ವಿಷಯಕ್ಕೆ ಹೋಗು

ಪುಟ:Aramane.pdf/೬೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪೨

ಅರಮನೆ

ಸಂತಾಪ ಪ್ರಾಪ್ತಿಗಾಗಿ ತೀರ್ಥಯಾತ್ರೆಮಾಡಿದರು.. ಮುಕ್ಕೋಟಿ ದೇವತೆಗಳಿಗೆ ಹರಕೆ ಹೊತ್ತರು, ಆದರೆ ದೇವರು ಸಂತಾನ ಕರುಣಿಸಲಿಲ್ಲ.. ವರುಷೊಪ್ಪತ್ತೊಳಗೆ ಅವರು ಗೋರಖನಾಥ ಸಂಕಥಾಸ್ರವಣಕ್ಕೆಂದು ಬಂದು ಯೇಳು ದಿವಸಗಳ ಕಾಲ ಯಿಲ್ಲಿದ್ದರು. ನಿನಗೆ ಗೊತ್ತುಂಟೋ ಯಿಲ್ಲಮೋ ನಿನ್ನ ತಾಯಿ ಕಯ್ಯನ ತೊಳಕೊಂಡು ಮುಟ್ಟುವಂತಿದ್ದಳು.. ಅದೆಲ್ಲ ನೆನಪಿಸಿಕೊಂಡರೆ..! ಯಿರಲಿ.. ಅದೆಲ್ಲ ಯಾಕೀಗ.. ಗರುಭವತಿಯಾದಳು.. ನವ ಮಾಸ ತುಂಬಿದ ಮ್ಯಾಲೆ ನೀನು ಜೆನಿಸಿದಿ.. ನೀನು ಜನಿಸಿದ್ದು ಹೇವಳಂಬಿ ನಾಮ ಸಂವತ್ಸರ ಕಾರ್ತೀ ಸುದ್ದ ತ್ರಯೋದಸೀ ಗುರುವಾರ ರಾತ್ರಿಶತತಾರ ನಕ್ಷತ್ರದಲ್ಲಿ ಅವುದೋ.. ಅಲ್ಲಮೋ.. ಅವುದು ಮಹಾಮುನಿ ಅವುದು.. ನಿನ್ನ ಹಸ್ತಗಳಲ್ಲಿ ವಿದ್ಯಾರೇಖೆ ವೂರುದ್ವ ಮುಖವಾಗಿ ಹರಡಿದೆ ಅವುದೋ ಅಲ್ಲಮೋ.. ಅವುದು ಸ್ವಾಮಿ ಅವುದು.. ನಿನ್ನ ಹಸ್ತಗಳಲ್ಲಿ ಯಂಟು ಶಂಖ ಯರಡು ಚಕ್ರಗಳಿವೆ ಅವುದೋ ಅಲ್ಲಮೋ.. ಅವುದು ಸ್ವಾಮೀ ಅವುದು.. ನಮ್ಮ ಅಮುಸ ನಿನ್ನಲ್ಲಿರುವ ಪರಿಣಾಮದಿಂದಾಗಿ ನಿನಗೆ ಸರಸೊತಿಯ ವಲುಮೆ ಆಯಿತು.. ನೀನು ಅತಿಚಿಕ್ಕವಯಸ್ಸಿನಲ್ಲಿಯೇ ಪುರಾಣ ಕಾವ್ಯಗಳನ್ನು ರಚಿಸಿದಿ.. ಅವುಗಳನ್ನು ಜಗಳೂರು ಕೆಂಜೆಡೆಪ್ಪನಾಯಕ, ಮಾಗಾಣಿಯ ಮುದ್ದಪ್ಪನಾಯಕ, ಕಂಚುಗಾರುಬೆಳಗಲ್ಲಿನ ಸಿದ್ದೀರನಾಯಕರ ಬಳಿ ವಾಚನ ಮಾಡಿ ಬಿರುದು ಪಾರಿತೋಷಕಗಳನ್ನು ಪಡಕೊಂಡಿ, ಅವುದೋ ಅಲ್ಲಮೋ.. ಅವುದು ಮುನಿವರೇಣ್ಯನೇ ಅವುದು.. ಅವುಗಳ ರಚನೆಗೆ ಕಾರಣ ಕತ್ರುಯಾರೆಂದು ತಿಳಿದಿರುವಿ? ನಾವೇ ಅವರು ನಿನಗೆ ಬಿರುದು ಪಾರಿತೋಷಕಗಳನ್ನು ನೀಡುವಂತೆ ಮಾಡಿದ್ದು ನಾವೇ ಹ್ಹಾ.. ಅವುದಾ.. ಸರಣು ಸರಣಾರ್ಥಿ ಮಹಾಸ್ವಾಮಿ.. ಫಲಾನ ವೂರನ್ನು ತಲುಪಲಕ ಕಾರಣರೂ ಚೋರ ಚೋರೇಸ್ವರ ಪುರಾಣ ರಚನೆಗೆ ಕಾರಣರೂ.. ಗವುಡ ಬಂಗಾರದ ಗಟ್ಟಿ ಕೊಡಲಕ ಕಾರಣರೂ.. ಯಾರೂ ಕದಿಯದಂಗೆ ಮಾಡಿದ್ದಕ್ಕೆ ಕಾರಣರೂ.. ಕನ್ಯೆ ಯಂಬ ತುಪ್ಪವನ್ನು ನಿನ್ನ ಮೂಗಿನ ತುದಿಗೆ ಅಂಟಿಸಿದವರೂ.. ನೀನೀವೂರಿಗೆ ಬರುವುದಕ್ಕೆ ಕಾರಣರೂ.. ನೀನು ನಿದ್ದೆ ಮಾಡುವುದಕ ಕಾರಣರೂ, ನಿದ್ದೆಯೊಳಗೆ ಕನಸು ಮೂಡುವುದಕ ಕಾರಣರೂ, ಯಲ್ಲಾದಕೂ ನಾವೇ ಕಾರಣರು.. ವತ್ಸಾ.. ನಾವೇ ಕಾರಣರು.. ಮುನಿಗಳು ನಿಟ್ಟುಸಿರುಬಿಟ್ಟರು.

ಆ ಯಲ್ಲ ತನ್ನ ಪುರುವಾಪರ ಕೇಳಿ ಮಾಕವಿಯು ಕಲ್ಲಾವುಲ್ಲಿಯಾಗಿ