೬೪೭
ಅರಮನೆ
ಯಂದು ಹವಾಮಾನ ತಗ್ನರು ನೀಡಿದ ಸಲಹೆಯನ್ನು ಕೇಳಿಸಿಕೊಳ್ಳುತ್ತಲೇ ಕೆಳಗಿಳಿದು ಅವರಿವರತ್ತ ಮುಗುಳು ನಗೆ ಚೆಲ್ಲುತ್ತ, ಜನಗಡಣದತ್ತ ಕಯ್ನೆತ್ತಿ ಬೀಸುತ್ತ, ಸ್ಪೋನ್, ವಾಟರ್, ವಿಂಡ್ ಮುಂತಾದವರಿಗೆ ಸೇಕೆಂಡು ಕೊಡುತ್ತ, ಬೊಕ್ಕೆಗಳನ್ನು ಪಡೆಯುತ್ತ.. ನಿಸ್ತೇಜರಿಗೆ ಯಿಲೇವಾರಿ ಮಾಡುತ್ತ ಹೆಜ್ಜೆ ಹೆಜ್ಜೆಗೊಂದೊಂದು ಸಲಕ್ಕ ಯಡಕ ಬಲಕ ನೋಡುತ್ತ.. ವಬ್ಬೊಬ್ಬರ ಮುಖಗಳನ್ನು ಸಿಮ್ಮಾವ ಲೋಕಿಸುವುದರೊಂದಿಗೆ ಅವರವರ ಕಡತಗಳನ್ನು ನೆನಪು ಮಾಡಿಕೊಳ್ಳುತ್ತ.. ನೆನಪಿಸಿಕೊಡುತ್ತ.. ಹಲವರ ಯದೆಗಳೊಳಗಿಳಿಯುತ್ತ.. ಹಲವರಯದೆಗಳಿಂದ ಹೊರ ಬರುತ್ತ.. ಅಂಜಿಕೊಂಡವರ ಬಳಿ ಸಾರ್ದು ಕ್ಷೇಮಲಾಭ ಯಿಚಾರಿಸುತ್ತ ತಾಯಂದಿರ ಕಂಕುಳೊಳಗಿದ್ದ ಕಜ್ಜಿ ಪುಳ್ಳೆ ಕಂದಮ್ಮಗಳನ್ನು ಯತ್ತಿಕೊಂಡು ಮುದ್ದಾಡುತ್ತ.. ದಿಸೀಜ್ ಥಾಮಸ್ ಮನ್ರೋ ಯಂದು ಮನವರಿಕೆ ಮಾಡಿಕೊಡುತ್ತ.. ಹುವ್ವಿನೊಂದಿಗೆ ಮಕ್ಕಳನ್ನು ಹತ್ತಿರ ಕರೆಯುತ್ತ.. ತನ್ನೊಂದಿಗೆ ಹೆಜ್ಜೆ ಹಾಕಿರೆಂದು ಹೇಳುತ್ತ..
ಬಂಗಲೆ ಸೇರಿಕೊಂಡೊಡನೆ ತನ್ನ ಸರೀರ ಸವುಖ್ಯ ನೋಡಿಕೊಂಬದೆ ಥಾಮಸು ಮನ್ರೋನು ಕಡತಗಳ ಗುಡ್ಡವನ್ನು ಯದುರಿಗೆ ಯಳಕೊಂಡು ದಸಗತ್ತು ಮಾಡುತ ಯಿಲೇವಾರಿ ಮಾಡಿದನು. ಯರಡು ಮಯ್ಲುದ್ದ ನಿಂತುಕೊಂಡಿದ್ದ ಪ್ರಜೆಗಳ ಸಂಕಟ ಕಷ್ಟಗಳನ್ನಾಲಿಸಿ ವಬ್ಬೊಬ್ಬರಿಗೂ ವಂದೊಂದು ಕ್ರಮ ಕಯ್ಯಕೊಂಡನು. ತನ್ನೊಳಗೆ ದುಬಾಯಿಸು ಕಾರ್ಯಪ್ರವುರುತ್ತರಾಗಿದ್ದ ಕಾರಣಕ್ಕೆ ಅಗತ್ಯಕ್ಕಿಂತ ಕಡಿಮೆ ಅಲಂಕರಿಸಿಕೊಂಡು ಕುದುರೆ ಹೋಗುವ ಕಡೇಕ ಕುದುರೆ ಮ್ಯಾಲೂ.. ನಡಕೊಂಡೇ ಹೋಗುವ ಕಡೇಕ ನಡದುಕೊಂಡೇ ಹೋಗುತ ಸಂಚಲನ ಸ್ರುಷಿವಿ ಮಾಡಿದನು. ರಾತರಿ ಮಲಗಿರುವಾಗ ಯಾಕೋ ವಂದರ ಮ್ಯಾಲ ವಂದರಂತೆ ಕಣಸುಗಳನು ಕಾಣಲಾರಂಭಿಸಿದನು.. ಅದ್ಯಾವ ಸೀಮೆ ಪಟ್ಟಣಗಳೋ.. ಸೌಧಗಳೋ.. ಜನಗಳೋ.. ಅದಾವುದೂ ಲವುಕಿಕಕ್ಕ ಸಂಬಂಧಿಸಿಧಂಗಿಲ್ಲ.. ಅನುಭವಕ್ಕ ನಿಲುಕುವಂತಂದ್ದಿದ್ದಂಗಿಲ್ಲ.. ಅದೆಲ್ಲವುಗಳ.. ಅವರೆಲ್ಲರ ನಡೂಲಕಿಂದ ಮುತ್ತಯಿದೆಯೋರ್ವಳು ನಡಕೋತ ನಡಕೋತ ತನ್ನ ಕಡೀಕೆ ಬರುತಾ ಅವಳೆ.. ಯಲ್ಲಾರಿಗಿಂತ ಯತ್ತರಕವಳೆ.. ಮುಂಗಾಲಿಗೆ ಕಡಗ.. ಬೆರಳುಗಳಿಗೆ ವುಂಗುರಗಳ ತೊಟ್ಟವಳೆ.. ಹಸಿರು ಸೀರೆ ವುಟ್ಟವಳೆ.. ಹಸಿರು ಕುಬುಸ ತೊಟ್ಟವಳೆ.. ಕೊರಳೊಳಗೆ ತರಾವರಿ ಸರಗಳನ ಧರಿಸವಳೆ.. ದವಡೆಯೊಳಗೆ ತೊಂಬಲದುಂಡೆಯನ್ನಿಟ್ಟವಳೆ.. ಕೆಂಪಾನ ತುಟಿ ಮ್ಯಾಲ