ವಿಷಯಕ್ಕೆ ಹೋಗು

ಪುಟ:Aramane.pdf/೬೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೯೬

ಅರಮನೆ

ಮನೆಗಳು.. ಮೊಸರನ್ನ ಚೆಲ್ಲಿ ಬಳಕೊಂಡು ವುಂಬುವಂತಿದ್ದ ಹಾದಿಗಳ ತುಂಬೆಲ್ಲ ವಿವಿಧ ಜಾಯಮಾನದ ಹೆಂಗಸರು, ಅವರೆಲ್ಲರ ಗಮನ ತನ್ನತ್ತಲೇ.. ಅವರೆಲ್ಲ ನಿಟ್ಟುಸಿರುಗಳ ಗಮ್ಯ ತಾನೇ.. ಅವರೆಲ್ಲ ತಾಯಂದಿರೆಂಬುದು ನಿರ್ವಿವಾದದ ಸಂಗತಿ. ಅವರೆಲ್ಲ ಯೀ ತನ್ನ ನಿರೀಕ್ಷೆ ಯಲ್ಲಿರುವರೆಂಬುದಲ್ಲಿ ದುಸುರಾ ಮಾತಿಲ್ಲ.. ಆದರೆ ಅವರೆಲ್ಲರ ಕಂಕುಳದಲ್ಲಿ ವಂದೇರೂಪದ ಮಗು ವಂದಿರುವುದಲ್ಲ.. ತನ್ನನ್ನದು ಹೋಲುತ್ತಿರುವುದಲ್ಲಾ.. ಅದೂ ತನ್ನತ್ತ ಆಸೆಗಣ್ಣಿಂದ ನೋಡುವಂತಿದೆ ಯಲ್ಲಾ.. ಆ ಯಲ್ಲ ತಾಯಂದಿರ ಮಧ್ಯೆಯಿರುವ ಮುಪ್ಪಾನು ಮುದಕಿ... ತಾನದನ್ನೆಲ್ಲೋ..

ಯಚ್ಚರಾಗುತ್ತಲೇ ಕನಸುಗಳೆಲ್ಲ ಚದುರಿ ಹೋಗಲು.. ಕನಸೊಳಗಿದ್ದ ತಾಯಂದಿರೆಲ್ಲ ತನ್ನೊಳಗೆ ಕರಗಿ ಹೋಗಲು.. ಆ ಮುದುಕಿಯೊಂದೇ ಹೊರಗುಳಿಯಲು...

ಹೊತ್ತಾಗಲೇ ಮೂರು ಮಾರು ಮೇಲಕ್ಕೇರಿದ್ದರೂ ಮನ್ರೋ ಹಾಸಿಗೆಯೆಂದೀಚೆ ಬಂದಿಲ್ಲ.. ಕನಸುಗಳು ತುಂಬಿಕೊಂಡಿದ್ದರಿಂದಾಗಿ ತನ್ನ ದೇಹ ಫಲ ಭರಿತ ಮಾವಿನ ಮರದಂತೆ ಭಾರವಾಗಿರುವಂಥ ಅನುಭವ. ತನ್ನ ದೇಹದೊಳಗೆಲ್ಲೆಲ್ಲೂ ತಾಯಂದಿರೇ ತಾಯಂದಿರು. ಸಾವಿರಾರು ಕಂದಮ್ಮಗಳು ನರನಾಡಿ ತುಂಬೆಲ್ಲ ಮೊಲೆ ಹಾಲು ಜೀಕುತ್ತಿರುವಂಥ, ಕೀಲು ಕೀಲುಗಳ ತುಂಬೆಲ್ಲ ತೊಟ್ಟಿಲುಗಳು ಜೀಕಾಡುತ್ತಿರುವಂಥ, ಜೋಗುಳಪದಗಳು ಮಾರ್ದನಿಸುತ್ತಿರುವಂಥ.. ಅನುಭವ, ಮನ್ರೋಗೆ ಅರ್ಥವಾಗದ ಸಂಕಟ, ಅನಿರ್ವಚನೀಯ ಆನಂದ.. ತಾನು ಕುಂಡ್ರಲಾರ.. ಯದ್ದು ನಿಲ್ಲಲಾರ..

ಅಷ್ಟರಲ್ಲಿ ಹೊರಗಡೆ..

ಮುದಕಿಯೊಂದು ಕಾವಲು ಸಿಪಾಯಿ ಗಳೊಂದಿಗೆ ವಾದಕ್ಕಿಳಿದಿರುವಂತಿದೆ, ಕೊಸ ರಾಡುತ್ತಿರುವಂತಿದೆ.. ನನ್ಮಗನ್ನ ನಾನ್ನೋಡ್ಲಿಕ್ಕೆ ನಿಮ್ದೇನ್ರೋ ತಕರಾರು.. ಯಂದು ಕೂಗಾಡುತ್ತಿರುವಂತಿದೆ.. ಅದು ಆಡುತ್ತಿರುವ ಭಾಷೆಗಾದರೋ ಭಾಷೆಯ ಸ್ಪಷ್ಟ ರೂಪವಾಗಲೀ, ವ್ಯಾಕರಣವಾಗಲೀ, ಭಾಷೆಯ ಸಹಜ ನಯ ನಾಜೂಕಾಗಲೀ ಯಿದ್ದಂತಿಲ್ಲ.. ತನ್ನ ಮಾತ್ರುಭಾಷೆ ಅಯ್ರಿಷ್ ಅದರೊಳಗೆ ತಳಕು ಹಾಕಿಕಂಡಿರುವಂತಿದೆ.

“ಲೋ, ಮಗನೇ ಮಂಡರಯ್ಯಾ.. ನಿನಗ ನೀನss ಕಾವಲಿಟ್ಕೊಂಡಿದ್ದೀಯಲ್ಲೋ.. ಯಿದು ನ್ಯಾಯ ಯೇನಲೋ.. ನನ್ನಂಥ