ವಿಷಯಕ್ಕೆ ಹೋಗು

ಪುಟ:Aramane.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯೀರ್ಯದ ಅಕ್ಷಯ ಪಾತ್ರೆಯೇ ತನ್ನ ಕಿಪ್ಪೊಟ್ಟೆ ಕೆಳಗಿರುವುದೆಂದೂ ಅನ್ಯಥಾ ಭಾವಿಸಿಕೊಂಡಿರುತ್ತಿದ್ದುದೇ ಅದಕ್ಕೆ ಕಾರಣ. ನಿದ್ದೆಗಣ್ಣಲ್ಲಿ ತಾನೂ ಯಚ್ಚರಗೊಂಡೆನು ಯಂದು ಸಾರಲಿಕ್ಕೆ ಹೋ ಯಂದಾ ಕಳಿಸುವುದು ಮಾಮೂಲು. ಅದರಂತೆ ಕಯ್ಯಿಗಳನ್ನಾಡಿಸಿ ನೋಡಿಕೊಂಡ. ಕಯ್ಗೆ ಅದು ತಗಲಲಿಲ್ಲ.. ಮಲಗಿಕೊಳ್ಕೋ ಮುಂದುಗಡೆ ಇದ್ದಂಥ, ರಾತಿರಿ ಪರ್ಯಂತರ ಜಾಗರಗೊಂಡಿದ್ದಂಥ ಅದು ಯಲ್ಲೋಯ್ತು? ಅದು ತನ್ನ ಸರೀರದ ಮ್ಯಾಲಿಲ್ಲ ಯಂದು ಅವರಿವರಿಗೆ ಹೇಳಲಕ, ಕೇಳಲಕ ನಾಚಿಕೊಂಡು ಆ ಪುರುಷಪುಂಗವನು ಹಾಸಿಗೆ ಯಲ್ಲೇನಾದರೂ ವುದುರಯ್ತಾಗಿದರಯ್ತಾ ಯಂದು ಕವುದಿ ಕಂಬಳಿ ಕೊಡಕೊಡವಿ ನೋಡಿದ, ಯಲ್ಲೂ ಕೋರೈಯಿಸಲಿಲ್ಲ. ಅಲ್ಲೇನಾದರಯ್ತಾ, ಯಿಲ್ಲೇನಾದರಯ್ತಾ ಯಂದು ಮಲಿಕ್ಕೆಂಭೋ ಕೋಣೆಯ ಮೂಲೆ ಮುರುಕಟ್ಟುಗಳನ್ನು ಬೆದಕಾಡಿದ, ಗೋಚರಾಗಲಿಲ್ಲ. ಬುಟ್ಟ ದೋತರ ದೊಳಗೇನಾದರು ಸಿಕ್ಕಂಡಿರಬೌದಾ ಯಂದು ಕೊಡವಿದ, ವುದುರಲಿಲ್ಲ. ರಾತ್ರಿತನ್ನ ಕೂಡೆ ಯಾರು ಮಲಿಕ್ಕಂಡಿದ್ದರೆಂಬುದನ್ನು ನೆಪ್ಪು ಮಾಡಿಕೊಂಡ. ಮೂರನೆಯಾಕೆಯಾದ ಗಂಗೀ ಯಂದು ಕೂಗಿದ. ಅಡುಗೆ ಮನೆಯಿಂದ ಬಂದ ಆಕೆ ‘ಯ್ಯೋನು’ ಯಂದು ಕೇಳಿದಳು. ‘ನಂದೇನಾದರೂ ನಿನ್ನತ್ರಅಯ್ತಾ’ ಯಂದು ಕೇಳಿದ. “ಯಾವುದು? ಯೇನು ಕಥೆಯು?” ಆಕೆಗೆ ಅರ್ಥ ಆಗಲಿಲ್ಲ.. ಹೇಳದೆ ಕೇಳದೆ ಆಕೆಯ ಸೀರೆಯನ್ನು ಜಾಲಾಡಿದ, ವುದುರಲಿಲ್ಲ. ತಾನು ಗಾಢ ನಿದ್ದೆಯಲ್ಲಿದ್ದಾಗೇನಾದರೂ ಅದು ರೋಸಿ ವಾಯು ಯಿಹಾರಕ್ಕೇನಾದರೂ ಹೋಗಿರಬೌದಾ ಯಂದು ಅನುಮಾನಿಸಿದ. ಅದು ಹಾಂಗ ಯಾವತ್ತೂ ಹೋದುದಿಲ್ಲ.. ಆದರೂ.. ಮನೆಯ ಮೂಲೆ ಮೂಲೆಯಲ್ಲಿ.. ಅಡಕಲ ಗಡಿಗೆಗಳಲ್ಲಿ.. ಬಟ್ಟೆ ಗಂಟುಗಳಲ್ಲಿ.. ದವಸ ಧಾನ್ಯ ತುಂಬುವ ವಾಡೇವುಗಳಲ್ಲಿ.. ಹಿತ್ತಲಲ್ಲಿ.. ಅಂಗಳದಲ್ಲಿ.. ಮರಗಿಡಗಳ ಪೊಟರೆಗಳಲ್ಲಿ ಹುಡುಕಾಡೇ ಹುಡುಕಾಡಿದ. ಮನೆ ಯಜಮಾನನಾದ ಆತನ ಹಾರಾಟ ಹುಡುಕಾಟ ಕಂಡು ಮನೆಮಂದಿಯು ಕಳಕೊಂಡಿರುವುದಾದರೂ ಯೇನು? ಬಂಗಾರದ್ದಾ? ಬೆಳ್ಳೀದ್ದಾ.. ಯಲ್ಲಿಟ್ಟಿದ್ದಿ? ಹೆಂಗಿಟ್ಟಿದ್ದಿ ಯಂದು ಕೇಳಿದರು. ಅದಕ್ಕಾತ ವುತ್ತರವನ್ನು ಲಗೂನ ಕೊಡಲಿಲ್ಲ.. ತಡವರಿಸಿದ. “ಸಂದೂಕದಲ್ಲೇನಾದರೂ ಯಿಟ್ಟು ಮರತುಬಿಟ್ಟಿರುವಿಯೇನೋ ನೋಡು ನೀನು ಮೊದಲೇ ವುರುವುಗೇಡಿ” ಯಂದು ಹಿರಿಯ ಹೆಂಡತಿ ಸಲಹೆ ನೀಡಿದಳು. ತಲತಲಾಂತರದಿಂದ ಬಂದಿದ್ದಂಥ ಸಂದೂಕದ ಬಾಯಿ ತೆರೆದು ಬೆದಕಾಡಿದ. ಆದರದು ಥಳಥಳ