ವಿಷಯಕ್ಕೆ ಹೋಗು

ಪುಟ:Aramane.pdf/೭೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ

೭೧೧

ತಮ್ಮ ಯಾಗ್ಯತಾನುಸಾರ ಮುದೇರನ್ನು ಬರಮಾಡಿಕೊಂಡು ಕೂಡ್ರಲು ನೆರಳನ್ನೂ, ತಿಂಬಲು ಬಾನವನ್ನು, ಕುಡಿಯಲು ನೀರು ನಿಡಿಯನ್ನೂ ವದಗಿಸಿ ಕ್ರುತಕ್ರುತ್ಯ ಭಾವನೆಯನ್ನು ಅನುಭವಿಸುತಲಿದ್ದುದು ಯೇಸು ಕಾಲದಿಂದಲೋ? ಯಿಹಲೋಕ ವ್ಯಾಪಾರ ತ್ಯಜಿಸಿದವರ ಶವಸಮುಸ್ಕಾರವನ್ನು ತ್ರಿಕರಣ ಪುರ್ವಕವಾಗಿ ಮಾಡುತಲಿದ್ದುದು ಯೇಸು ಕಾಲದಿಂದಲೋ? ಯಿದೆಲ್ಲ ವಂದಿವಸದ್ದಲ್ಲ... ಎರಡು ದಿವಸದ್ದಲ್ಲ.. ದಿನಾಲು ಸಾವವರಿಗೆ ಆಳುವವರು ಯಾರು ಯಂಬುವ ಗಾದೆ ಮಾತುಂಟು. ತಮ್ಮ ಕುದುರೆಡವೆಂದರೆ ಬರೀ ಸಾಯುವವರಿಗಾ... ಬದುಕ ಬೇಕೆಂಬುವವರಿಗಲ್ಲವಾ, ಅಲವುಕಿಕವೂ, ಅನುಭಾವಮಾಆದ ಸಾಯುವ ಕ್ರಿಯೆಯು ತಮಗೆಲ್ಲ ಸಾಂಕ್ರಾಮಿಕವಾಗಿ ಹಬ್ಬಿದರೇನು ಗತಿ ಸಿವನೇ? ತಮ್ಮ ಗಂಡಂದಿರು, ತಮ್ಮ ಹೆಂಡಂದಿರು, ತಮ್ಮ ಮಕ್ಕಳು ಯಿದ್ದಕ್ಕಿದ್ದಂತೆ ವಯ್ರಾಗ್ಯ ತಾಳಿದರೇನು ಗತಿ? ನಾಳೆ ಸಾವವರು ಯಿಂದ್ಯಾಕೆ ಸಾಯಬಾರದೆಂದು ನಿರ್ಧರಿಸಿದರೇನು ಗತಿ ಸಿವನೇ? ಯಂದು ಮುಂತಾಗಿ ಯಿಧಯಿಧದ ಆಲೋಚನೆ ಮಾಡೂತ ಸದರಿ ಪಟ್ಟಣದ ಮೂಲ ನಿವಾಸಿಗಳು ಮುದುಕರನ್ನಲ್ಲಲ್ಲೆ ಅಡ್ಡಡ್ಡಲಾಗಿ ತರುಬಿ ನೀವು ನಿಮ್ಮ ನಿಮ್ಮ ಮಾರುಗಳನ್ನೇ ಕುದುರೆಡವೆಂದೇ ಭಾವಿಸಿ ಸಾವಬೌದಿತ್ತಲ್ಲಾ.... ಯಿಲ್ಲೀದು ಅಲ್ಲೀದು ಮಣ್ಣು ವಂದೇ ಅಲ್ಲವಾ.. ಯಲ್ಲಾರಿಗೂ ಯಿರುವುದೊಂದೇ ಭೂಮಿ ಅಲ್ಲವಾ? ಯಂದು ಕೇಳಲಾರಂಭಿಸಿದ್ದುದಕ್ಕೆ ಯೇಸು ಕಾಲವಾಗಿತ್ತೋ.. ಯಿದೊಂದೇ ಅಲ್ಲದೆ, ಅದೊಂದೇ ಅಲ್ಲದೆ ಗರುಡ ಪುರಾಣವಾಚನ ಪ್ರವಚನ ಮಾಡುತ್ತ ಮರಣೋತ್ತರ ಪ್ರಾಪ್ತವಾಗುವ ನರಕಲೋಕದ ಬಗ್ಗೆ ಭಯಬೀತಿ ಹುಟ್ಟಿಸುತ್ತ ಶ್ರವಣಿಕರನ್ನು ಅಸಹಾಯಕರನ್ನಾಗಿ ಮಾಡಿ ಅವರ ಸರೀರಗಳ ಮೂಲೆ ಮುರುಕಟ್ಟಿನಲ್ಲಿರುತಲಿದ್ದ ಆಪದ್ಧನವನ್ನು ನಗು ಮೊಗದಿಂದಲೇ ವಸೂಲು ಮಾಡಿ ಬದುಕತಲಿದ್ದ ಪರಾವಲಂಬಿಗಳೂ ಸದರಿ ಪಟ್ಟದೊಳಗಿದ್ದುದು ಯೇಸುಕಾಲದಿಂದಲೋ.. ಯಿವೆಲ್ಲದರ ಜೊತೆಗೆ ಅಪಕರುಮಯಿದ್ಯಾಪಾರಂಗತರಿಂದಲೂ, ನುರಿತ ಸಮಾಧಿ ವಾಸ್ತುಶಿಲ್ಪ ಪಾರಂಗತರಿಂದಲೂ, ಲಭೋಲಭೋ ಅತ್ತು ಬಾಯಿ ಬಡಿದುಕೊಳ್ಳುವವರಿಂದಲೂ ಸದರಿಪಟ್ಟಣವು ಜಗಮಗಿಸುತಲಿತ್ತು ಯಂಬಲ್ಲಿಗೆ ಸಿವಸಂಕರ ಮಾದೇವಾss...

ಜಂಬೂ ದ್ವೀಪಕಲ್ಪದ ಥೆಲಿ ಮ್ಯಾಲ ಕುಂತಳ ಸೀಮೆ, ಕುಂತಳ ಸೀಮೆಯ