೭೧೨
ಅರಮನೆ
ಥೆಲಿ ಮ್ಯಾಲ ಕೂಕಂಡು ಅಟ್ಟಹಾಸಗಯ್ಯುತಲಿದ್ದ ಸಾಧು ಸಂತಾವಧೂತ ಮಂದಿ ವಬ್ಬಿರಾ ಯಿಬ್ಬರಾ.. ರಣ ಮಹಲ ಬಯಲೊಳಗ ಸಲ್ಲೇಖನಾ ರೊತಾರೂಢನಾಗಿ ಆ ರೂಢ ಪದವೀನ ಗಿಟ್ಟಿಯಿಸಿಕೊಂಡಿದ್ದ ಸುಡುಗಾಡೆಪ್ಪಾಧೂತ. ತಾನು ಯಾವುದನ್ನು ವಾಹನ ಮಾಡಿಕೊಂಡು ಆಗಮಿಸಿದ್ದನೋ ಅದೇ ಮೋಟುಗೋಡೆಯೊಳಗ ಅಂತರ್ಧಾನಗೊಂಡಿದ್ದಂಥ ನಾಗಲಿಂಗ ತಾತ, ತನ್ನ ವಾಹನವಾದ ಹುಲಿಸಯ್ತ ನೆಲದೊಳಗ ಯಿಂಗಿ ಹೋದ ಕಾಡುಸಿದ್ಧಪ್ಪ ತಾತ, ಕಂಬಳಿ ಕೆಳಗಡೆ ಗಪ್ಪಂತ ಮಾಯವಾಗಿದ್ದ ಗೂಳ್ಯಾದ ಗಾದಿಲಿಂಗಪ್ಪ ತಾತ, ಯಿವರೊಂದೇ ಅಲ್ಲದೆ ಕರಡಿ ಗುಡ್ಡದ ಮಂಗಮ್ಮವ್ವ, ವುಪಾಸವ್ವ, ವನುವಾಸವ್ವ, ತಂಗಳವ್ವ, ತಿಂಗಳವ್ವಂದಿರೇ ಮೊದಲಾದ ಸರಣ ಸರಣೆಯರ ಸಮಾದಿsಗಳು ಅಗೋ ಅಲ್ಲಿ.. ಯಿಗೋ ಯಿಲ್ಲಿ.. ಅವಿವಕ್ಕೆಲ್ಲ ಕಳಸವಿಟ್ಟಂತೆ ಯಂಜಲೆಲೆ ಯಲ್ಲಮ್ತಾಯಿ ಸದರೀ ಪಟ್ಟಣದೊಳಗ ಅಂತರ್ಧಾನಗೊಂಡಿರುವ ಸಂಗತಿಯು.. ಅವರೊಟ್ಟಿಗೆ ಆಡಿದ ಬಾಯಿಗಳು, ಕೇಳಾಡಿದ ಕಿವಿಗಳು, ಪೇಟ, ರುಮಾಲು, ಜಡೆ, ಗಡ್ಡ ನೇವರಿಸಿದ ಕಯ್ಯಿಗಳು.. ಲಚುಮವ್ವನ ತೋಪಿನ ತನಕ ಅಡ್ಡಾಡಿದ ಕಾಲುಗಳು.. ಅವರನ್ನೆಲ್ಲದ ಶಿವರಿಯದೆ ನೋಡಿದ ಕಣ್ಣುಗಳು, ಬಿಟ್ಟೆಂಜಲುಂಡ ಬಾಯಿಗಳು.. ರೋಮಾಂಚನಗೊಂಡಿದ್ದಂಥ ಮಯ್ತೊಗಲುಗಳಿವೇ ಮೊದಲಾದ ಅಂಗೋಪಾಂಗಗಳು.. ಯಿವುಗಳೊಂದೇ ಅಲ್ಲದ ಕೇರ್ತಿಸೇಷರುಪಯೋಗ ಮಾಡಿ ಬೀಸಾಡಿದ ಲೋಟ, ತಳಿಗೆ, ತಾಟು, ಬೆತ್ತ, ಬಾಚಣಿಗೆ, ಸೀರುಣಿಗೆ, ಗುಡುಗುಡಿ ಸೇದೆಸೆದ ಚಿಲುಮೆಗಳು, ಹೆಂಡ ಕುಡಿದೆಸೆದ ಮಗಿ ಕುಡಿಕೆಗಳು, ಅಂಗಿ, ಚಲ್ಲಣ, ಕಾಚ, ಗುಂಡಿ, ಕಾಲ್ಮರಿ ಯಿವೇ ಮೊದಲಾದ ನಸ್ವರವಸ್ತು ಯಿಸೇಷಗಳೂ ದಯ್ವಿಕ ಸ್ಥಾನ ಮಾನವನ ಪಡಕೊಂಡು ಬಿಟ್ಟಿದ್ದವು ಸಿವನೇ.. ಅವರಿವರು ಯಿವರವರ ಸರೀರಗಳನು ಕಬ್ಜಾ ಮಾಡಿಕೊಂಡು ಪ್ರಕಟವಾಗುತಲಿದ್ದುದೇನು? ತಾನು ಪಲಾನ ಯಿಂಥಾತನೆಂದು ಸಾರಿ ಹೇಳುತಲಿದ್ದುದೇನು? ವಂದೊಂದು ಸಮಾದಿs ಸುತಮುತ್ತ ಯೇಳುತಲಿದ್ದ ಪ್ರಹರಿ ಗೋಡೆಗಳೇನು? ಅವರಿವರಿಗೆ ಯಿವರವ ಪಂಗಡಗಳು ಹುಟ್ಟಿಕೊಳ್ಳುತಲಿದ್ದುದೇನು? ಅಹರ್ನಿಶಿ ಪುಜಿ ಪುನಸ್ಕಾರ ನಡೆಯುತಲಿದ್ದುದೇನು? ಯಿಡೀ ಪಟ್ಟಣದ ತುಂಬೆಲ್ಲ ದೂಪದೀಪ ಲೋಬಾನದ ಹೊಗೆ ದಟ್ಟಯಿಸುತಲಿದ್ದುದೇನು? ತಮ್ಮೊಂದೊಂದು ಕಾಯಿಲೆ, ಕಸಾಲೆ ಕಷ್ಟ ಕಾರ್ಪಣ್ಣೇವುಗಳ ನಿವಾರಣಾರ್ಥ ಸಲುವಾಗಿ, ತಮ ತಮ್ಮೆದೆಗಳೊಳಗೆ ಚಕ ಚಕನೆ