ವಿಷಯಕ್ಕೆ ಹೋಗು

ಪುಟ:Aramane.pdf/೬೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುರುವಾಪರವನ್ನು ಚಂಪುಸಯ್ಲಿಯಲ್ಲಿ ಕರುಳು ಕರಗುವಂತೆ ಯಿವರಿಸಿ ತನ್ನ ಗ್ರಾಚಾರವು ಯೀ ಪ್ರಕಾರವಾಗಿ ಯಿರುವುದು ಯಂದು ಹೇಳುತ ಕಣ್ಣಲ್ಲಿ ನೀರು ತಂದುಕೊಂಡನು. ಅದಕಿದ್ದು ಭೂಸ್ವಾಮಿಯು “ಆಗಲಿ.. ಅಂಜುಕೋ ಬ್ಯಾಡಪ್ಪಾ.. ನಮ್ಮ ಧರುಮಪತ್ನಿಗೆ ವಂದು ಬರಬಾರದ ಕಾಯಿಲೆ ಬಂದಿರುವುದು. ಅದು ಅವುಸಧಕ್ಕೆ ಮಣಗವಲ್ಲದು.. ಯಾವುದಾರ ಕವಿ ಕಯ್ಲಿ ಪುರಾಣ ಬರೆಸಿ ಅದರ ನೂರಾವಂದು ಪ್ರತಿಗಳನ್ನು ನೂರೊಂದು ವಯ್ದಿ ಕೋತ್ತಮರುಗಳಿಗೆ ದಾನ ನೀಡಿದಿ ಅಂದರೆ ಯೀ ರೋಗ ವಾಸಿ ಆಗತಯ್ತೆಯಂದು ವಬ್ಬ ತಾತನು ಹೇಳಿದನು. ಅದರಂತೆ ಮಾಡಬೇಕಯ್ತೆ. ನೀನು ಬರಕೊಟ್ಟಿ ಅಂದರೆ ಪುರಾಣ ತೂಕದ ಬಂಗಾರವನ್ನು ನಿನಗೆ ದಾನವಾಗಿ ಕೊಡುವೆನು” ಯಂದು ಹೇಳಿದ್ದಕ್ಕೆ ಅವಯ್ಯನು ಸಂತೋಷದಿಂದ ವಪ್ಪಿದನು. ಆ ಕ್ಷಣದಿಂದ ಪುರಾಣ ರಚನಾ ಕಾರ್ಯಕ್ಕೆ ಸ್ರೀಕಾರವಂ ಹಾಕಿದನು. ಫಲಾನ ತೇದಿ ಯಂದು ಆರಂಭಿಸಿ ಫಲಾನ ತೇದಿ ಯಂದು ಮುಗಿಸಿದನು. ಅದೇ ಚೋರ ಚೋರೆಸ್ವರ ಪುರಾಣವು. ಅದರ ಸಾರಾಂಶವನ್ನು ಬರೀ ಬಾಯಿ ಮಾತಿನಿಂದ ಹೇಳಲಿಕ್ಕಾಗದು. ವಂದೇ ಮಾತಿನಲ್ಲಿ ಹೇಳಬೇಕೆಂದರೆ ಅಗಸ್ತ್ಯ ಮಹರ್ಸಿಗಳ ಸಾಪದಿಂದ ಪಾರೊತಿಯು ಭೂಲೋಕದ ಯಲ್ಲಾಪ್ರಕೊರಚರಟ್ಟಿಯ ರಾಮಣ್ಣನ ಗರ್ಭದಲ್ಲಿ ಜನಿಸುವಳು. ಆಕೆಯನ್ನು ಹುಡುಕಲೋಸುಗ ಪರಮೇಸ್ವರನು ಭೂಲೋಕದ ಯಿನ್ನೊಂದು ಕಳ್ಳರ ತವರೂರೆನಿಸಿದ ನೆರಣಿಕೆಯಲ್ಲಿ ಕನ್ನ ಕೊರೆಯುವ ಕನ್ನಯ್ಯನ ಹೊಟ್ಟೆಯಲ್ಲಿ ಹುಟ್ಟಿ ಕವುಮಾರ್ಯಾವಸ್ಥೆಯಲ್ಲಿಯೇ ಚೋರಾಗ್ರೇಸರನೆಂದು ಹೆಸರು ಪಡೆಯುವನು. ಅವನು ಮುಂದೆ ವುಡುಸಲಮ್ಮ ಜಾತ್ರೆಯಲ್ಲಿ.. ಹಿಂಗೇ ಕಥಿಯು ಮುಂದೊರೆದು.. ಯೀ ಪುರಾಣಮಂ ಕೇಳ್ದರಿಗೆ ಫಲಾನ ಫಲಾನ ಪುಣ್ಯ ಲಬಿsಸುವುದೆಂಬ ಮಂಗಳಾಚಾರಣೆಯೊಂದಿಗೆ ಮುಕ್ತಾಯವಾಗುತ್ತದೆ.

ಶಾಬಾಲದಲ್ಲಿ ಯಾಲಪಿಯ ಗಮಕ ವರೇಣ್ಯರಾದ ಗೋಯಿಂದಾಚಾರ್ಯ, ಭವಹರಣಾ ಚಾರ್ಯರೀರ್ವರ ಮಧುರ ಕಂಠದಲ್ಲಿ ಯಂಟು ದಿನಗಳ ಪರ್ಯಂತರ ಕರ್ಣ ರಸಾಯನ ವನ್ನು ಸಹಸ್ರಾರು ಮಂದಿಗೆ ನಿಸ್ಸಂಕೋಚವಾಗಿ ವುಣ ಬಡಿಸಿ ವಂಭತ್ತನೇ ದಿವಸಕ್ಕೆ ಕಾಲಿರಿಸಿತು. ಪುರಾಣದ ಮಂಗಳಮಯ ಸಮಾರಂಭಕ್ಕೆ ಆಸೀರ್ವಚನ ನೀಡಲು ಸ್ರೀ ಸ್ರೀ ಆಕಾಸ ರಾಮಣ್ಣಾವಧೂತರೇ ಆಗಮಿಸಿದರೆಂದರ ಹೇಳೋದೇನುಂಟು? ಆರಂಭದಲ್ಲಿ ಪುರಾಣ ಕತ್ರುಗೆ ಪುರಾಣ ತೂಕದ ಬಂಗಾರದ ಗಟ್ಟಿ ಯನ್ನು ಸಮರ್ಪಿಸಿ ಅದ್ದೂರಿ ರೀತಿಯಲ್ಲಿ ಸನು