೬೫೭
ಅರಮನೆ
ಬಣವೆಗಳನು ಸುಟು ಸುಟ್ಟು ಭಸುಮ ಮಾಡು ಸಿವನೇ.. ತಾಸೊಪ್ಪತ್ತೊಳಗ ನೂರು ವರುಷದ ಅಳುವನ್ನು ತಾವು ಅತ್ತೇ ಬಿಡಬೇಕೆಂದು ನಿರ್ಧಾರ ಮಾಡಿದವರೆಷ್ಟೋ....
ಕಣ್ಣೀರಿನಿಂದ ತೊಯ್ದು ಪಟ್ಟಣದ ನೆಲವೆಲ್ಲ ವಜ್ಜುವಜ್ಜಲಾತು.. ಯಲ್ಲಿ ನೋಡಿದರೂ ಕಚಕ್ ಪಿಚಕ್.. ಯಲ್ಲಿ ಯಿವೀಸು, ಅವೀಸು ಮಂದಿ ಸೇರಿಕೊಂಡು ತಮ್ಮ ಸೊಸೆ ಮುದ್ದೆಯ ಕಳೇಬರವನ್ನು ಹರಕೊಂಡು ತಿಂದು ಬಿಡುವರೋ ಯಂದು ಅರಮನೆಗೆ ಅರಮನೆಯೇ ಹೆದರಿಕೊಂತು.. ಗೋಣಿಯ ನೇತ್ರುತ್ವದಲ್ಲಿ ಗರಡಿಯ ಸಾವುರಾರು ಹುಡುರು ಸೊಯಂ ಸಯ್ನಿಕರೋಪಾದಿಯಲ್ಲಿ ಅರಮನೆಗೆ ಕಾವಲು ನಿಂತದ್ದು ಯಾವ ಜಲುಮದ ರುಣಮೋ....
ಯಪ್ಪಾ.. ನನ ಹೆಂಡತಿ ಸತ್ತಿಲ್ಲ.. ಸತ್ತವಳಂಗ ನಾಟಕ ಆಡುತಲಯ್ದಾಳ.. ಆಕೆ ಮಾತನ ನಂಬ ಬ್ಯಾಡೂರಿ.. ಯಂದು ಅಯ್ಲುಗೇಡಿ ಹಾಂಗ ಆಡುತಲಿದ್ದ ಕಲಿಯೀರ ನಾಯಕನಿಗೇನಾರ ಆದರ ಡಣಾಪುರ ಸಮುಸ್ಥಾನವನ ಕಾಪಾಡುವರು ಯಾರು ಸಿವನೇ?... ಕಳೇಬರಕ ಜಳಕ ಮಾಡಿಸುವಾಗ ಬಯ್ಯಮ್ಮ, ಬತ್ತಲಮ್ಮ ಮೊದಲಾದೋರು ಹುಚ್ಚು ಹಿಡಿದು ಪರ ಪರ ತಲೆಕೆದರಿಕೊಳ್ಳುತ್ತ ಹೊಂಟೋಗಿ ಬಿಟ್ಟರು.. ಕಳೇಬರಕ್ಕ ಪಟ್ಟೆ ಪಿತಾಂಬ ಸೀರೆ ವುಡಿಸುವಾಗ.. ರಂಗವ್ವ, ರಿಂದವ್ವ ಮರವ್ವರೇ ಮೊದಲಾದೋರು ಅಯ್ಯೋ ಯಂದು ಚೀರಿ ಕೆಳಗಣ್ಣು ಮೇಲುಗಣ್ಣು ಮಾಡುತ ನೆಲಕ್ಕೊರಗಿ ಬಿಟ್ಟರು.. ಯಿಲಕಲ್ಲಿನ ಜರೆ ಅಂಚಿನ ಕುಬುಸ ತೊಡಿಸುವಾಗ.. ಚುಚೀಲ, ರುಕ್ಕುಮಿಣಿ, ಚಿಂತಾಮಣಿಯರೇ ಮೊದಲಾದೋರು ಯದೆಯದೆ ಬಡಕೊಳುತ ವುರುಳಾಡ ತೊಡಗಿದರು.. ವಂಕಿ, ಮುರುವು, ವಡ್ಯಾಣ ಯಿವೇ ಮೊದಲಾದ ಆಭರಣ ತೊಡಿಸುವಾಗ.. ತಲೆಗೂದಲು ಬಾಚಿ ತುರುಬುಕಟ್ಟಿ ನಾಗರ ಮುಡಿಸುವಾಗ.. ಕಳೇಬರವನು ಮುತ್ತಿನ ಮಂಟಪದೊಳಗ ಕುಂಡರಿಸುವಾಗ, ಪುಜೆ ಮಾಡುವಾಗ, ಆರತಿ ಬೆಳಗುವಾಗ.. ಯತ್ತುವಾಗ.. ತಲೆಕೆಟ್ಟು ಕಲ್ಲಾವುಲ್ಲಿಗೊಂಡವರು ವಬ್ಬರಾ.. ಯಿಬ್ಬರಾ ಸಿವನೇ...
ಯಾಲಪಿ, ಸಿರುವಾರ, ಕಗ್ಗಲ್ಲು, ಗೋಟೂರು ಕಡೇಲಿಂದ ಬೊಮ್ಮಕ್ಕ, ಪಾತವ್ವ, ಗಾದಿರವ್ವ, ಡೆಮರುಗವ್ವರು ತಲಾ ಹದಿನಯ್ದದಿನಯ್ದು ಮಂದಿ ನುರಿತ ಕಲಾವಿದೆಯರ ತಂಡದೊಡನೆ ಸೊಯಂ ಪ್ರೇರಿ ತರಾಗಿ ಹಾಡ್ಯಾಡಿ ಅಳಲಕೆಂದೇ ಬಂದದ್ದು ಚಿನ್ನಾಸಾನಿಯ ಯೇಳೇಳು ಜಲುಮಗಳ ಪುಣ್ಯವೇ ಸರಿ. ಯಿವರು