ವಿಷಯಕ್ಕೆ ಹೋಗು

ಪುಟ:Aramane.pdf/೬೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩೮

ಅರಮನೆ

ದೇವಾಲಯದೊಳಗೆ ತನ್ನನ್ನು ಯಚ್ಚರಿಸುವವರ ಸಲುವಾಗಿ ಕಾಯುತ್ತ ಮಲಗೇ ಯಿರುವ ಸ್ರೀರಂಗನಾಥ. ನೂರಾರು ಮುಗ್ದರ ಮರಣ ದಂಡನೆಗೆ ಮಾಧ್ಯಮವಾಗಿದ್ದ ಹಾದಿ ಯಿಕ್ಕೆಲದಲ್ಲಿ ಸಾಲು ಸಾಲು ಮರಗಳು.. ಯುದ್ದದ ನೆನಪುಗಳನ್ನು ಮೆಲುಕು ಹಾಕುತ್ತಿರುವ ಜನ ಅಗೋ ಅಲ್ಲಿ.. ಯಿಗೋ ಯಿಲ್ಲಿ. ಕಣ್ಣಾರೆ ಯುದ್ದವನ್ನು ನೋಡಿದ ಪರಿಣಾಮವಾಗಿ ಹುಚ್ಚರಾಗಿರುವ ಜನ ಅಗೋ ಅಲ್ಲಿ.. ಯಿಗೋ ಯಿಲ್ಲಿ.. ಸತ್ತು ಗೆದ್ದ ಟಿಪ್ಪು ಅಗೋ ಅಲ್ಲಿ? ಯಿಗೋ ಯಿಲ್ಲಿ.. ತನ್ನನ್ನು ಗುರುತಿಸಲು? ಗುರುತಿಸಿ ಕೊರಳಪಟ್ಟಿ ಹಿಡಿಯಲು, ಹಿಡಿದು ತನ್ನ ಕಪಾಳಕ್ಕೆ ನಾಲ್ಕು ಭಾರಿಸಲು, ಭಾರಿಸಿ ತನ್ನ ಮುಖಕ್ಕೆ ವುಗಿಯಲು, ವುಗಿದು ನಿನ್ನಂಥೋರು ಸುಖವಾಗಿರಧಂಗ ಸ್ರೀರಂಗನಾಥನೇ ನೋಡ್ಕೋತಾನೆ.. ಯಂದು ಛೀಮಾರಿ ಹಾಕಲೋಸುಗ ಕಾಯುತ್ತಿರುವವರು ಅಗೋ ಅಲ್ಲಿ? ಯಿಗೋ ಯಿಲ್ಲಿ.. ನೀವೆಲ್ಲ ಪೊಂಟೀಸ್ ಪಯ್ಲೇಟನ ವಾರಸುದಾರರು ಯಂದು ಸಾರಿಸಾರಿ ಹೇಳುತ್ತಿರುವ ಕರುಣಾಮಯಿ ಮೇರಿಯಮ್ಮ ಅಗೋ ಅಲ್ಲಿ.. ಯಿಗೋ ಯಿಲ್ಲಿ...ತನ್ನ ದೇಹದಿಂದ ಯಿಂಡಿಯಾದ ನೆತ್ತರನ್ನು ಹನಿಯುತ್ತಿರುವ ಗಾಯಸ್ಥ ಯೇಸುಪ್ರಭುನ ದೇಹ ಅಗೋ ಅಲ್ಲಿ.. ಯಿಗೋ ಯಿಲ್ಲಿ.. ಗೋಲ್ಗೊಥಾ ಬೆಟ್ಟಗಳು ಅಗೋ ಅಲ್ಲಿ. ಯಿಗೋ ಯಿಲ್ಲಿ....

ವಾಸಿಯಾಗದ ಸಹಸ್ರಸಹಸ್ರಗಾಯಗಳ ಆಭರಣಗಳನ್ನು ಧರಿಸಿರುವುದು ಸ್ರೀರಂಗಪಟ್ಟಣವಲ್ಲ.. ಬೆಥ್ಲೆಂ, ಜೆರೊಸೆಲೇಂ.. ಬಯ್ಬಲ್.. ಹೆಜ್ಜೆ ಹೆಜ್ಜೆಗೆ ಕತ್ತು ಹಿಡಿದು ನೂಕುತ್ತಿರುವಂಥ ಅನುಭವವಾಗಲು ಥಾಮಸ್ ಮನ್ರೋ ತನ್ನ ಬಿಡಾರಕ್ಕೆ ಆಗಮಿಸಿದ. ಯೇಸು ಪ್ರಭುವಿನ ಮೂರ್ತಿಯದುರು ದೀಪ ಬೆಳೆಗಿಸಿ ಯಷ್ಟೋ ಹೊತ್ತಿನವರೆಗೆ ಮಂಡಿ ವೂರಿ ಕುಳಿತೇಯಿದ್ದ. ಕೊನೆಗೆ ಯೇನನ್ನು ತಾನು ನಿವೇದಿಸಿಕೊಂಡನೆಂದರೆ “ಮಹಾಪ್ರಭು.. ನನ್ನನ್ನು ನೀನು ಕ್ಷಮಿಸಬಹುದಿತ್ತಲ್ಲವೆ..”

ತಾನು ಡುಬಾಯಿಸ್ರವರನ್ನು ಕಾಣಬೇಕೆಂದು ನಿರ್ದರಿಸಿ ಗಂಜಾಂ ಕಡೆ ನಡೆದ. ಹಾದಿಯ ಯಡ ಬದಿಯಲ್ಲಿದ್ದ ಯಿಗರ್ಜಿಯಲ್ಲಿ ಫಾದರ್ ಯಿರಲಿಲ್ಲ. ಸಿಡುಬು ಕಾಯಿಲೆ ಪೀಡಿತರಿಗೆ ಚುಚ್ಚುಮದ್ದು ಹಾಕಿಸಲು ಪಕ್ಕದ ಹಂಗರವಳ್ಳಿಗೆ ಹೋಗಿರುವುದಾಗಿ ಪರಿಚಾರಕ ಹೇಳಿದ. ಯಿಗರ್ಜಿಯ ಆವರಣದಲ್ಲಿದ್ದ ಅನಾಥ ಮಕ್ಕಳ ಶಾಲೆಗೆ ಭೆಟ್ಟಿ ನೀಡಿದನು.

ಅತ್ತ ಕುಂದುರ್ಪಿ ವೆಲ್ದುರ್ತಿಗಳ ವಳಿತದಲ್ಲಿದ್ದ ಸುಡುಗಾಡಿನೊಳಗೆ ಬಾದಾಮಿ,