ವಿಷಯಕ್ಕೆ ಹೋಗು

ಪುಟ:Aramane.pdf/೬೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೯೨

ಅರಮನೆ

ವರ್ತಮಾನವೇ ಯಿಲ್ಲದ ಯಿಂಡಿಯಾ ವುದ್ದಾರವಾಗುವುದೋ? ಯಿಲ್ಲಮೋ ಯಂಬಾತಂಕ ಬೇರೆ.. ತಾನೂ ವಳಗೊಳಗೆ ಸನಾತನಿಯಾಗಿ ಮಾರ್ಪಟ್ಟಿದ್ದಿರಬಹುದೆಂಬ ಅನುಮಾನ ಬೇರೆ.. ಸರ್ವತೋಮುಖ ವತ್ತಡಕ್ಕೆ ಸಿಲುಕಿದಂಥ ತೆಳು ತಗಡಿನ ಡಬ್ಬಿ ತಾನಾಗಿದ್ದಿರಬಹುದೆಂಬ ಕೀಳರಿಮೆ.. ಯಿಂಥ ಅನೇಕ ಯೋಚನೆ, ವಿವೇಚನೆಗಳಿಂದಾಗಿ ಮನ್ರೋ ಸಾಹೇಬನು ವುಲ್ಲಸಿತನಾಗಿರಲಿಲ್ಲ. ಹಿಂಗಾಗಿ ಹೊತ್ತಿಗೆ ಸರಿಯಾಗಿ ವುಣ್ಣದಾದ.. ಹೊತ್ತಿಗೆ ಸರಿಯಾಗಿ ಮಲಗದಾದ. ಹತ್ತು ವರ್ಷಗಳಲ್ಲಿ ಕ್ಷೀಣಿಸಬಹುದಾದ ಆರೋಗ್ಯ ಕೇವಲ ಹತ್ತೇ ದಿವಸಗಳಲ್ಲಿ ಕ್ಷೀಣಿಸಿತು. ಕ್ಷೇಮ ಲಾಭ ವಿಚಾರಿಸಿಕೊಳ್ಳುವ ಸಲುವಾಗಿ ಆತಗೇನು ಹೆಂಡರಿದ್ದರಾ? ಮಕ್ಕಳಿದ್ದರಾ?.. ಆತ ಮೊದಲೇ ವುಂಡು ವುಪವಾಸಿ, ಬಳಸಿ ಬ್ರಹ್ಮಚಾರಿ.. ಯಡಕೇಸಿಂದ ನೋಡಿದರ ಮಾಮೂಲು ಆದಮಿಯಂತೆಯೂ.. ಬಲಕೇಸಿಯಿಂದ ನೋಡಿದರ ಸಾಧು ಪರಮಾತುಮನಂತೆಯೂ ಗೋಚರವಾಗುತಲಿದ್ದುದೂ ಸೋಜಿಗವೇ..

ಯಿಂಥ ಹೊತ್ತಲ್ಲೆ ಗುತ್ತಿವಳಿತದ ಪ್ರಾಂತದಲ್ಲಿ ವಾಂತಿಭೇದಿರೋಗ ಕಾಣಿಸಿ ಕೊಂಡಿರುವುದೆಂಬ, ಪ್ರಜೆಗಳು ನಿತ್ರಾಣಗೊಂಡಿರುವರೆಂಬ, ಯೀಗಾಗಲೇ ಪ್ರತಿಮನೆಯಲ್ಲಿ ವಂದಲ್ಲಾ ವಂದು ಹೆಣ ಕಾಣಿಸಿಕೊಂಡಿರುವುದೆಂಬ ಸುದ್ದಿ ಬಂದು ರಣಹದ್ದಿನಂತೆ ಕಿವಿಗೆ ತಗುಲಿದೊಡನೆ ಮನ್ರೋನ ತಲೆ ಗಿರ್ರಂತ ಸುತ್ತಿತು. ಹಂಗ ಗಪ್ಪಂತ ಮಲಕ್ಕೋಂಬೇಕೆಂಬ ಆಸೆ ಆಯಿತು. ಯಿನ್ನು ತಾನು ಗಟ್ಟಿಮುಟ್ಟಾಗಿರು ವಾಗಲೇ ತನ್ನ ಪ್ರೀತಿಯ ಪ್ರಜೆಗಳು ಕಣಮುಂದ ಸಾಯುವುದೆಂದರೇನು? ಅಯ್ಯೋ ತನ್ನ ಪ್ರೀತಿಯ ಪತ್ತಿಕೊಂಡ ಪ್ರಾಂತವೇ..

ನಿಂತ ನಿಲುವಿಕೀಲೆ ಹೊಂಟು ನಿಂತ ತಮ್ಮ ಸಾಹೇಬನನ್ನು ನೋಡಿ ಮ್ಯಾಥ್ಯೂ, ಅಳಸಿಂಗಯ್ಯ, ರಾಬರ್ಟರೇ ಮೊದಲಾದ ಅದಿsಕಾರಿಗಳು.. ನಿತ್ರಾಣಾಗಿರೋ ನೀವು ತ್ರಾಸು ತಗೋಬ್ಯಾಡಿರಿ ಖಾವಂದರೇ.. ನೀವು ಕಾಲಿಂದ ತೋರಿಸಿದನು ತಲೀಲೆ ಮಾಡಲಕ ನಾವದೀವಿ ಯಂದಂದು ತರುಬಲಕ ನೋಡಿದರು. ನಿಮಗೇನಾರ ಹೆಚ್ಚೂ ಕಮ್ಮಿ ಆದಲ್ಲಿ ಬಳ್ಳಾರಿ ದೇಸದ ಗತಿಯೇನು ಯಂದು ಮುಂತಾಗಿ ಹೇಳುತ್ತ ಯಾಕೂಬು, ಪಿಳ್ಳೆ, ಅಯ್ಯಂಗಾರಾದಿಯಾಗಿ ಯಲ್ಲರೂ ಅಡ್ಡಗಾಲು ಹಾಕಲಕ ನೋಡಿದರು.. ಆದರೆ ನಮ್ಮ ಮನ್ರೋ ಸಾಹೇಬನು ಅವರ್ಯಾರ ಮಾತನ್ನು ಕಿವಿ ಸನೀಕ ಬಿಟ್ಟುಕೊಳ್ಳಲಿಲ್ಲ.. ಯೀ ಘಟ ಯಿದ್ದರೆಷ್ಟು..? ಹೋದರೆಷ್ಟು? ಅಂದುಬಿಟ್ಟನು.. ತನ್ನ ಹಿಂದ ವಯ್ದರ ದಂಡು