○○ 2ぶごc忌○ ಕಸಿವಿಸಿಗೊಂಡ ಮನಸಿನಿಂದ ರಾಯರೂ ಎದ್ದರು. " ತಪ್ಪ ತಿಳ್ಕೊಬೇಡ ಬನಶಂಕರಿ.ನನ್ನ ಒತ್ತಾಯವಿಲ್ಲ......ನಾಳೆಯೋ ನಾಡಿದ್ದೆಯೋ ಹೇಳು..." ಎನ್ನುತ್ತ ಅವರು ಅಲ್ಲಿಂದ ಹೊರಟುಹೋದರು. ఆళుక్కిద్ద లీలాభేతిచేుయాగి అబ్బి అల్లే సంకెళు. జుళజ3ళు సద్దు ಮಾಡಿತು ಹರಿಯುತ್ತಿದ್ದ ಭದಾನದಿಯ ನೀರು.. ದೂರದಲ್ಲಿ ಸೇತುವೆಯ ಮೇಲಿಂದ ಒಂದು ಎತ್ತಿನ ಗಾಡಿ ಗಡಗಡನೆ ಆಚೆಯ ದಡಕ್ಕೆ ಸಾಗಿತು. ಪೂರ್ವ ದಿಕ್ಕಿನಲ್ಲೆಲ್ಲೆಯೋ ದೂರದಲ್ಲಿ ಉದಯಿಸುತ್ತಿದ್ದ ಸೂರ್ಯನ ಹಸಿ ಕಿರಣಗಳು ತೂರಿಬಂದುವು. ಅಲ್ಲಿ ಇಲ್ಲಿ ಒಬ್ಬೊಬ್ಬರಾಗಿ ಬಂದ ಜನರ ಆಕೃತಿಗಳು ಕಾಣಿಸಿಕೊಂಡುವು. ಅಮ್ಮಿಯೇನೋ ಕದಲದೆ ನಿಂತಳು. ಎದುರಿಗಿದ್ದುದು ಅಪಾರವೆಂಬ ಭ್ರಮೆ ಹುಟ್ಟಿಸುತ್ತಿದ್ದ ಜಲರಾಶಿ, ಆದರ ಮುಂದೆ నిర్వేకెనెళాగిద్దెళు ఆచిు. * ತನಗೆ ರಕ್ಷಣೆ ಕೊಟ್ಟಿದ್ದ ಶಾಸ್ತ್ರಿಗಳ ಮನೆಯ ಬಟ್ಟೆಗಳ ರಾಶಿ ಮೂಕವಾಗಿ ಆಕೆಯನ್ನೆ నేూడాiుత్తిల్కే. 3 Ω Ο ಎರಡು ಮೂರು ದಿನಗಳಲ್ಲ, ಆರೇಳು ದಿನಗಳಾಗಿದ್ದುವು–ನದಿಯ ದಂಡೆಯಲ್ಲಿ ನಾರಾಯಣರಾಯರೊಡನೆ ಅಮ್ಮಿ ಮಾತನಾಡಿ, ಆಮೇಲೆ ಆತ್ತ ಹೋಗುವ ಸಾಹಸ ಮಾಡಿರಲ್ಲಿಲ್ಲ ಆಕೆ. ತಾನು ಏನು ಉತ್ತರ ಹೇಳಬೇಕೆಂಬುದೇ ಅವಳಿಗೆ ತಿಳಿಯದಾಗಿತು. ದೊಡ್ಡ ಸಮಸ್ಯೆಯಾಗಿ ಕುಳಿತಿತು ಅಮ್ಮಿಯ ಬದುಕು.. ಅದಕ್ಕೆ ಆಕೆಯೇ ಪರಿಹಾರ ಹುಡುಕಬೇಕು. ಅದನ್ನು ಹುಡುಕುವಷ್ಟು, ಯೋಚಿಸುವಷ್ಟು ಚೈತನ್ಯವೂ ಅವಳಲ್ಲಿ ಉಳಿ ದಿರಲಿಲ್ಲ, ಯಾರೊಡನಾದರೂ ಅದನ್ನು ಕುರಿತು ಮಾತನಾಡಬೇಕು ಆಕೆ. ಯಾರೊಡನೆ? .ಇಲ್ಲ, ಸುಂದರಮ್ಮನೊಡನೆ ಆ ವಿಷಯವೆತುವುದು ಸಾಧ್ಯವೇ ಇರಲಿಲ್ಲ. ಅಜ್ಜಿಯ ಮರಣದ ದಿನ ಮುಂಜಾವದಲ್ಲಿ ನಾರಾಯಣರಾಯರು ಅಮ್ಮಿಯ ಮನೆಯ ಒಳಕ್ಕೆ ಬಂದಿ ದ್ದರು. ಅದನ್ನೂ ಸುಂದರಮ್ಮನಿಗೆ ಅಮ್ಮಿ ಹೇಳಿಯೇ ಇರಲಿಲ್ಲ, ಅನಂತರ ನದೀ ದಂಡೆಯ ಮಾತುಕತೆ..ಯಾವುದೂ ಸುಂದರಮ್ಮನಿಗೆ ಗೊತ್ತಿರಲಿಲ್ಲ. ಸ್ವಲ್ಪ ದಿನಗಳಲ್ಲೆ ಸುಂದರಮ್ಮ ಓಡಾಡತೊಡಗಿದಳು. ತನ್ನ ಸೇವೆಯಲ್ಲಿ ಎಷ್ಟೊಂದು ಸೊರಗಿಹೋಗಿದ್ದಳು ಬನಶಂಕರಿ! - " ಅಂತೂ ನನ್ನ ಬಾಣಂತನ ನಿನಗೊಂದು ಕತ್ತೆ ದುಡಿತ ಆಗೊಮ್ಬೋಯ್ತಲ್ಲೇ..." "ಎಂಥ ಮಾತಕ !" ಅವಳು ಹಾಗೆಯೇ, ಆ ಅಮ್ಮಿ ಬಲಿಕೊಡಲು ಗೊತಾದ ಯಜ್ಞ ಪಶುವಿನ ಹಾಗೆ. ಸಾಧು ಪಾಣಿ. ಒಂದು ಆಸೆ, ಒಂದು ಬಯಕೆ, ಬಾಯಿ ತೆರೆದು ಒಂದು ಮಾತು?... ಗೆಳತಿಯ ಹೃದಯದೊಳಗಿನ ಕೋಲಾಹಲವನ್ನು ಸುಂದರಮ್ಮ ತಿಳಿಯದೇ ಹೋದಳು. ಅಮ್ಮಿಯ ಹಿತಚಿಂತನೆಯನ್ನೇ ಯಾವಾಗಲೂ ಮಾಡುತ್ತಿದ್ದ ಆಕೆ, ತನ್ನ ಗೆಳತಿಯ ಜೀವನದ
ಪುಟ:Banashankari.pdf/೧೦೪
ಗೋಚರ