ಪುಟ:Banashankari.pdf/೧೫೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ

ಎಂದೂ ಸಹಿಸಿರಲಿಲ್ಲ.. ಸೀತೆಯ ಬಗೆಗೆ ತನಗಿದ್ದ ಪಕ್ಷಪಾತದ ಧ್ವನಿಯನ್ನು ಸ್ಪುಟಗೊಳಿಸುತ್ತಲೆ ಆಕೆ ಆ ಕತೆ ಹೇಳಿದಳು.

...ಅಮ್ಮಿ ಮಕ್ಕಳನ್ನು ಬೆಳೆಸುವ ರೀತಿ ಸಾವಿತ್ರಿಗೆ ಹಿಡಿಸುತ್ತಿರಲಿಲ್ಲ, " ಅವು ಏನೂ ತಿಳಿದ ಮುಕ್ಕಗಳಾಗಿ ಇರೈಕೇನು? ಶಾಲೆ ಇರೋದ್ಯಾತಕ್ಮತ್ತೆ?" " ಕಳಿಸೋಣ ಸಾವಿತ್ರಮ್ಮ." - - " ఆల్ల, ఆచ్ఛిు ఆಮ್ಮೀಂತ ಅವು ನಿನ್ನನ್ನ ಕುಗ್ತಾವಲ್ಲ,ಚೆನ್ನಾಗಿರುತ್ತೆ ಅಂತೀನಿ ಕೇಳೋವ್ರಿಗೆ!" " ಅದರಲ್ಲೇನಮ್ಮ ತಪ್ಪು... ? ನೆಾನು ಅಮ್ಮಿ , ನೀವು ದೊಡ್ಡಮ್ಮ." " ಅಮ್ಮ ಅಂತ ಅನ್ಬಾರ್ದೇನೊ ನಿನ್ನ?" " ಅಮ್ಮಿ ಅನ್ನೋದು ನಾನು ಹುಟ್ಟಿದ್ಮನೆ ಹೆಸ್ರು.. ಅಜ್ಜಿ-ಅಣ್ಣ ಇಟ್ಟದ್ದು, ಮಕ್ಕಳೂ - ಹಾಗೇ ಕೂಗಾ ಇದ್ರೆ, ನನಗೆ ಬೇಕಾದೋರೆಲ್ಲ ಕೂಗಿದ ಹಾಗೆ ಇಂಪಾಗಿರುತ್ತೆ." "ಸರಿ ಸರಿ" ಆದರೆ ಅಮ್ಮಿ ಇಲ್ಲದೆ ಇದ್ದಾಗ ಸಾವಿತ್ರಿ ಮಕ್ಕಳಿಬ್ಬರನ್ನೂ ಸಾಕು ಸಾಕೆನಿಸುವಷ್ಟು ಮುದ್ದಿಸುತ್ತಿದ್ದಳು. ಅಮ್ಮಿ ಬಂದೊಡನೆ ಮಕ್ಕಳು ಆಕೆಗೆ ಅಂಟಿಕೊಳ್ಳುವುದನ್ನು ಕಂಡಾಗ, ಎಪಾದರೂ ಅವು ತನ್ನವಲ್ಲ ಎಂದು ' ಒಂದು ತರಹೆ'ಯಾಗುತ್ತಿತು. ಆಗ ಏನಾದರೂ ಕುಟುಕು ಮಾತನ್ನಾಡಬೇಕು ಎನ್ನಿಸುತ್ತಿತ್ತು ಆಕೆಗೆ.

 ಮೊದಲು ಅಮ್ಮಿಗೆ ಆ ವರ್ತನೆ ಅರ್ಥವಾಗಿರಲಿಲ್ಲ, ಅದು ಸ್ಪಷ್ಪವಾದಾಗ ಆಕೆಯ ಹೃದಯ ಹಗುರವಾಗಿತ್ತು, ಆಮೇಲೆ ಸಾವಿತ್ರಿ ಹಾಗೆ ಮಾತನಾಡಿದಾಗಲೆಲ್ಲ ಅಮ್ಮಿ ನಗುನಗುತ್ತ ಹರ್ಷಚಿತ್ರಳಾಗಿಯೇ ಇರುತ್ತಿದ್ದಳು.

ಅಂತೂ ಕೊನೆಗೊಮ್ಮೆ ಮಕ್ಕಳನ್ನು ಶಾಲೆಗೆ ಕಳಿಸಲು ಅಮ್ಮಿ ತೀರ್ಮಾನಿಸಿದ್ದಾಯಿತು,

ಅದಕ್ಕಾಗಿ ಅಮ್ಮಿ ನಡೆಸುತ್ತಿದ್ದ ಸಂಭ್ರಮವನ್ನು ಕಂಡು ಕೇಶವಮೂರ್ತಿ ನಕ್ಕ. ".... " ಅಲ್ಲ ಬನಶಂಕರಿ, ಹುಡುಗರ್ನ ಓದೋಕೇಂತ ಬೆಂಗಳೂರಿಗೆ ಕಳಿಸ್ತೀಯೇನು ? ಆಚೆ ಬೀದಿ ಕೊನೇಲಿರೋ ಸ್ಕೂಲಿಗೆ ಕಳಿಸೋದಕ್ಕೇ ಇಷ್ಟೊಂದು ಸಡಗರವೆ? ಈಗ್ಲೇ ಇಷ್ಟಾದರೆ–" ಅಂತಹ ನಗೆಮಾತು ಕೇಳಿ ಅಮ್ಮಿ ನಾಚಿಕೊಳ್ಳುತ್ತಿದ್ದರೂ ಆ ಮಾತಿನಿಂದ ಆಕೆಗೆ ಸಂತೋಷವಾಗುತ್ತಿತ್ತು., ಶಾಲೆಯಲ್ಲಿ ಮುಖ್ಯೋಪಾಧ್ಯಾಯರು, ' ಹುಡುಗರ ತಂದೆ ನಾರಾಯಣರಾಯ'ಎಂದು ದಾಖಲೆಮಾಡಿದರು. "ನಮ್ಮಮ್ಮನ ಹೆಸರೂ ಬರೆಹ್ಮೂಳ್ಳಿ," ಎಂದ ರಾಜಣ್ಣ, ಧೈರ್ಯವಾಗಿ. "ಅಪ್ಪನ್ದೊಂದೇ ಸಾಕು ಕಣೋ.." ಎಂದರು ಮುಖ್ಯೋಪಾಧ್ಯಾಯರು ನಗುತ್ತ. .ಮನೆಯಲ್ಲಿ ರಾಜಣ್ಣ, ಅಮ್ಮಿಗೆ ವರದಿಯೊಪ್ಪಿಸಿದ: "ನೋಡಮ್ಮಿ , ನಿನ್ನೆಸ್ರು ಬೇಡಾಂದ್ನಿಟ್ರು,. ಅಪ್ಪನ್ದೊಂದೇ ಸಾಕೂಂತಂದ್ರು. ಅದನ್ನೆ ಬರಕೊಂಡ್ರು." ಅಮ್ಮಿಗೆ ನಗು ಬಂತು.