ಅರಮನೆ
೬೯೫
ಕಿರಸ್ತಾನದವ.. ಅಂಗ್ರೇಜಿ ಕಲತಿರೋವ.. ನೀರ ಮ್ಯಾಲಣ ಬಣ್ಣದ ಗುಳ್ಳೆಯಂಥ ನಿನಗೆಂಗ ಅರ್ಥ ಆದೀತಯ್ಯಾ ರೋಗ ರುಜಿಣದ ಮರ್ಮಯಂಬೀವೇ ಮೊದಲಾದ ಮಾತುಗಳನ್ನು ತನ್ನ ಹಿಂದೆ ಹಿಂದೆ....
ಲಕ್ಷಾನುಲಕ್ಷ ವರುಷಗಳಿಂದ ಜೀವ ಲುಕ್ಷಾಣುಮಾಡಿಕೋತ ಬಂದಿರೋ ತಂದೆ, ತಾತ ಮುತ್ತಾಂದಿರೆಲ್ಲ ಕೋಟ್ಯಾನುಕೋಟಿ ನೊಣಗಳ ರೂಪದಲ್ಲಿದ್ದರಲ್ಲಾ.. ಯಲ್ಲಿ ಬೇಕಂದರಲ್ಲಿ ಗುಯ್ಯಂತ ಮುಕ್ಕುರುತ ಲಿದ್ದರಷ್ಟೆ. ಅವರೆಲ್ಲ ಮನ್ರೋ ಸರೀರದ ಬೆಲೆಬಾಳುವ ಅಂಗೋಪಾಂಗಳ ಮ್ಯಾಲ ಕೂತೇಳುತಲಿದ್ದರಷ್ಟೆ.. ನೊಣಗಳ ವುಪಟಳ ನಿವಾರಿಸಿಕೊಳ್ಳುವ ಸಲುವಾಗಿ ಸದರಿ ಸಾಹೇಬ ಹೆಜ್ಜೆ ಹೆಜ್ಜೆಗೆ ಕಯ್ಯಿಗಳನ್ನಾಡಿಸುತ ಲಿದ್ದನಷ್ಟೆ.. ಆತಗೆ ಕಣ್ಣು ತೆರೆಯಲಕಯಿರಲಿಲ್ಲ ಪುರುಸೊತ್ತು.. ಬಾಯಿತೆರೆಯಲಕಿರಲಿಲ್ಲ ಪುರುಸೊತ್ತು.. ಮೊದಲೇ ನಿತ್ರಾಣದ ಪ್ರಕ್ರುತಿ ಆತನದು.. ಪತ್ತಿಕೊಂಡ ಪ್ರವೇಶ ಮಾಡಿದ್ದೇ ಮಾಡಿದ್ದು, ವಂದು ತುತ್ತು ವುಂಡಿರಲಿಲ್ಲ.. ವಂದು ಗುಟುಕು ನೀರು ಕುಡಿದಿರಲಿಲ್ಲ.. ಬಾಯಿ ಮುಕ್ಕಳಿಸಿರಲಿಲ್ಲ.. ಕಣ್ಣ ಸಂದುಗಳ ಸಿಳ್ಳು ವರೆಸಿಕೊಂಡಿರಲಿಲ್ಲ.. ರೆಪ್ಪೆಗೆ ರೆಪ್ಪೆ ಅಂಟಿಸಿ ವಂದು ಜೋಂಪು ನಿದ್ದೆ ತೆಗೆದಿರಲಿಲ್ಲ. ತೂಕಡಿಸಿಯೂ ಯಿರಲಿಲ್ಲ..
ಮಾರಿದ್ದತೊಡೆ ಬದಲಿಸಬೇಕೆಂದರ.. ವಕ್ಕಲೆಬ್ಬಿಸಬೇಕೆಂದರೆ.. ನೊಣಗಳನು ನಿರ್ಮೂಲನ ಮಾಡಲಕೆಂದರೆ.. ಹೊಕ್ಕು ತುಂಬೋ ಬಾವಿಗಳೊಳಗೆ ಕ್ರಿಮಿನಾಶಕ ಚೆಲ್ಲಾಡಬೇಕಂದರ.. ಸಮಾಜ ತನಗೆ ಸಹಕರಿಸಲೊಲ್ಲದು.. ಬಾಗಿಲಕೇಸಿಂದ ಹೋದದ್ದು ಡಬಾಕ್ಲಿಕೇಸಿಂದ ಮತ್ತ ಹೊಳ್ಳಿ ಬಂದು ಭೂತಕ್ಕೆ ಜೋತು ಬೀಳುತ್ತಿರುವುದು.. ಹತ್ತು ಮಂದಿಗೊಬ್ಬರಂತೆ ಸಾಯುತಲಿದ್ದವರು ನೂರು ಮಂದಿ ಗೊಬ್ಬರಂತೆ ಮಣ್ಣು ಕಾಣಲಾರಂಬಿsಸಿದ್ದರು. ಅಂತೂ ಸಾವವರ ಸಂಖ್ಯೆ ತಗ್ಗು ಮುಖ ಆಯಿತೆಂಬುದೇ ಸಮಾಧಾನಕರ ಸಂಗತಿ....
ನಿತ್ರಾಣದ ಪಯ್ಕಿ ನಿತ್ರಾಣಗೊಂಡಿದ್ದ ಮನ್ರೋಸಾಹೇಬನು ಆ ವಂದಿವಸ ಸಹಚರರ ಜುಲುಮಿ ಯಿಂದಾಗಿ ಬಿಡಾರ ಸೇರಿ, ಜುಲುಮಿಯಿಂದ ವಂದ್ತುತ್ತು ಬಾನವುಂಡ, ವಂದು ಗುಟುಕು ನೀರು ಕುಡಿದ.. ವಂದಾರ ಜೋಂಪು ನಿದ್ದೆ ಮಾಡುವುದರ ಮೂಲಕ ಪುನಶ್ಚೇತನಗೊಳ್ಳಬೇಕೆಂದು ನಿರ್ಧರಿಸಿ ಹಂಗ ರೆಪ್ಪೆಗೆ ರೆಪ್ಪೆ ಅಂಟಿಸಿಯೇ ಬಿಟ್ಟ. ಯಿನ್ನರಗಳಿಗೆಯಾಗಿಲ್ಲ.. ಗಾಢ ನಿದುರೆ ಆವರಿಸಿತು.. ಕನಸುಗಳು ವಂದರ ಹಿಂದೊಂದರಂತೆ ಗೋಚರ ಮಾಡಲಾರಂಬಿsಸಿದವು.. ಗೋಚರಮಾದ ಪಟ್ಟಣ.. ತುಂಬೆಲ್ಲ ಗಗನಚುಂಬಿ ವುಪ್ಪರಿಗೆ ಮ್ಯಾಲುಪ್ಪರಿಗೆ