ಅರಮನೆ
೬೭೩
ಗದುಮ್ಯಾರೋ.. ಅವರ್ನೇ ಕೇಳು ಹ್ವಾಗ್ರಿಯಂದು ಕಯ್ಯಿ ಬಾಯಿ ನಡೆಯುತ್ತಿದ್ದವರು ಬಂದವರಿಗೆ ಮುಖ ಮುಲಾಜಿಲ್ಲದೆ ಹೇಳೇಬಿಟ್ಟರು. ಅದೂ ಖರೇವನ್ನಿಸಿ ಹೆಣುಮಕ್ಕಳು ಅರಮನೆಯ ಮುಂದೆ ಸಾಲಗಟ್ಟಿದವರು ಸಿವನೇ... ದೊರೆಯೇ ನಮ್ಮ ನಮ್ಮ ಗಂಡಂದಿರು ವಾಪಾಸಾಗೋ ಮಟ ನಮ ನಮ್ಮ ಸಮುಸಾರವನ್ನು ನೀವೇ ನಡೆಸಬೇಕು ಯಂದು ಕೇಳಿಕೊಂಡಿದ್ದೇನು ಸಿವನೇ?.. ಅರಮನೆಯ ಸವುಭಾಗ್ಯೇವೆಲ್ಲ ಘನಸೊಸ್ತೆಯ ಹಿಂದ ಹಿಂದ ಹೋಗಿಬಿಟ್ಟಿತ್ತು.. ಸೊಯಾರ್ಚಿತ ಸ್ಥಿರಾಸ್ತಿ, ಚರಾಸ್ತಿ ಯಲ್ಲಾವು ಆ ಹುತಾತುಮೆಯ ಬೆನ್ನ ಹಿಂದ ನಡಕೊಂತ ಹೋಗಿ ಮಸಣಸೇರಿ ಬಿಟ್ಟಿತ್ತು.. ನೂರಾರು ಸಮುಸಾರಗಳನ್ನು ನೋಡು ಅಂದರ ಹೆಂಗ ನೋಡ್ಯಾನು ರಾಜ? “ನೋಡಿರಮ್ಮs ನಾವು ವುಂಡಲ್ಲಿ ವುಣ್ಣಿರಿ.. ನಾವು ವುಪಾಸಯಿದ್ದರೆ ನೀಮಾವುಪಾಸ ಯಿರೀರಿ.. ಯಿರೋ ವಂದು ರೊಟ್ಟೀನಿ ನಾವೆಲ್ಲರೂ ಹಂಚಿಕೊಂಡು ತಿನ್ನೋಣ” ಯಂದು ರಾಜ ಹೇಳಿದ್ದಕ್ಕೆ ಸಂತರಸ್ತ ಪ್ರಜೆಗಳೆಲ್ಲ ಮಮ್ಮಲನ ಮರುಗಿದರು.
ಅರಮನೆ ದಣದಯ್ತೆ.. ಯಿದನು ನೆಟ್ಟಿಗೆ ಮಾಡೋದು.. ಸಾಂಬಾಳಿಸೋದು ಪ್ರಜೆಗಳ ಕರ್ತವ್ಯ ಅಯ್ತೆ ಯಂದೊಂದಿವಸ ರಾಜನು ಆಸ್ಥಾನದಲ್ಲಿ ಕರೆ ನೀಡಿದ ಪರಿಣಾಮವಾಗಿ ಪಟ್ಟಣದಲ್ಲಿದ್ದ ಹಿರಿ ವತನದಾರರು ತಮ ತಮ್ಮ ಅಗೇವುಗಳನ್ನು ತೆರೆದು ಕಾಳು ಕಡೀನೆಲ್ಲ ಬಡ ಬಗ್ಗರಿಗೆ ಯತೇಚ್ಫ ದಾನ ಮಾಡಿದರು. ಹಸಕಂಡೋರಿಗೆ ಅಲ್ಲಲ್ಲಿ ಅನ್ನದ ಛತ್ರಗಳು.. ಬಾಯಾರಿದವರಿಗಲ್ಲಲ್ಲಿ ನೀರಿನರವಟ್ಟಿಗೆಗಳು.. ದುಕ್ಕ ದುಮ್ಮಾನಿತರಿಗಲ್ಲಲ್ಲಿ ಪುರಾಣಪುಣ್ಯ ಸ್ರವಣಗಳು ನೆರವೇರಿಕೆಯಾದವು ಸಿವನೆ...
ಗಂಡಂದಿರ ಕನವರಿಕೆಯಲ್ಲಿದ್ದ ಹೆಂಡಂದಿರ, ಮಕ್ಕಳ ಕನವರಿಕೆಯಲ್ಲಿದ್ದ ಹೆತ್ತಂದೆ ತಾಯಂದಿರ, ಗೆಣೆಗಾರರ ಕನವರಿಕೆಯಲ್ಲಿದ್ದ ಗೆಣೆಗಾರರ, ಶಿಷ್ಟಂದಿರರ ಕನವರಿಕೆಯಲ್ಲಿದ್ದ ಗುರುಗಳ, ಪ್ರಿಯತಮರ ಕನವರಿಕೆಯಲ್ಲಿ ಪ್ರಿಯಂವದೆಯರ ಮನದೊಳಗೆ ಮಾಯಾವಿ ಕೂಸು ಮುಳುಗೇಳಲಾರಂಬಿsಸಿತಂತೆ. ಕನಸುಗಳಲ್ಲಿ ದುತ್ತಂತ ಮೂಡಿ ಮರೆಯಾಗಲಾರಂಬಿsಸಿತಂತೆ. ಕಣ್ಣ ವಪೆಗಳ ನಡುವೆ ಕೂಡಿ ಕಳೆಯ ಲಾರಂಬಿsತಂತೆ. ಕಿವಿಗಳ ತಮ್ಮಟೆಗಳನ್ನು ಡಡ್ಡೆಣಕ್ಕ.. ಣಕ್ಕ.. ಣಕ್ಕ.. ಯಂದು ಭಾರಿಸಲಾರಂಬಿsಸಿತಂತೆ.. ಅಯ್ಯೋ ನನ ಕಣ್ಣೊಳಗೆ.. ಅಯ್ಯೋ ನನ ಕಿವಿಯೊಳಗೆ.. ಅಯ್ಯೋ ನನ ಮನದ ಜಗಲಿಯ ಮ್ಯಾಲ ಯಂದುದ್ಗಾರ ತೆಗೆಯತೊಡಗಿದವರನ್ನು ಸಾಂಬಾಳಿಸುವುದು ಹ್ಯಾಂಗ ಸಿವನೇ.. ಯಿದು