು ಹುಡುಕಿಕೊಳ್ಳಬೌದೆಂದು ಹೇಳಿ ಅವರ ಪಾಡಿಗೆ ಅವರನ್ನು ಬಿಟ್ಟನು.

ಸಮಾಧಾನದ ವುಸುರು ಬಿಡುತ್ತ ಅವರು ಅರಮನೆಯ ರುಗ್ಣದ್ವಾರವನ್ನು ತಲುಪಲಾಗಿ ಕಾಪಲಿದ್ದ ಮಂದಿ ತಡೆಯಲು ತಾವು ಫಲಾನ ಯಿಂಥವರೆಂದೂ, ಅರಸನ ದರುಸನಾಕಾಂಕ್ಷಿಗಳಾಗಿ ಬಂದಿರುವುದಾಗಿ ಹೇಳಿದರು. ಹ್ಹಾಂ.. ಕುದುರೆಡವಿನವರೇನು? ಯಂದು ಅಭಿಮಾನ ತಳೆದನು. ಅನುಮತಿ ಪಡೆದು ಬರುವುದಾಗಿ ಹೇಳಿ ವಳ ಹೋದನು. ವಂದು ಗಳಿಗೆ ಆತು.. ಯರಡು ಗಳಿಗೆ ಆತು? ಬರೋಬ್ಬರಿ ಮೂರು ಗಳಿಗೆ ಯಂಬುವಷ್ಟರೊಳಗೆ ಆ ಸಿಪಾಯಿಯು ಬಂದು “ನೋಡಿರೆಜಮಾನರುಗಳಿರಾss.. ನಮ್ಮ ರಾಜನ ಪ್ರಕ್ರುತಿ ಬಲು ಚೂಚುಮ ಅಯ್ತೆ.. ಆತ ದುರುಗುಟ್ಟಿ ನೋಡಿದರೆ ತಡಕಳ್ಳಂಗಿಲ್ಲ... ಗಟ್ಟಿಯಾಗಿ ಮಾತಾಡಿದರ ತಡಕಳ್ಳಂಗಿಲ್ಲ.. ವುಸುರು ಬಡಿಯುವಂಗ ಸನೀಪ ನಿಂತರ ತಡಕಳ್ಳಂಗಿಲ್ಲ... ಅದಕ ಬಲು ಹುಷಾರಿರಬೇಕು.. ಅವುರೀಕಲೆ ನೋಡಬೇಕು, ಮಾತಾಡಬೇಕು, ಕೇಳಬೇಕು..ಹತ್ತು ಮಾತೊಳಗೇಳುವುದನು ಯಲ್ಡೇ ಮಾತುಗಳಲ್ಲಿ ಹೇಳಬೇಕು..” ಯಂದು ಮಾತಿನ ಕರಾರು ಯಿಧಿಸಿದನು. ಅದಕ್ಕಿವರು ಅನುಮೋದಿಸಿದರು. ತದನಂತರ ವಳೀಕ್ಕೆ ಹೋಗಲು ಪರವಾನಿಗಿ ಕೊಟ್ಟನು. ವಳ್ಳೆ ಪಜೀತಿ ಆತಲ್ಲ ಅಂತ ಯಿವರು ದ್ವಾರದ ತಲಬಾಕಲಿಗಿದ್ದ ಗಜಲಕ್ಷ್ಮಿಯಿಗ್ರಹಕ್ಕೆ ಸಣುಮಾಡಿ ಹೆಜ್ಜೆಕಿತ್ತು ವಳಗೆ ಯಿಟ್ಟು...

ನಡೆಕೋತ ಹೋಗುತ್ತಾರೆ.. ನೋಡಿಕೋತ ನಡೆಯುತ್ತಾರೆ? ಹೋಗುತ? ನಡೆಯುತ ಪಂಚರು ಯಿರುವಾಗ್ಗೆ.. ಯಿನ್ನೋರ್ವ ಯ್ಯಕ್ತಿ ಬಂದು ವಂದು ಹಜಾರ ಅಂದರ ಹಜಾರಕ್ಕೆ ಕರೆದೊಯ್ದು ಯಿದೇ ರಾಜಾಸ್ಥಾನ ಯಂದೂ ಹೇಳಿ ಕಲ್ಲಿನ ಬುಗುಟಿಗಳನ್ನೇ ಆಸನಗಳೆಂದು ಭಾವಿಸಿ ಕುಳಿತುಕೊಂಡು ರಾಜನ ಆಗಮನಕ್ಕಾಗಿ ಕಾಯಬೇಕೆಂದೂ ಹೇಳಿ ಹೋದನು. ಅವರು ಅದರಂಗೆ ಕೂಕಂಡು ಮಿಕಿ ಮಿಕಿ ನೋಡಲಿಕ್ಕೆ ಹತ್ತಿದರು. ರಾಜನ ಆಗಮನಾಕಾಂಕ್ಷಿಗಳಾಗಿ ತಾವಂದೆ ಅಲ್ಲದೆ ಯಿನ್ನು ಕೆಲವರಿದ್ದರು. ಅವರು ಯಿವರನ್ನು, ಯಿವರು ಅವರನ್ನು ಸುಮ ಸುಮ್ಮಕ ರಾಜರೆಂದು ಅನ್ಯಥಾ ಭಾವಿಸಿಕೊಳ್ಳುತಲಿದ್ದರು. ಹಂಗ ಭಾವಿಸಿಕೊಳ್ಳುತಲಿದ್ದುದು ಖರೆ ಯಿರದಿದ್ದರೂ ಸುಳ್ಳಂತು ಯಿರಲಿಲ್ಲ.