ವಿಷಯಕ್ಕೆ ಹೋಗು

ಪುಟ:Aramane.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೋಳದ ಬೆನ್ನಮ್ಯಾಲ ಟಗರು ಸವಾರಿ ಮಾಡೋ ಕಾಲ ಬಂದೀತು ಭೋ ಪರಾಕ್” ಯಂದು ಕೂಗಿ ವುದುರಿಸಿದನು.

ನರಸಿಂಗನ ಬಾಯಿಯ ಗವ್ವರದಿಂದ ಹೊರಗೆ ತುಳುಕಿದ ಕಾರಣಿಕ ಪಕ್ಷಿಯು ಕೇಳು ಕೇಳುತಿರಲಕ್ಕ ಯಿಡೀ ಪಟ್ಟಣವನ್ನು ಆವರಿಸಿದ್ದಾಗಲೀ, ಸಾವುರ ರೆಕ್ಕೆಗಳನು ಮುಡಕೊಂಡ ದ್ದಾಗಲೀ, ಹಾರುತಾರುತ ಹೋಗಿ ಅಂತರ್ಥಾನಗೊಂಡದ್ದಾಗಲೀ ತಡಾಗಲಿಲ್ಲ. ಯೋಚಿಸ ತೋಚಿಸುತ್ತ ಮಂದಿ ಬೆಕ್ಕಸ ಬೆರಗಾಗಿ ಬಿಟ್ಟಿತು. ಕಾರಣಿಕದ ವಂದೊಂದು ಅರ್ಥ ಪೋಣಿಸುತ್ತ ಗಡಗಡ ನಡುಗಲಾರಂಬಿsಸಿತು. ಆಯ್ ಕಾಯ್ ಜಾಯ್ಕಾಯ್ ಬೆಂಕೀಲಿ ಬೆಂದ್ಕಾಯ್ ಆಗಿಬಿಟ್ಟಿತು. ನೋಡುನೋಡುತಿರಲಿಕ್ಕೆ ವಳಿತದೊಳಗಿದ್ದ ನಾಕೂ ಗುಡ್ಡಗಳಿಗೆ ಅಂಟರು ಪುಳುಕೆಗಳಂತೆ ಅಂಟರಗಾಲು ಹಾಕಿಬಿಟ್ಟಿತು ಮಂದಿ, ಗುಡ್ಡದ ವಂದೊಂದು ಕೋಡುಗಲ್ಲನ್ನವುಚಿ ಕೊಂಡು ಮೋಬಯ್ಯ.. ಮೋಬಯ್ಯ.. ತಾಯೀ ಯಂದೊರಲಿತು ಮಂದಿ, ಮೊರಲೀ ಮೊರಲೀ ತಮ ತಮ್ಮ ಗಂಟಲನ್ನು ಸವೆಸಿಕೊಂಡಿತು ಮಂದಿ. ಗಾವುದ ದೂರ ಹೋಗುವಂತೆ ವುಸುರು ಬಿಟ್ಟಿತು ಮಂದಿ, ಯೋಜನ ದೂರದವರೆಗೆ ನಾಲಗೆ ಚಾಚಿತು ಮಂದಿ....

  • * * *

ಆದವಾನಿ ವಳಿತದ ಮೂಲೆಯಲ್ಲಿದ್ದ ಕುರುಮಯ ಗೂಡೆಂಗೆ ಥಾಮಸು ಮನ್ರೋ ಸಾಹೇಬನು ಯಾಕೆ ಹೋಗಬೇಕಾಗಿ ಬಂದಿತೆಂದರೆ? ಸರಕಾರದ ಯಾದಿಯಲ್ಲಿ ಅದು ಯಿರಲಿಲ್ಲ. ಅಲ್ಲಿ ಜಮೀಂದಾರಿಕೆಯ ವುಪಟಳಯಿರಲಿಲ್ಲ. ಮ್ಯಾಲು ನೋಟಕ್ಕೆ ಅಲ್ಲಿ ಕೇವಲ ಯರಡು ಜಾತಿಗಳು. ಅವೆಂದರೆ ಬ್ಯಾಡರು ಮತ್ತು ಕುರುಬರು ಮಾತ್ರ. ವಂದೊಂದು ಜಾತಿಯೊಳಗೆ ಹತ್ತಾರು ವುಪಜಾತಿ ಪಂಗಡಗಳಿದ್ದವು. ವಂದೊಂದು ವುಪಜಾತಿಗೂ ವಬ್ಬೊಬ್ಬ ಮುಖಂಡನಿದ್ದನು. ಆತನು ತನ್ನ ಕೋಮನ್ನು ಯಿನ್ನೊಂದು ಕೋಮಿನ ಯಿರುದ್ದ ಸದಾ ಯತ್ತಿಕಟ್ಟುತ ಲಿದ್ದನು. ಪರಸ್ಪರ ಕಣ್ಣು ಕೆಂಪಗೆ ಮಾಡಿಕೊಂಡು ನೋಡುವುದು, ಹಲ್ಲು ಮಸೆಯುವುದು ನಡೆದೇಯಿತ್ತು. ಕ್ಷುಲ್ಲಕ ಕಾರಣಗಳಿಗಾಗಿ ವುಪ ಪಂಗಡಗಳ ನಡುವೆ ಜಗಳ, ಹೊಡೆದಾಟ ವರುಷೊಪ್ಪತ್ತಿನಲ್ಲಿ ಮೂರುನಾಕು ಸಲವಾದರೂ ನಡಯದೇ ಯಿರುತ್ತಿರಲಿಲ್ಲ.. ರಾಮಾರಗುತ ಮಾಡಿಕೊಂಡವರು ಗ್ರಾಮದ ಗಡಿ ದಾಟಿ ರಕ್ಷಕ ಠಾಣೆಗೆ ಹೋಗಿ ದೂರು ಸಲ್ಲಿಸುತ್ತಿರಲಿಲ್ಲ.. ಕುಂಪಣಿ ಸರಕಾರದ ಸಾಯದಿಂದ ಚಿಕಿತ್ಸೆ ಪಡೆಯುತ್ತಿರಲಿಲ್ಲ. ಹಾಗೆ ಮಾಡುವುದರಿಂದ ತಮ್ಮ ಕೋಮಿನ ಕುಲದೇವತೆ ಮುನುಸಿಕೊಳ್ಳುತ್ತಾಳೆ ಯಂಬ ಅಚಲ