2ぶgo引O Q3.3. "ನೀನು ಯಾಕೆ ಹೊರಗೆ ಹೋಗ್ವೇಕಾಗಿತ್ತೂಂತ?" " ಏನು? ದೇವಸ್ಥಾನಕ್ಕೂ ಹೋಗೂದ್ದೆ ನಾನು?" "ನಿನಗೊಂದೂ ಅರ್ಥವಾಗೋದಿಲ್ಲ ಶಂಕರಿ. ಎಂಥೆಂಥ ಮಾತು ಕೇಳಿ ನಾನು ಬದುಕ್ತಿದೀನೀಂತ ನಿನಗೇನಾದರೂ ಅರ್ಥವಾಗುತ್ತೇನು?" "ನೀವು ಆ ಮಾತು ಕೇಳಿರೋದೆಲ್ಲ ನನ್ನಿಂದಾಗಿ–ಅಲ್ಲ?" " ఆర్షి—చెుత్త్క్వేనJంతిద్ద ? " ಕಹಿಯಾದುದೇನೋ ಬಾಯಿತುಂಬ ಹರಡಿದ ಹಾಗಾಯಿತು ಅಮ್ಮಿಗೆ, ಉಗುಳ ಲಾಗದ ಎಂಜಲನ್ನು ನುಂಗುತ್ತ ಅವಳೆಂದಳು : "ನನ್ನ ಉದಾರ ಮಾಡೋಕೆ ಹೊಗಿ ನಿಮಗೀ ಗತಿ ಬಂತು ! " " ಮುಚ್ಚಿ ಬಾಯಿ יין ರಾಯರೆದ್ದು ಬೀದಿಗಿಳಿದು ಹೊರಟೇಹೋದರು. ಅಮ್ಮಿ ಅಡುಗೆ ಮಾಡಲಿಲ್ಲ, ಚಾಪೆಯ ಮೇಲೆ ಅಳುತ್ತ ಬಿಸುಸುಯುತ್ತ ಹೊರ ೪ಾಡಿದಳು. ಪಟ್ಟ ಕೂಸು ಬಂದು, ಬಾಳುವೆಯಲ್ಲಿ ಪರಮ ಸುಖ ಎನ್ನುವುದು ತನಗೆ ದೊರಕಿದಾಗಲೇ ಹೀಗಾಗಬೇಕೆ? ತನ್ನನ್ನು ಪ್ರೀತಿಯಿಂದ ಕರೆದು ಅಭಯ ನೀಡಿದವರೇ モ Ce@ 33F。強? ಮೊದಲ ಉದ್ವೇಗ ಶಮನವಾದಂತೆ ಅಮ್ಮಿ ತಪ್ಪ ತನ್ನದೇ ಇರಬಾರದೇಕೆ ಎಂದು ಯೋಚಿಸಿದಳು. ಮಗುವನ್ನೆತ್ತಿಕೊಂಡು ನಾಲು ಜನರ ಮುಂದೆ ಜಂಭದಿಂದ ಮೆರೆಯ ಬೇಕೆಂಬ ಉದ್ದೇಶದಿಂದಲೇ ಅಲ್ಲವೆ ತಾನು ದೇವಸ್ಥಾನಕ್ಕೆ ಹೋದುದು! ರಾಯರ ಹೆಂಡತಿಗೆ ತಾನೇನೂ ಅಂದಿರಲಿಲ್ಲ ಅನ್ನದೇ ಇದ್ದರೂ ಮುಖ್ಯ ಅಲ್ಲಿಗೆ ಹೋದುದು ತಪ್ಪಾಯಿತು. ಅವರು ಭೀಮಾರಿ ಹಾಕಿದಾಗಲಾದರೂ ತಾನು ಸುಮ್ಮನಿರಬೇಕಿತ್ತು, ಅವರು ಮುನಿದರೆ ತನಗೆ ಬೇರೆ ಯಾರು ಗತಿ ? ಅವರಿಗೂ ಇದಿರಾಡಿದೆನಲ್ಲವೆ? ಹಾಗೆ ಮಾಡಬಾರದಿತು. ಆದರೆ ಹಾಗೆಂದು ಈಗ ಯೋಚಿಸಿ ಏನು ಪ್ರಯೋಜನ? ಸ್ವಲ್ಪ ವಿಚಿತ್ರವಾಗಿಯೇ ತೋರುತ್ತಿದ್ದ ಮನೆಯೊಳಗಿನ ಶಾಂತತೆಯನ್ನು ಗಮನಿಸಿ ತಿಮ್ಮಪ್ಪ ಬಾಗಿಲ ಬಳಿ ನಿಂತು, " ಯಾಕ್ರವಾ, ಧಣೀರು ಹೊಂಟೋದಾ?" ಎಂದ. " యోనెచ్చా," ఎందోళు ఆమ్మి. ಆ ಸ್ವರವನ್ನು ಕೇಳಿ ತಿಮ್ಮಪ್ಪ, ಏನಾಗಿದ್ದಿರಬಹುದೆಂಬುದನ್ನು ಊಹಿಸಿಕೊಂಡ. " ಏಳಿ ತಾಯಿ, ಹಿಂಗುಪಾಸ ಮನಿಕೊಂಡ್ರೆ ಕಾಯಿಲೆ ಬೀಳ್ತೀರಾ–" ಹಾಗೆ ಹೋದ ರಾಯರು ಒಂದು ವಾರವಾದರೂ ಬರಲಿಲ್ಲ. ಮನೆಗೆ ಬೇಕಾದ ಸಾಮಾನು ಸರಂಜಾಮಗಳನ್ನೇನೋ ತಿಮ್ಮಪ್ಪ ತರುತ್ತಿದ್ದ. ಆದರೆ ಅಮ್ಮಿ ಯಾವುದರಲ್ಲಾ ಆಸಕ್ತಿ ಇಲ್ಲದವಳ ಹಾಗೆ ಹೊತ್ತು ಕಳೆದಳು. ಮನಸ್ಸಿನ ಕಾಹಿಲೆ ಮೈಗೆ ಅಂಟಿಕೊಂಡಿತು. ತಲೆನೋವು ನೆಗಡಿ ಜ್ವರ ಎಂದು ಮಲಗಿಕೊಂಡಳು. ಒಂದು ದಿನ..ಎರಡು ದಿನ-ಮಗು ರಾಜಣ್ಣನ ಸಾಮಿಾಪದಿಂದಲೂ ಅಮ್ಮಿ ನಗು ಮುಖಳಾಗಲಿಲ್ಲ, ಊಟ ಉಪಚಾರ ಯಾವುದರಲ್ಲಾ ಶ್ರದ್ದೆ ಇರಲಿಲ್ಲ ಅವಳಿಗೆ. ಊಳಿಗದ ಚಿಕ್ಕಿ ಆಂದಳು :
ಪುಟ:Banashankari.pdf/೧೩೯
ಗೋಚರ