ಅರಮನೆ
೬೭೧
ಹಿಂಗೇ ಯಿರುತ್ತಿರಲಾಗಿ ಮುಂದೊಂದಿವಸ ಆ ಕೂಸು ನಾಪತ್ತೆಯಾಗಿ ಬಿಟ್ಟು ತನಗಿಟ್ಟ ಹೆಸರನ್ನು ಸಾರ್ಥಕ ಪಡಿಸಿಕೊಂಡು ಬಿಡಬೇಕೆ.. ಕಾಳ್ಗಿಚ್ಚಿನಂತೆ ಹಬ್ಬಿದ ಈ ಸುದ್ದಿಯಿಂದಾಗಿ ಅರಮನೆಯೊಂದೇ ಯಾಕ ಸದರಿ ಪಟ್ಟಣ ವಂದೇ ಯಾಕ ಯಿಡೀ ಸೀಮೆಯೇ ಬೆಚ್ಚಿ ಬಿತ್ತು.. ಅರಮನೆಯ ದುಕ್ಕ ಪಟ್ಟಣವನ್ನು ತೊಯ್ದು ತಪ್ಪಟಿ ಮಾಡಿತು..
ಅದನ್ನು ತೊಡೆ ಮ್ಯಾಲ ಹಾಕ್ಕೊಂಡು ರಂಗವ್ವ ಹಂಗ ಅಂಗಾತ ಮಲಕ್ಕೊಂಡು ನಿದ್ದೆ ಹೋಗಿ ದ್ದಳಂತೆ.. ಕೂಸು ಯದೆ ಮ್ಯಾಲಕ ಬಂದು ಕೂಕಂಡಿತಂತೆ.. ಅದು ಆಕೇಯ ಕುತ್ತಿಗೆ ಹಿಚುಕಿ ಕೊಲ್ಲುವ ಪ್ರಯತ್ನ ಮಾಡಿತಂತೆ.. ತನಗ ವುಸುರುಗಟ್ಟಿದಂತಾಗಲು ಕಣ್ಣು ಬಿಟ್ಟು ನೋಡಿದಳಂತೆ.. ಕೂಸು ಗಹಗಹಿಸಿ ನಗಾಡಿತಂತೆ.. ಕೊಸರಿ ತಳ್ಳಿದೇಟಿಗೆ ಅದು ಬಾದಾಳದ ಕಡೆ ಜಿಗಿದು ಬಯಲೊಳಗ ಮಾಯವಾಯಿತಂತೆ.
ಡಾಣಾಪುರದ ದಾಯಾದಿಯಾದ ನಾಗಲಾಪುರದ ಪೆದ್ದದೊಡಿನಾಯಕ ಆಸ್ತಿಸಲುವಾಗಿ ಅದನಪಹರಣ ಮಾಡಿರುವನಂತೆ....
ಚಿನ್ನಾಸಾನಿಯ ಆತುಮವೇ ಅದನು ಕದ್ದೊಯ್ದಿರುವುದಂತೆ..
ಅದೇ ತನ್ನ ತಾಯಿಯನ್ನು ಹುಡುಕಿಕೊಂಡು ಹೋಗಿರುವುದಂತೆ..
ಲೆಕ್ಕ ಹಾಕಿದರೆ ಯಿಂಥ ಅಂತೆ ಕಂತೆಗಳು ಮನಾರ ಯಿರುವವು ಸಿವನೇ... ಯಿದರೊಳಗೆ ನಿಜ ಯಾವುದೋ ಸುಳ್ಳು ಯಾವುದೋ ಆ ಭಗವಂತನಿಗೇ ಗೊತ್ತು..? ಯಾರು ಯೇನು ಮಾಡಿದರೂ ಅಸಲೀ ಹಕೀಕೆತ್ತು ಹೊರ ಹೊಂಡಲಿಲ್ಲ.. ಅದ್ರುಸ್ಸವಿದ್ಯೇನ ಕರತಲಾಮಲಕ ಮಾಡಿಕೊಂಡಿದ್ದ, ಅದರ ಸಾಯದಿಂದಲೇ ಹತ್ತಾರು ಪಾಳ್ಳೆಪಟ್ಟುಗಳನ್ನು ಗೆದ್ದು ಡಣಾಪುರ ರಾಜ್ಯವನ್ನು ವಿಸ್ತರಿಸಿದ್ದ ತಮ್ಮ ಪುರುವಿಕ ಅದ್ರುಸ್ಯ ನಾಯಕನ ಹೆಸರನು ಯಿಡೋದು ಬ್ಯಾಡಾಂತ ಅರಮನೆಯ ಆಸ್ಥಾನ ಜೋತಿಷಿಗಳು ಗಿಣೀಗೆ ಹೇಳಿದಂತೆ ಹೇಳಿದ್ದರೂ ಅರಮನೆ ಕಿವಿಮ್ಯಾಲ ಹಾಕ್ಕೊಂಡಿರಲಿಲ್ಲ.. ಜನುಮನಾಮ ‘ಅ’ ಅಂತ್ ಬಂತು.. ಅದಕ ಅದ್ರುಸ್ಯ ನಾಯಕ ಅಂತ ಯಾರೋ ಕರೆದು ಬಿಟ್ಟರು. ಈಗೇನು ಮಾಡಲಕಾದೀತು? ಕೂಸನು ಹುಡುಕಿಸಿ ತರಿಸುವ ಸಲುವಾಗಿ ಯಿಡೀ ಸಾಮುರಾಜ್ಯ ಹೋದರೂ ಹೋಗಲಿ.. ಸಿಕ್ಕಿದ ಮ್ಯಾಲ ಅದಕ ಯಿನ್ನೊಂದ ಹೆಸರು ಯಿಟ್ಟರಾತು.. ಈಗ ಸದ್ಯಕ...
ಕೂಸನು ಹುಡುಕಲಕ ಹೋದ ಪದಾತಿ ದಳ ಹೋತೂss ಹೋತೂss