ವಿಷಯಕ್ಕೆ ಹೋಗು

ಪುಟ:Aramane.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಿಟ್ಟುಕೊಂಡಿದ್ದನಷ್ಟೆ. ಚವುಚ ಕಾರ್ಯ ಮುಗಿಸಿಕೊಂಡು ಹಂಗೆ ಹೊರಟು ಬಂದಿದ್ದನಷ್ಟೆ) ಪಣಕ್ಕಿಟ್ಟನು. ಆದರೆ ಜಾಮಾತ್ರುಅದನ್ನು ತಿರಸ್ಕರಿಸಿದನಲ್ಲದೆ ಹೀಗಳೆದನು. ತಂಬಿಗೆಯ ಅಯ್ತಿಹಾಸವನ್ನೂ, ಅದರ ಗುಣ ಯಿಶೇಷಗಳನ್ನು ವರಣಿಸೀ ವರಣಿಸೀ ರಾಜಕುವರ ಸುಸ್ತಾದನು. ಆಗಿದ್ದು ಆಮಾತ್ಯನು ‘ನಾಯಕರೇ, ಯೆಸ್ಲೇ, ಬಿಸ್ಲೇ ಬಂದು ತಿರುಪಾಲಯ್ಯನ ಮನೇಲಿ ಬೀಡು ಬಿಟ್ಟಿದ್ದಾರಂತೆ. ಯೀ ಕೂಡಲೆ ನೀವು ಹೋಗಿ ಯೀ ನಿಮ್ಮ ಅಪುರ್ವ ವಸ್ತು ವನ್ನು ಅವರಿಗ್ಯಾಕೆ ಮಾರಬಾರದು?” ಯಂದು ಸಕಾಲಿಕ ಸಲಹೆ ನೀಡಿದನು. ವಲ್ಲದ ಮನಸ್ಸಿನಿಂದ ಕಾಟಯ್ಯನು ಆ ತಂಬಿಗೆಯೊಡನೆ....

ಶ್ರೇಷಿವಿ ಭೌವಚನಸಯ್ತ ಸ್ವಾಗತಿಸದೆ ಯಿರಲಿಲ್ಲ, ಅವುಪಚಾರಿಕವಾಗಿ ಪರಂಗಿ ಮಂದಿಯನ್ನು ಪರಿಚಯಿಸದೆ ಯಿರಲಿಲ್ಲ, ನಿಂಬೆ ಪಾನಕಕೊಟ್ಟು ನಾಯಕನ ಹೊಟ್ಟೆ ತಣ್ಣಗೆ ಮಾಡದೆ ಯಿರಲಿಲ್ಲ. ರಾಜಪರಿವಾರದವರ ಪಯ್ಕಿ ಅಪರಿಮಿತ ಲೇವಾದೇವಿಯಿಟ್ಟುಕೊಂಡಿರುವ ನಾಯಕನನ್ನು ಅಲ್ಲಿಂದ ಸಾಗುಹಾಕಲು ಶ್ರೇಷಿವಿ ಮಾಡಿದ ಹತ್ತು ಹಲವು ಪ್ರಯತ್ನಗಳು ವಿಫಲಗೊಂಡವು. ತನಗೆ ತುರ್ತಾಗಿ ಸಾವುರ ರೂಪಾಯಿ ಬೇಕೆಂದು ಹೇಳುತ ನಾಯಕನು ತನ್ನ ಸೊಂಟದ ಮೂಲೆಯಿಂದ ಮಾಯಾವೀ(?) ತಂಬಿಗೆಯನ್ನು ತೆಗೆದು ಅವರ ಮುಂದಿಟ್ಟನು. ಯಿದೇನಿದ್ದೀತು ಅಂತ ಅವರು ತಿಕಿತಿಕ್ಕಿ ನೋಡುತ್ತಿರುವಾಗ್ಗೆ ಅದರ ಪ್ರಾಚೀನತೆಯನ್ನು ಯಿವರಿಸಿದನು. ಪರಂಗಿ ಮಂದಿಯು ಯಿದಕ್ಕೆ ಕಿಲುಬು ಕಾಸಿನ ಬೆಲೆಯಿಲ್ಲ ಯಂದು ಹೇಳಿ ದರಲ್ಲದೆ ಪಿಕದಾನಿ ತಂದುಕೊಟ್ಟಲ್ಲಿ ಅಯವತ್ತು ರೂಪಾಯಿ ಕೊಡುವುದಾಗಿ ಹೇಳುತ್ತಿರುವಾಗ್ಗೆ, ಅದನ್ನು ಕೇಳಿ ನಾಯಕನು ಪರಪರ ತಲೆಯನ್ನು , ಕೆರೆದುಕೊಳ್ಳುತ್ತಿರುವಾಗ್ಗೆ...

ಅದೇ ಕುದುರೆಡವು ಪಟ್ಟಣದ ಥೆಳಗೇರಿಯಲ್ಲಿ ಜಗ್ಲೂರೆವ್ವ ತನ್ನ ಗಂಡನನ್ನು ತಾನು ಪಡೆಯುವ ನಿಟ್ಟಿನಲ್ಲಿ ಪ್ರಯತ್ನದಿಂದ ಯಿರಮಿಸಿರಲಿಲ್ಲ. ತನ್ನ ಕೊಳ್ಳಾಗಿನ ತಾಳಿ ಭಾಗ್ಯ ವುಳುಕಿಸಿಕೊಳ್ಳಲಕ, ತನ್ನ ಹಣೆಯ ಕುಂಕುಮ ಬೊಟ್ಟು ವುಳುಸಿಕೊಳ್ಳಲಕ, ತನ್ನ ಸತೀತನದ ಗವುರವವ ಕಾಪಾಡಿಕೊಳ್ಳಲಕ ಆಕೆಯು ತನಗೆ ಆಸ್ರಯ ಕರುಣಿಸಿದ್ದಂಥಾ ಬೇಯಿನಮರದವ್ವನ ಅಗಾಧ ಬೊಡ್ಡೆಗೆ ಹಣೆ ಅಂಟಿಸಿ ಸಣುಮಾಡಿ ಚಕ್ರಾಲಕ ಹೋಗಿ ಮೋಡಿಕಾರ ಸಂಗಪ್ಪನನ್ನು ಕಂಡು ಬಂದಿದ್ದಳು, ಯಕ್ಕಗೇರಿಗೆ ಹೋಗಿ ಮಾಮಂತುರವಾದಿ ಮಶಲಪ್ಪನನ್ನು ಕಂಡು ಬಂದಿದ್ದಳು, ಬಂಡರೀಗೆ ಹೋಗಿ ಲಚ್ಚಯ್ಯ ಸಾಸ್ತ್ರೀನ ಕಂಡು ಬಂದಿದ್ದಳು, ಅವರು ಮಂತರಿಸಿ ಕೊಟ್ಟಿರುವಂಥಾ ತಾಯಿತ, ಲೋಬಾನ