ವಿಷಯಕ್ಕೆ ಹೋಗು

ಪುಟ:Aramane.pdf/೬೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ

೬೭೭

ನೋಡುತ್ತಿರುವ ಆ ಯಿಚಿತ್ರಕೂಸನ್ನು ಅರ್ದಬಲದಿಂದ ಝೂಡಿಸಿ ತಳ್ಳಿದಳಂತೆ.. ತಳ್ಳಿದೇಟಿಗೆ ಪಕಪಕನೆ ನಗಾಡಿದ ಅದು ಸುರುಸುರು ಬತ್ತಿಯಂತೆ ಮ್ಯಾಲಕೆ ಚಿಮ್ಮಿ ಡಬಾಕ್ಲಿ ಮೂಲಕ.. ಆ ಗಲಾಟೆಗೆ ಅಂಗಳದಲ್ಲಿ ಮಲಕ್ಕೊಂಡಿದ್ದ ಗಂಡನೂ.. ಮಾಳಗಿ ಮ್ಯಾಲ ಮಲಕ್ಕೊಂಡಿದ್ದ ಅತ್ತೆ ಮಾವಂದಿರೂ.. ಆಜು ಬಾಜು ಮನೆಯವರಿ ತ್ಯಾದಿಯಾಗಿ.. ‘ಯೇನಾತೆವ್ವಾ.. ಯೇನಾರ ಕೆಟ್ಟ ಕಣಸು ಗಿಣಸೇನಾರ ಕಂಡು ಗಿಂಡಿಯೇನವ್ವಾ..’ ಯಂದು ಮುಂತಾಗಿ ಕೇಳಿದ್ದಕ್ಕೆ.. ಆಕೆ ಹಿಂಗಗಂತ ಹೇಳಿದ್ದಕ್ಕ.. ನಂಬುವಲ್ಲರು ಸಿವನ.. ನಂಬಧಾಂಗ ಯಿರವಲ್ಲರು ಸಿವನೇ? ಅಂಥಾದ್ದೊಂದು ಕೂಸು ಅಯ್ತಂದರೆ ಹೆಂಗ? ಯಿರಲಕಿಲ್ಲಾಂದರ ಹೆಂಗ!?

ಯಿಂಥ ಅನುವಾದ ಕೂಸೊಂದು ನನ್ನೆದಿ ಹಾಲು ಕುಡೀತು, ತನ್ನೆದಿ ಹಾಲನ ಕುಡೀತು ಯಂಬುವ ನಿನಾದ ಹಾಹಾಕಾರ ಮೋಣಿ ಆದ್ಯಂತ ಕೇಳಿ ಬರಲಾಗಿ ನಂಬದೆಯಿರಲಿಲ್ಲ.. ಗಂಡಿಂದಿರು ತಮ ತಮ್ಮ ಹೆಂಡಂದಿರ ಮೊಲೆಗಳಿಗೆ ಕಾವಲು ನಿಂತಿರಲಕ, ತಾಯಂದಿರು ರೆಪ್ಪೆಗೆ ಅಂಟಿಸಿ ನಿದ್ದೆ ಮಾಡದೆ ಯಿರಲಕ..

ಮಾಯಾವಿ ಕೂಸಿನ ಅಟಾಟೋಪ ಯಿನ್ನುಳಿಕೆ ಗ್ರಾಮಗಳಾದ ಯಲಗುಂದ, ಹೊಳಗುಂದ, ಯಲ್ಲಾರತಿ, ಮುದ್ದಾಪುರವೇ ಮೊದಲಾದ ಕಡೇಲೆಲ್ಲ.. ಸಿವನೇ.. ಯೀ ಗ್ರಾಮಕ್ಕೆ ಆ ಗ್ರಮಮಾ.. ಆ ಗ್ರಾಮಕ್ಕೆ ಯೀ ಗ್ರಾಮಮಾಕಾವಲು ನಿಂತಿರಲಕ.. ಗ್ರಾಮಗಳ ಸಮುಚ್ಫಯಗಳೇ ವಂದು ಕಡೆ ಕಲೆತು ಕೂಸೊಂದರ ಗೊಂಬಿ ಮಾಡಿ ನೀನು ಬಕಾಸುರನಪರಾವತಾರಮೋ.. ಸುಂಬ ನಿಸುಂಬರೇ ಮೊದಲಾದ ರಾಕುಸರರಪರಾವತಾರಮೋ.. ನೀನು ಕುಡಿತೀನಂದರ ಕೊಪ್ಪ ಕೊಪ್ಪರಿಗೆ ಹಾಲು ಕೊಡತೇವೆ.. ನೀನು ತಿನ್ನುವಿಯಾದರ ಕೊಳ ಕೊಳಗ ಬಾನ ಬೇಯಿಸಿಡುತೇವ.. ನಿನಗೊಂದು ವಯನಾದ ಗುಡಿ ಕಟ್ಟಿಸಿ ಕೊಡತೇವ.. ತ್ರಿಕಾಲ ಪುಜಿ ಪುನಸ್ಕಾರಕ್ಕೆ ಯೇರುಪಾಡು ಮಾಡುತೇವು ಯಂದು ಮುಂತಾಗಿ ಗಗ್ಗರಿಸಿ ಬೇಡಿಕೊಳ್ಳಲಾರಂಬಿsಸಿದುದರ ಬಗ್ಗೆ ಯೇನು ಹೇಳುವುದು ಸಿವಸಂಕರ ಮಾದೇವಾss.. ಕೂಸು ನನ್ನೊಳಗ ಮೂಡಿತು, ತನ್ನೊಳಗ ಮೂಡಿತು ಯಂದು ಥೇಟ್ ಕೂಸಿನಂತೆ ವರ್ತನ ಮಾಡಲಾರಂಬಿsಸಿದ ಮಂದಿ ವಬ್ಬರಾ.. ಯಿಬ್ಬರಾ.. ಅಂಥವರಿಗೆ ಅಗೋ ಅಲ್ಲೊಂದು ತೊಟ್ಟಿಲು.. ಯಿಗೋ ಯಿಲ್ಲೊಂದು ತೊಟ್ಟಿಲು.. ಗಿಡಕೊಂದು.. ಮರಕೊಂದು..