ವಿಷಯಕ್ಕೆ ಹೋಗು

ಪುಟ:Aramane.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಲೆಗೆ ಕೆಡವಿಕೊಂಡಿದ್ದನು.

ಆ ರಾತ್ರಿಕೂಡ ಅವರಿಬ್ಬರೂ...

ಆ ಕಡೆಯಿಂದವನೂ ಯೀ ಕಡೇಲಿಂದೀತನೂ ರಿಕ್ತ ಹಸ್ತಂಬುಲತೋ ಬಂದು ಕನ್ನೀರವ್ವನ ಬಾವಿ ಕಟ್ಟೆಯ ಮ್ಯಾಲ ಕೂತು ತಮ ತಮ್ಮ ಅನುಭವ ಗಳನ್ನು ಹಂಚಿಕೊಳ್ಳತೊಡಗಿದರು. ಯಷ್ಟೋ ಹೊತ್ತಿನ ತನಕ ಅಗೋ ಅಲ್ಲಿ ಮೂಡಣದ ತಲಬಾಲಕ ಮ್ಯಾಲ ಬೆಳ್ಳಿ ಚುಕ್ಕಿ... ಯಿಗೋ ಯಿಲ್ಲಿ ಅಂಜಿಣಿ ಬತೇರಿಯಂಥ ಮೋಟುಗೋಡೆ ಮ್ಯಾಲೇರಿ ಕೊಕ್ಕೋಕೋss ಯಂದು ಗಂಟಲ ಶಹನಾಯಿ ನುಡಿಸಿತು. ಕ್ರಮೇಣ ಬೆಳಕು ಮಿಸುಕಾಡುತಾ.. ಅಗಲವಾಗುತಾ ಹೋಯಿತು. ವೂರ ಕಡೇಲಿಂದ ಪಕ್ಕವಾದ್ಯಗಳೋಪಾದಿಯಲ್ಲಿ ಆಕಳಿಕೆ ಸದ್ದು, ದನಕರುಗಳ ಅಂಬಾ ಸದ್ದು, ಕೂಸು ಕಂದಮ್ಮಗಳ ಛೀಟಾರನೆ ಚೀರಿಕೊಳ್ಳುತ್ತಿರುವ ಸದ್ದು, ವಂದರ ಹಿಂದೊಂದ ರಂತೆ ಕೇಳಿಬರಲಕ ಹತ್ತಿದವು. ವೂರೊಳಗ ಅಡ್ಡಾಡಲಕಂತ ಹೋಗಿದ್ದ ವಂದೆರಡು ಗೂಗೆಗಳು ಲಗುಬಗೆಯಿಂದ ಹಾರುತ ಬಂದು ಬಾವಿಯ ಪೊಟರೆಯೊಳಗೆ ತೂರಿಕೊಂಡವು.

ಯಿನ್ನೇನು ಪುಟ್ಟಂಪುರುತಿ ಬೆಳಗಾಗಲಕ ತಡ ಹಿಡಿಯದು. ಕಡುದಮ್ಮನ ಹಳ್ಳದ ಕಡೇಕ ಹೋಗಿ ಯಲ್ಡಾಕಾದರೂ ಕುಂತೆದ್ದು ಬರೋಣಾಂತ ಅವರಿಬ್ಬರ ಅಗಸೆ ಬಾಕಲಿಂದೊಡ ಮೂಡಿದ್ದ ಹಾದಿಗುಂಟ ನಡೆಯುವಷ್ಟರಲ್ಲಿ.. ಅಗೋ ಅಲ್ಲೊಂದು ಗುರುತು, ಯಿಗೋ ಯಿಲ್ಲೊಂದು ಗುರುತು.. ಮತ್ತಲ್ಲೊಂದು ಗುರುತು ಮಗುದಿಲ್ಲೊಂದು ಗುರುತು.. ವಂದೊಂದು ಗುರುತನ್ನು ಪರದಕ್ಷಿಣೆ ಹಾಕಿದರಂತೆ.. ಬಗ್ಗಿ ನೋಡಿದರಂತೆ.. ಅದರೊಳಗಿಳಿಯಲು ಪ್ರಯತ್ನಿಸಿದರಂತೆ.. ಅವು ಯೇನೆಂಬುದನ್ನು ಅರ್ಥ ಮಾಡಿಕೊಳ್ಳಲಕೆಂದು ದೂರದ ಪಹರೆ ಗೋಡೆಯನ್ನೇರಿ ನೋಡಿದರಂತೆ.. ಅವು ಪಾದದಾಕಾರದ ಹೆಜ್ಜೆ ಗುರುತುಗಳಾಗಿದ್ದವಂತೆ. ಹೆಜ್ಜೆ ಗುರುತುಗಳೇ ಹಿಂಗಿರಬೇಕಾದರ ಅಡ್ಡಾಡಿದೋರು ಹೆಂಗಿರಬ್ಯಾಡ? ಆ ಆಕಾರವನ್ನು ಕಲ್ಪನ ಮಾಡಿಕೊಳ್ಳುತಾ, ಮಾಡಿಕೊಳ್ಳುತಾ ಹೊಟ್ಟೆ ರುಮ್ಮಂದಗಾತಂತೆ.. ಬುಳ್ಳಂತ ದೋತರದೊಳಗ ವಂದಾನೆ ಮಾಡಿಕೊಂಡರಂತೆ.. ಬವಳಿ ಬಂದಂತಾಗಿ ಬಿದ್ದೆದ್ದರಂತೆ. ಬಿದ್ದೆದ್ದವರೆ ತಡಕೊಳ್ಳಲಾರದೆ ಲಬೋ ಲಬೋ ಬಾಯಿ ಬಡ ಕೊಂಡರು. ಆ ಸಬುಧಕ್ಕೆ ಮಂದಿ ತಮ ತಮ್ಮ ಮನೆಯೊಳಗಿಂದ ಹೊರಗುದುರುತ ಬಂದು “ಯಾಕರಪ್ಪಾ.. ಯೇನಾತರಪ್ಪಾ” ಯಂದು ಕೇಳಿದರು.. ವಬ್ಬೊಬ್ಬರಿಗೂ ಬೊಟ್ಟು ಮಾಡಿ