೬೪೪
ಅರಮನೆ
ನಿಷವಿರವಾಗಿ ಹೆಳಿಬಿಟ್ಟರು.. ಆಗ ನಾವು ಸಾವು ನಿಶ್ಚಿತಯಂದು ಭಾವಿಸಿದೆವು. ತಮ್ಮ ಗರ್ಭದಾನದಿಂದ ಜೆನಿಸಿ ಪ್ರವರ್ಧಮಾನಕ್ಕೆ ಬಂದಿರುವ ನಮ್ಮ ಅವುರಸ ಪುತ್ರನನ್ನು ಮಠದ ವುತ್ತರಾದಿsಕಾರಿಯನ್ನಾಗಿ ನೇಮಕ ಮಾಡುವುದಕ್ಕೆ ಅನುಮತಿ ದಯಪಾಲಿಸಿದಲ್ಲಿ ತಾವು ದೇಹ ತ್ಯಾಗಕ್ಕೆ ಸಿದ್ದ ಯಂದು ಕೇಳಿಕೊಂಡೆವು.. ಅದಕ್ಕೆ ಅವರೂ ವಿದ್ಯಕ್ತವಾಗಿ ಸಮ್ಮತಿಸಿದರು.. ತದನಂತರ ನಮ್ಮನ್ನು ಕಚ್ಚಿಕೊಂದು ಯಿಹಲೋಕದಿಂದ ಮುಕ್ತಿಗೊಳಿಸಿದರು.. ಯೀ ಘಟನೆ ನಡೆದು ಸುಮಾರು ದಿವಸಗಳಾದವು ಮಗನೇ, ನಾನು ನಿನ್ನ ಕಯ್ಯಿ ಹಿಡಿದು ನಡೆಸುತಾಯಿದ್ದು ನೀನು ಯಿಲ್ಲಿಗೆ ತಲುಪುವುದನು ಕಾಯುತ ಲಿದ್ದೆನು. ನಿನ್ನ ನೋಡಿದಾಕ್ಷಣ ವಿಂದ್ಯಾ ಪರುವತದ ತುದಿಯಿಂದ ಯಿಳಿದು ಬಂದು ಬಿಟ್ಟೆನು. ಯೀಗ ನೀನು ಯೀ ಭವ್ಯಪರಂಪರೆಯುಳ್ಳ ನಾಥ ಪೀಠದ ಸ್ವಾಮಿಯಾಗಬೇಕು.. ಯಿದಕ ನೀನು ಸಮ್ಮತಿಸು ವತ್ಸಾ..
ಮಾಕವಿ ಮಾಮುನಿಗಳ ಮಾತು ಕೇಳಿ ಅಳ್ಳಾಡಿ ಹೋದನು. ಗ್ರುಹಸ್ಥಾಶ್ರಮದ ಕನಸು ಭಗ್ನ ಗೊಂಡಿತಲ್ಲಾ ಯಂದು ಹಲುಬಿದನು. ತನ್ನ ಜನನದ ಪುರುವಾಪರ ಸಂತೋಷ ಪಡುವಂಥದ್ದೋ.. ದುಕ್ಕಪಡುವಂಥದ್ದೋ....
“ಗುರುವೆಂದರೂ ನೀವೇ.. ತಂದೆಯಂತೂ ನೀವೇ.. ನೀವು ಅಪ್ಪಣೆ ಕೊಡಿಸಿದ್ದು ಕೇಳಿಸಿಕೊಂಡ ಮ್ಯಾಲಕ ನನ್ನ ಮ್ಯಾಲ ನನಗ ಸ್ವಾಸಂತ್ರಯಿಲ್ಲವೆಂಬುದರ ಅರಿವಾಯಿತು.. ದಯವ ನಿಯಾಮಕ ಯಂದ ಮ್ಯಾಲ ನಾನು ಯೀ ಪೀಠದ ಸ್ವಾಮಿ ಪದವಿಗೆ ಯೇರಲಕ ಸಿದ್ಧನಿರುವೆನು.. ಆದರ ಅಸರೀರ ಸ್ಥಿತಿಯಲ್ಲಿರುವ ತಾವು ನನ್ನ ಪೀಠಾರೋಹಣ ಮಹೋತ್ಸವವನ್ನು ಹೇಗೆ ನಡೆಸಿಕೊಡುವಿರಿ ತಂದೆಯೇ”
“ಅದರ ಚಿಂತೇನ ನೀನು ಮಾಡಬ್ಯಾಡ.. ಯೀಗ ನಾನು ನಿನ್ನ ಕನಸಲ್ಲಿ ಮೂಡಿ ಸಂಭಾಷಿಸುತ್ತಿರುವ ರೀತಿಯಲ್ಲಿಯೇ ಮಾನ್ಯರ ಮಸಲವಾಡದ ಸಮಸ್ತ ಹಿರೀಕ ಕಿರೀಕರ, ಪೋಷಕ ಸ್ಥಾನದಲ್ಲಿರುವ ಸಾಮಂತ ಮಾಂಡಲೀಕರ ಕನಸುಗಳಲ್ಲಿ ಸಹ..” ಮಾಕವಿ ತಾವು ಕನಸ ಕಂಡು ಮುಗಿಸಿದ್ದಾಗಲೀ.. ಯಚ್ಚರದ ಸ್ಥಿತಿಯಲ್ಲಿ ಚಿನ್ನದ ಗಟ್ಟಿಯನ್ನು ಮುಟ್ಟಿ ನೋಡಿಕೊಂಡದ್ದಾಗಲೀ.. ತನ್ನೊಳಗ ಬಹುವಚನದ ಪ್ರಕ್ರಿಯೆ ನಡೆಯುತ್ತಿರುವುದಾಗಲೀ.. ತಾನು ತನ್ನ ಹೆಸರಿನ ನಮೂನಿಗಳನ್ನು, ನಾಮವಾಚಕಗಳನ್ನು, ಭೂತಕಾಲದ ನೆನಪಿನ ಭ್ರೂಣಗಳನ್ನು ಭಾಗಶಃ