ಪುಟ:Banashankari.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ ಕ್ಷಣಾರ್ಧವೂ ಇಡಿಯ ಯುಗವಾಗಿತ್ತು ರಾಯರ ಪಾಲಿಗೆ. ಸ್ವಲ್ಪ ಸ್ವರ ತಗ್ಗಿಸಿ ರಾಯರು, "ಇನ್ನೂ ನಿಂತೇ ಇದೀಯಲ್ಲೇ.." ಎಂದರು. ಬಂದೆ.." ಎಂದಳು ಅಮ್ಮಿ ದೀಪ ಆರಿಸುತ್ತಾ, ಕೇಳಿಸದಷ್ಟು ಕ್ಷೀಣವಾಗಿ ಆಕೆಯ ಉತ್ತರ ಹೊರಕ್ಕೆ ನುಸುಳಿತು. ಹತ್ತಿರ ಬಂದು ತನ್ನ ಬಳಿಯಲ್ಲಿ ಮಲಗಿಕೊಂಡ ಅಮ್ಮಿಯನ್ನು ರಾಯರು ತನ್ನಡೆಗೆ ಎಳೆದರು. " ಯಾಕೆ ಶಂಕರಿ-ಕೋಪವೆ ನನ್ಮೇಲೆ? " "ಇಲ್ವಲ್ಲಾ!" "ಮತ್ತೆ? ಇಷ್ಟು ದಿನ ಆದ್ರೂ---" ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. "ಇಚ್ಚೆ ಇಲ್ವೆ ನಿಂಗೆ?" ಆ ಮೌನವನ್ನು ನಾಚಿಕೆ ಎಂದು ಭಾವಿಸಿದ ರಾಯರಿಗೆ ತುಸು ಸಮಾಧಾನವಾಯಿತು.

' ಹುಂ! ಬರೇ ಬೆಪ್ಪ!" 

ಮಾತನಾಡಲೇ ಇಲ್ಲ ಅಮ್ಮಿ, ರಾಯರು ಮುಂದಾದರು-+

--ಬೆಳಿಗ್ಗೆ ಎದ್ದ ರಾಯರಿಗೆ ನಿಜವಾಗಿಯೂ ತಲೆ ನೋಯುತ್ತಿತ್ತು.. ಬಲಾತ್ಕಾರ
ಮಾಡಿದೆನೆಂದು ತಿಳಿದು ಕಸಿವಿಸಿಗೊಂಡಿತು ಅವರ ಮನಸ್ಸು.. ಅಮ್ಮಿ ಆಗಲೆ ಎದ್ದು
ಹಿತ್ತಿಲಿಗೆ ಹೋಗಿದ್ದಳು. ಆಕೆ ಬರುವುದಕ್ಕೆ ಮುಂಚೆಯೇ ರಾಯರು, "ಬರ್ತಿನಿ ಶಂಕರೀ"
ಎಂದು ಗಟ್ಟಿಯಾಗಿ ಕೂಗಿ ನುಡಿದು ಹೊರಟರು.

ಆ ಸ್ವರ ಕೇಳಿ ಅಮ್ಮಿ ಬೇಗನೆ ಒಳಕ್ಕೆ ಬಂದರೂ ಅವರು ಕಾಣಸಿಗಲಿಲ್ಲ. ಮಗುವಷ್ಟೇ ಅಳುತ್ತಿತ್ತು. ಅಮ್ಮಿ ಕಂದನನ್ನೆತ್ತಿಕೊಂಡು.ಆಕೆ ಬರುವುದಕ್ಕೆ ಬಂದರೂ ಅವದು ಕಾಣಸಿಗಲಿಲ್ಲ.ಮಗುವಷ್ಟೇ ಅಳುತ್ತಿತ್ತು.ಅಮ್ಮಿ ಕಂದನನ್ನೆತ್ತಿಕೊಂಡು ಮುದ್ದಿಸಿ ಎದೆಗವಚಿಕೊಂಟಳು.ಬಿಸಿಬಿಸಿಯಾದ ಕಂಬನಿಯಿಂದ ಆಕೆಯ ಕಪೋಲಗಳು ತೋಯ್ದುವು. ರಾಯರು ನಾಲು ದಿನ ಬರಲಿಲ್ಲ, ಬಿಡುವಿಲ್ಲವೆಂದಷ್ಟೆ ಹೇಳಿಕಳುಹಿದರು.

" ದೇವಸ್ಥಾನಾಗೇ ಉಳಕೊಂಡವ್ರೆ," ಎಂದ ತಿಮ್ಮಪ್ಪ, ಹೋಗಿ ನೋಡಿ ಬಂದು. ಐದನೆಯ ದಿನ ಅವರು ಬಂದಾಗ ಅಮ್ಮಿ, ಅವರ ಕೊರಳಿಗೆ ಜೋತುಬಿದ್ದಳು.: “ನನ್ನು ತಪ್ಪಾಯು, ಏನೂ ತಿಳಿದ ಮಗು ನಾನು.. ಅದಕ್ಕೆ ನೀವು ಕೋಪಿಸ್ಕೊಳ್ಳೋದೆ?" *

“ನಾನು ಕೋಪಿಸ್ಕೊಂಡೇಂತ ಯಾರೇ ನಿಂಗೆ ಹೇಳ್ದೋರು ? " “ನನಗಷ್ಟೊ! ಗೊತಾಗಲ್ವೇನು ? ” ಹೋಗಲಿ ಬಿಡು. ಸುಮ್ಸುಮ್ನೆ ಏನಾರೂ ಅನ್ಬೇಡ..."

"ಕ್ಷಮಿಸ್ದೆ ಅಂತ ಹೇಳಿ."
“ಇಷ್ಟವಿಲ್ಲದಿದ್ರೂ ನಿಂಗೆ ತೊಂದ್ರೆ ಕೊಟ್ನಿಲಾ, ಅದಕ್ಕೆ ನೀನು ಕ್ಷಮಿಸ್ಬೇಕು ನನ್ನ." ಅಮ್ಮಿ ಮೂಕಳಾಗಿ, ರಾಯರ ಎದೆಯಲ್ಲಿ ಮುಖವಿಟ್ಟು ಬಿಸಿಯುಸಿರು ಬಿಡುತ್ತಾ, ರಾಯರ ಬಲಗೈಯ ಬೆರಳುಗಳೊಡನೆ ಆಟವಾಡಿದಳು.

ಹೀಗೆ, ಮಗುವಿನ ತಾಯಿಯಾದ ಅಮ್ಮಿ ಮತ್ತೆ ಪ್ರೇಯಸಿಯಾದಳು.