ಪುಟ:Banashankari.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಅವಳ ಹೃದಯದ ಬಡಿತ ತೀವ್ರವಾಯಿತು. ಕತ್ತಲಲ್ಲೂ ಆನಂದದ ಮುಗುಳುನಗು ಆ ಎಳೆಯ ತುಟಗಳ ಮೇಲೆ ಕುಣಿಯಿತು. "........" "ಮೂಲೆ ಹೊಲದ ಸಮೀಪಕ್ಕೆ ಕಂದೀಲು ಬಂತು. ఆల్ల ? " "........" " ಯಾಕೋ, ಒಬ್ಬನೇ ಇರೋ ಹಾಗಿದೇಂದ್ರೆ..." "ಅಂಚೆಯವನು ಬಂದಿಲ್ವೇನೋ ಹಾಗಾದರೆ?"

  • ಅಥವಾ—"

ಅಮ್ಮಿ ಉಸಿರು ಹಿಡಿದು ಕುಳಿತಳು. ಮುಂದೆ –ಮುಂದೆ ಎಂತಹ ಮಾತುಗಳನ್ನು ಅವಳು ಕೇಳಬೇಕು? ...ನಿಮಿಷಗಳು... ಒಂದು, ಎರಡು, ಮೂರು .. ಹತ್ತು , ಇಪ್ಪತ್ತು... ನಿಮಿಷಗಳು ಯುಗಗಳಾಗುವುದೆಂದರೆ ಹಾಗೆಯೇ ಅಲ್ಲವೇ ? ಇಲ್ಲ ಲಕ್ಷ್ಮೀ, ರಾಮಚಂದ್ರ ಬರ್ಲಿಲ್ಲ... ಕೈ ಬೀಸಿ ಬೀಸಿ ನಡಿಯೋ ರೀತಿ ನೋಡು. ಮುನಿಯಪ್ಪನೇ ಇರಬೇಕು." ಅವರಲ್ಲ-ಮುನಿಯಪ್ಪ, ಅವರು ಚಿಕ್ಕಮಗಳೂರಲ್ಲೇ ಇದಾಗ ವಾರಕ್ಕೆರಡು ಬಾರಿ ಅಲ್ಲಿಗೆ ಹೋಗಿ ಬರುವ ಟಪಾಲಿನ ಮುನಿಯಪ್ಪನ ಆಗಮನವನ್ನು ಅಮ್ಮಿ ಇದಿರು ನೋಡುವುದಿತ್ತು. ಆದರೆ ಈ ದಿನ ಆತನ ಬದಲು ಅವರೇ ಬರಬಾರದಿತ್ತೆ? ಅತ್ತೆಯ ಸ್ವರ ಅನುಮಾನಿಸುತ್ತ ಕೇಳಿತು: " ರಾಮ ಯಾಕೆ ಬರಲಿಲ್ಲವೋ ?" " ದೀಪಾವಳಿ ಲೆಕ್ಕಾಚಾರ-ಹೆಚ್ಚು ಕೆಲಸವಿತ್ತೊ ಏನೋ." ಲಾಟೀನು ಜಿಗಿದು ಜಿಗಿದು , ಅಂಚಿನಿಂದ ಒಮ್ಮೊಮ್ಮೆ ಕಾಲು ಜಾರಿ ಹೊಲಕ್ಕಿಳಿದರೂ ಮತ್ತೆ ಮೇಲಕ್ಕೇರಿ, ಮನೆಯತ್ತ ಬರುತ್ತಿತ್ತು. ಯಾಕೆ-ಇವನು ಓಡಿ ಬರ್ತಿದಾನಲ್ಲಾ!.." ಸದಾ ಶಾಂತವಾಗಿರುತ್ತಿದ್ದ ಮಾವನ ಸ್ವರದಲ್ಲಾ ಕಾತರದ ಭಾವನೆ ಒಡೆದು ತೋರುತ್ತಿತ್ತು ಆಗ.

ಎದುರಿನ ತೋಡಿಗೆ ಅಡ್ಡವಾಗಿದ್ದ ಮರದ ಸೇತುವೆಯನ್ನು ದಾಟಿ ಕಂದೀಲು ಅಂಗಳದ ಬಳಿಗೆ ಬಂತು. ಆದರೆ ಮೆಟ್ಟಲೇರಿ ಮನೆಯನ್ನು ಸಮೀಪಸಲಿಲ್ಲ. "ಮುನಿಯಪ್ಪಾ, ಮುನಿಯಪ್ಪಾ!"

ಉತ್ತರ ಬರಲಿಲ್ಲ ಮುನಿಯಪ್ಪನಿಂದ. ಅತ್ತೆ ಸ್ವಲ್ಪ ಕಸಿವಿಸಿಗೊಂಡೇ ಕೇಳಿದರು : "ಪಾಪ ಜಾರಿ ಬಿದ್ಬಿಟ್ಟನೋ ಏನೋ..." ಅಮ್ಮಿ ಎದ್ದು, ಗೋಡೆಗೊರಗಿ ನಿಂತಳು. ಮಾವ ಹೊರಕ್ಕಿಳಿದು ಅಂಗಳದ ಅಂಚಿನತ್ತ ಧಾವಿಸಿದರು.ಅಲ್ಲಿ ಕಂದೀಲನ್ನು ನೆಲದ