೬೪೯
ಅರಮನೆ
ಯೀ ಸಪ್ತಾಕ್ಷರಿ ಮಂತ್ರವು ಕಣ್ಣು ತೊಳಕೊಂಡು ನೋಡುವಂಗಯ್ತೆ, ಕಯ್ನ ಗಂಗಾ ಜಲದಿಂದ ತೊಳಕೊಂಡು ಮುಟ್ಟುವಂಗಯ್ತೆ, ಯಿದನು ನುಡಿವ ನಾಲಗೆ ಸುದ್ದ ಆಗತಯ್ತೆ.. ಕೇಳುವ ಕಿವಿಯು ಪಾವನ ಆಗ ತಯ್ತೆ.. ಯೀ ಮಂತ್ರವನ್ನು ಯುಗ ಯುಗಗಳಿಂದ ಭೂಚರ ಖಚರ ಖೇಚರಾದಿಯಾಗಿ ಯಾರೊಬ್ಬರೂ ತ್ರಿಕರ್ಣಪುರ್ವಕವಾಗಿ ಆಚರಣೆಗೆ ತಂದಿಲ್ಲ.. ಯಂಥೆಂಥ ರುಷಿಗಳನ್ನೆ ಯಿದು ಬಕಬೋರಲು ಕೆಡವಯ್ತೆ. ಆದರ ಯೀ ಕಲಿಯುಗದಲ್ಲಿ ಸಾಂಬವಿಯ ಮಾನಸಪುತ್ರನಾದ ಸಾಂಬಂiÀÄ್ಯನಿಗೆ ಯೀ ಅನರಘ್ಯ ಮಂತ್ರದ ವಲುಮೆಯಾಗಿರುವುದು. ಯೀರೇಳು ಲೋಕದೊಳಗಿರುವ ತ್ರಿಪುರ ಸುಂದರಿಯರು ಬೇಕು ಬೇಕಾದಂಗ ಪರೀಕ್ಷೆ ಮಾಡಿಕೊಳ್ಳಲೀ.. ಹೋಗಿ ಸಾರೀರಿಯಂದು ಯಿನ್ನಪ ಮಾಡಿಕೊಳ್ಳಲು..
ಆ ಅಂಚೆ ಕಾರ್ಯಕರ್ತರು, ಸುದ್ದಿ ಮಾಧ್ಯಮಗಳು ಹಿರಿ ಹಿರಿ ಹಿಗ್ಗಿ ತಮಗೆಂಗ ತೋಚುವುದೋ ಹಂಗ ಹಂಗೆ ಹರಕೋತ ಹರಕೋತ ಛಪ್ಪನ್ನಾರು ದೇಸಗಳ ತುಂಬೆಲ್ಲ ಹರಡಲು, ಹೆಣ್ತನದ ಮಯ್ಯಿತುಂಬ ತಾಯ್ತನವು, ಸೋದರತ್ವ ಭಾವವು ಪಾರಿಜಾತ ಪುಷ್ಪದೋಪಾದಿಯಲ್ಲಿ ಅರಳಲು ತಂಗಿ, ಅಕ್ಕ, ತಾಯೇ, ದೊಡ್ಡಮ್ಮ, ಚಿಕ್ಕಮ್ಮ ಯಂಬೀವೇ ಮೊದಲಾದ ಬ್ರಾತ್ರುತ್ವ ಸಂಬಂಧೀ ಸಬುಧಗಳು ಯಲ್ಲರೆದೆಯೊಳಗೆ ಥಳಥಳ ಹೊಳೆಯತೊಡಗಿದವು. ಯಾರೋ ನಮ್ಮನ್ನು ಅಕ್ಕಾ ಯಂದು ಕರೆದಂಗಾಗತಯ್ತಾಲ್ಲಾ ಯಂದು ಅಕ್ಕಂದಿರು.. ಯಾರೋ ತಮ್ಮನ್ನು ತಂಗೀ ಯಂದು ಕರದಂಗಾತಯ್ತಲ್ಲಾ ಯಂದು ತಂಗಿಯಂದಿರು.. ಯಾರೋ ತಮ್ಮನ್ನು ತಾಯೇ ಯಂದು ಕೂಗಿಧಂಗಾತಯ್ತಲ್ಲಾ.. ಯಾರೋ ತಮ್ಮನ್ನು ದೊಡ್ಡಮ್ಮ, ಸಣ್ಣಮ್ಮ ಯಂದು ಕರೆದಂಗಾತಯ್ತಲ್ಲಾ.. ಅಂದು ಅಂದುಕೊಳ್ಳುತ.. ನೋಡಿ, ನೋಡಿಕೊಳ್ಳುತ.. ಕೇಳಿ, ಕೇಳಿಕೊಳ್ಳುತ.. ಆಡಿ, ಆಡಿಕೊಳ್ಳುತ.. ತಮ ತವರೂರು ಯಿಲ್ಲೆಲ್ಲೋ ಯಿದ್ದಂಗಯ್ತಲ್ಲಾ.. ಅದಿರಬೌದೇನು ತಮ್ಮ ತವರೂರು.. ಯಿದಿರಭೌದೇನು ತಮ್ಮ ತವರುಮನೆಯು.. ಯೀ ಪ್ರಕಾರವಾಗಿ ಹುಡುಕಾಡತೊಡಗಿದ.. ಬೆದಕಾಡತೊಡಗಿದ ಛಪ್ಪನ್ನಾರು ದೇಸಗಳ ಹೆಣ್ಣು ಮಕ್ಕಳ ಸಡಗರವನ ಯೇನೆಂದು ಹೇಳಲಿ ಸಿವನೇ? ತಾವು ಹುಟ್ಟಿರುವ ಮನೆ ತಮ್ಮ ತವರಲ್ಲ.. ತಾವು ಹುಟ್ಟಿರುವ ವÆರು ತಮ್ಮ ತವರೂರಲ್ಲ.. ಅಲ್ಲೆಲ್ಲ ಅಕ್ಕ ತಂಗಿ ಯಂಬ ಸಬುದಗಳು ಅಣ್ಣ ತಮ್ಮಂದಿರ ಬಾಯೊಳಗ ನುಸಿದೂ ನುಸಿದು ಸವಕಲುಗೊಂಡವೆ. ಪುಂಪುರುಸರ