ಮಾಡಿದನು.
ಅದನ್ನು ಕೇಳಿ ಗ್ರಾಮಗಳ ಯಾವತ್ತು ಮಂದಿ ಅಲ್ಲಾಡಿ ಹೋಯಿತು. ಬೀದಿ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸುವುದೇನೋ ಸರೆ ಸರೆ.. ಕಯ್ಲಾದಷ್ಟು ದೇಣಿಗೆ ನೀಡ ಬೌದು. ಆದರೆ ತಮ ತಮ್ಮ ಮನೆಗಳಿಗೀಗಾಲೇ ಯಿರುವ ಬಾಗಿಲು ಕಿಟಿಕಿಗಳನ್ನು ಪುಟ್ಟಂಪುರ್ತಿ ತೆಗೆಯುವು ದೆಂದರೇನು? ತಮ ತಮ್ಮ ಸುಪರ್ದಿಲಿರುವ ಬೀಗ ಪತ್ತಗಳನ್ನು ಭಕುತಿಪುರ್ವಕವಾಗಿ ಸುಡುಗಾಡಿಗೆ ಸಮರ್ಪಿಸುವುದೆಂದರೆ ಹೆಂಗೆ?.. ಅದೂ ಅಲ್ಲದೆ ಯಿನ್ನೊಂದು ವಾರೊಪ್ಪತ್ತಲ್ಲಿ ಸದರಿ ಗ್ರಾಮದ ಸುಡುಗಾಡು ತನ್ನ ನಯ್ಜ ಕಾರ್ಯ ಚಟುವಟಿಕೆಯನ್ನು ಸ್ಥಗಿತಗೊಳಿಸಲಿರುವುದಂತೆ. ಹೊಸ ಸುಡುಗಾಡು ಅಸ್ತಿತ್ವಕ್ಕೆ ಬರುವ ಮಟ ಯಾರೊಬ್ಬರೂ.. ಸಿವ ಸಿವಾ.. ಯಿದೇನು ತಂದೆಯಪ್ಪಾ ತಮಗೆ?
ಮಂದಿಯ ಕಣ್ಣೀರು ಹಳ್ಳದೋಪಾದಿಯಲ್ಲಿ ಅಮರಾವತಿಯಂತೆ ಕಂಗೊಳಿಸುತಲಿದ್ದ ಸುಡುಗಾಡಿಗೆ ಹರಿದು ಸಾಯಿರದಾಯಂಟು ಸುಡುಗಾಡು ಸಿದ್ದರ ನಡುವೆ ಛದ್ಮ ಯೇಸಧಾರಿ ದೇಯೇಂದ್ರನಂತೆ ಗೋಚರ ಮಾಡುತಲಿದ್ದ ಅವಧೂತನನ್ನು ಕಂಡು “ಯೇನಿದು ಯಚಿತ್ರವು” ಯಂದು ಯಿನ್ನಪ ಮಾಡಿಕೊಂಡಿತು. ಅದಕ ಸಿಲಾ ಮಾನ್ನವನಾದ ಅವಧೂತನು “ನೀವು ನಿಮ ನಿಮ್ಮ ಮನೆಗಳನ್ನು ಆತಮ ಬಲದಿಂದ ಮಾತ್ರಕಾಯಬೇಕೇ ಹೊರತು ಕಿಟಕಿ ಬಾಗಿಲು ಬೀಗಪತ್ತಗಳ ಆಸರೆ ಬಯಸಬಾರದು. ನಿಮ್ಮಲ್ಲಿ ಯಿಂಥ ಆತುಮಬಲವನ್ನು ಸದ್ರುಢಗೊಳಿಸಲಕೆಂದೇ ನಾವು ಯೀ ಯೋಜನೆಯನ್ನು ಹಮ್ಮಿಕೊಂಡಿರುವುದು” ಯಂದು ಹೇಳುವುದೆಂದರೇನು ಸಿವನೇ..?
ಮನಾರ ಕಲೆತ ಧನಕನಕ ವಸ್ತ್ರರಾಸಿಯನ್ನು ಖರ್ಚು ಮಾಡಲಕ ಯಿದ್ದ ದಾರಿಗಳು ವಂದೇ ಯರಡೇ.. ಅವÆಸಯ್ತ ಮನಾರವೇ.. ಹೆಜ್ಜೆ ಹೆಜ್ಜೆಗೊಂದೊಂದು ತೋರಣವು ಮಂಟಪವು.. ನೂರೆಂಟು ಚುಕ್ಕಿಗಳ ರಂಗವಲ್ಲಿಯು.. ಯಾರ್ಯಾರು ಯೇನೇನು ಮಾಡಬೇಕೋ.. ಅದನು ಅವರೇ ಮಾಡಲಕ ಬೇಕು.. ಫಲಾನ ದಿವಸಕ್ಕ ಸರಿಯಾಗಿ, ಫಲಾ ಯೇಳೆಗೆ ಸರಿಯಾಗಿ ಸ್ರೀ ಸ್ರೀ ಆಕಾಸ ರಾಮಣ್ಣಾವಧೂತರು ಅಲ್ಲೇ ಬರುತಾರೆಂದರೆ ಯಿಲ್ಲೇ ಭಾರಿಸ ತೊಡಗಿದ ಡೊಳ್ಳುಗಳೇನು? ತಮಟೆ ತಪ್ಪಡಿಗಳೇನು? ಸನ್ನಾಯಿಗಳೇನು? ಸಿವಸಂಕರ ಮಾದೇವಾ.. ಪ್ರತಿಯೊಬ್ಬರ ಪಂಚೇಂದ್ರಿಯಗಳಿಗೆ ಹಬ್ಬಮೋ ಹಬ್ಬ ಸಿವನೇ.. ಕಾಡು ನಾಡೊಳಗೋ? ನಾಡು ಕಾಡೊಳಗೋ.. ಹಾವುಗಳ