ವಿಷಯಕ್ಕೆ ಹೋಗು

ಪುಟ:Aramane.pdf/೭೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦೬

ಅರಮನೆ

ಯಿಷ್ಟಯಿರಲಿಲ್ಲ.. ಮನ್ರೋ ಸಾಹೇಬನ ತನ್ನ ಅದಿsಕಾರಾವದಿsಯಲ್ಲಿ ಸಮಸ್ತ ದತ್ತಮಂಡಲ ಪ್ರಾಂತದ ಅಂತಃಕರಣ ಕೊಳ್ಳೆ ಹೊಡೆದಿದ್ದುದೇ ಯಿದಕ್ಕೆ ಕಾರಣ.. ತಾವು ಹಿಂಗss ಕಯ್ಯಿ ಕಟ್ಟಿಕುಂತ ಪಕ್ಷದಲ್ಲಿ ಕಲೆಟ್ಟರ ಸಾಹೇಬನ ಕಳೇಬರವು ರಾಯಲಸೀಮ ಪ್ರಾಂತದಾದ್ಯಂತ ಪ್ರಯಾಣ ಹೊಂಡುವುದೋ ಯೇನೋ? .. ಕುಂಪಣಿ ಸರಕಾರದ ಹುಕುಂ ಮೇರೆಗೆ ಜನರಲ್ ಲಕ್ಕೀಫೆಲೋ ಯಂಬಾತನು ನೂರಾರು ಸಿಪಾಯಿ ಮಂದಿಯನ್ನು ಹಿಂದುಮುಂದು ಯಿಟ್ಟುಕೊಂಡು ಬಂದು ಫಲಾನ ಜಾಗದಲ್ಲಿ ವಿಶ್ರಾಮ ಭಂಗಿಯಲ್ಲಿದ್ದ ಸರ್ ಥಾಮಸ್ ಮನ್ರೋ ಸಾಹೇಬನ ಕಳೇಬರವನ್ನು ಕದ್ದು ದೂರ ದೇಶವಾದ ವೆಲ್ಲೂರಿನ ಗ್ರೇವ್ಯಾರ್ಡಿನಲ್ಲಿ ಕಿರಸ್ತಾನ ಪದ್ಧತಿ ಪ್ರಕಾರ ಸರಕಾರಿ ಸಕಲ ಗವುರವಗಳೊಡನೆ ಪುನಹ ಸಂಸ್ಕಾರ ಮಾಡಿದನೆಂಬಲ್ಲಿಗೆ..

ಅತ್ತ ಯಿತ್ತಗಳ ಸುತ್ತಮುತ್ತ ತರಾವರಿ ಘಟನೆಗಳು ಜರುಗುತಲಿದ್ದವು. ಆಯಾ ಪ್ರಾಂತಗಳು ಅವಕ್ಕೆ ದಡ್ಡು ಬಿದ್ದು ರೋಸಿ ಹೋಗಿದ್ದವು. ಸಾಮಾಜಿಕ ಜೀವನವು ಯದುರು ಜವಾಬು ಕೊಡದೆ ಕುಂಪಣಿ ಸರಕಾರ ಹೆಂಗೆಂಗ ಆಡಿಸುತಲಿತ್ತೋ ಹಂಗಂಗೆ ಆಡ ತೊಡಗಿತ್ತು. ಯಿದಕ ಅಪವಾದವೆಂಬಂತೆ ಕೆಲವು ಕಡೇಕ ಕುಂಪಣಿ ಸರಕಾರದ ಆಸ್ತಿಪಾಸ್ತಿ ನಷ್ಟ ಮಾಡುವುದು.. ಅವರ ಹೆಂಗಸರನ್ನು ಯಿವರು, ಯಿವರ ಹೆಂಗಸರನ್ನು ಅವರು ಅಪಹರಣ ಮಾಡುವುದು ಯಿಂಥ ಘಟನೆಗಳು ಅಲ್ಲೊಂದು, ಯಿನ್ನೊಂದು ನಡೆಯುತಲಿದ್ದವು.. ಯಿಂಥವರನ್ನು ವಂದು ಕಡೇಲಿಂದ ಮಟ್ಟ ಹಾಕುತ.. ಯಿನ್ನೊಂದು ಕಡೇಲಿಂದ ಪಾಳ್ಳೆಪಟ್ಟು ಜಾಗೀರುಗಳನ್ನು ಕಬ್ಜಾ ಮಾಡಿಕೊಳ್ಳುತ ಕುಂಪಣಿ ಸರಕಾರದ ಬಾವುಟವು ಯಲ್ಲಂದರಲ್ಲಿ ಹಾರಾಡುತಲಿದ್ದುದು ಮಾಮೂಲು ಸಂಗತಿಯಾಗಿತ್ತು ಸಿವನೇ..

ಯ್ಯೋಸೋ ವರುಷಗಳ ತರುವಾಯ....

ಅತ್ತ ಕುದುರೆಡವು ಪಟ್ಟಣದೊಳಗಣ ಕಥಿಗಳು ವಂಧಯರಡಾss....ಮುಕ್ಕೋಟಿ ದೇವತೆಗಳ ಅಗೋಚರ ದಾಳಿಯಿಂದ ತತ್ತರಿಸಿದ್ದ ಸದರಿ ಪಟ್ಟಣದ ಪ್ರಜೆಗಳು ಸೂನ್ಯದೊಳ ಗೇನಿರುವುದೋ? ತಮ್ಮ ಅಂಗಯ್ಯಗೆರೆಗಳ ಗುಂಟ ಯಾವ ಮಾಯಾವಿಗಳು ನಡೆಯುತ್ತಿರು ವರೋ? ತಮ್ಮ ಅಂಗಾಲ ಸಂದುಗಳಲ್ಲಿ ಮಾಟ ಮಂತ್ರವಾದಿಗಳು ನೆಲಗೊಂಡುಬಿಟ್ಟಿರುವರೋ? ಕಾಗೆ ರೂಪ ದೊಳಗಿರುವವರು ಯಾರೋ?