ಪುಟ:Banashankari.pdf/೧೬೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ ೧೬೩

ಮಗ್ಗುಲಿಗೆ ಒರಗಿಕೊಂಡು, ಎದುರಿಗಿದ್ದ ಮಕ್ಕಳಿಬ್ಬರನ್ನೊ, ಆ ಯೋಚನೆ ಯಲೇ ಇದ್ದ ಅಮ್ಮಿಗೆ ಅಳು ತಡೆಯಲಾರದೆ ಹೋಯಿತು. "ಅಳಬೇಡವಮ್ಮಿ... ನಾವು ಅಳ್ತೀವಿ ನೊಡು...ಅಮ್ಮಿ....!" ಇಲ್ಲದ ಧ್ಐಯ‍ವನ್ನು ತಂದುಕೊಂಡು ಅಮ್ಮಿ ಅಂದೇ ಬಿಟ್ಟಳು: "ರಾಜಾ, ಸುಶೀ,..ನಾನು ನಮಗೊಂದು ಸುಳ್ಲು ಹೇಳಿದ್ದೆ,.." ಮಕ್ಕಳಿಗೇನೂ ಅಥ‍ವಾಗುಲಿಲ್ಲ. "ನಿಮ್ಮ ತಂದೆ ತೀರ್ಥಯಾತ್ರೆ ಹೋಗಿದಅರೆ ಅಂದಿದ್ದೆ..." "ಹೋಗಿಲ್ಲವೇ ಅಮ್ಮಿ "ಇಲ್ಲ ಚಿನ್ನ. ಅವರು ಬಳೆಮಣ್ಣೂರಿದೆ,..ದೊಡ್ಡವರು ದೇವಸ್ಥಾನದ ಪಾರುಪತ್ಯಗಾರರು..." "ಓ! ಚಿಕ್ಕಮಗಳೂರಿನ ಆಚೆಗೊಂದು ಬಾಳೆಮಣ್ಣೂರಿದೆ, ಅದೇನಾ ಅಮ್ಮಿ?" ಹೂಂ ಮಗು... ಅವರು ನಮ್ಮನ್ನ ಬಿಟ್ಟಟ್ರು...: ರಾಜಣ್ಣನ ಮುಖ ಗಂಭೀರವಾಯಿತು. "ಅಯ್ಯೆ! ಅದ್ಯಾಕೊ?" "ಅವರಿಗೆ ಬೇರೆ ಹೆಂಡತಿ ಇದಾರೆ ರಾಜ... ಹೆಂಡತಿ ಮತ್ತು ಮಕ್ಕಳು," ಸುಶೀಲ ಕೇಳಿದಳು: "ಎರಡ್ನೇ ಮದುವೆ ಮಾಡ್ಕೊಂಡ್ನೇನು ನಮ್ಮಪ್ಪ?" ಅಮ್ಮಿ ಉತ್ತರ ಕೊಡದಡಯೇ ಬಿಕ್ಕಿ ಬಿಕ್ಕಿ ಅತ್ತಳು.ಅಳುವಿನ ನಡುವೆ, ಮಕ್ಕಳೆದುರು ಅಕ್ಷಮ್ಯ ತಪ್ಪನ್ನೊಪ್ಪಿಕೊಳ್ಳವ ಹಾಗೆ, ಅವಳೆಂದಳು: "..ನಅನು..ನಿಮ್ಮಪ್ಪನ್ನ...ಮದ್ವೆ ಮಾಡ್ಕೊಂಡಿರ್ಲಿಲ್ಲ...!" ಇದೊಂದು ಒಗಟಾಗಿ ತೋರಿತು ಸುಶೀಲೆಗೆ... ತಾಯಿಯ ಮಾತಿನ ಅರ್ಥನೇನು/ ತಮಗೆ ತಿಳಿಯದಳತಹ ವಿಷಯವೇನಅಗಿತ್ತ ಅಂದ: "ಅಳಬೆಡವಮ್ಮಾ.. ಅಪ್ಪ ಬರದಿರದ್ರೆ ಅಷ್ಟೇ ಹೋಯಿತು, ಅದಕ್ಕೆಲ್ಲಾ ಅಳ್ಬೇಕೇನು? ನೀನು ಸುಮ್ಮಿರು. ಒಂದಿಷ್ಟು ಕಣ್ಣಿರು ಹರಿದ ಮೇಲೆ, ಮಕ್ಕಳ ದೃಷ್ಟಿಯಲ್ಲಿ ತಅನು ಅಪರಾಧಿಯಲ್ಲ ಎಂಬುದು ಮನವರಿಕೆಯಾದ ಮೇಲೆ, ಅಮ್ಮಿಗೆ ಮಾತು ಸುಲಭವಾಯಿತು, ಅಮ್ಮಿ ತನ್ನ ಬಾಲ್ಯದ, ಯೌವನದ, ಕತೆ ಹೇಳಿದಳು. ಸಂಜೆಯಾದರೊ ದೀಪ ಹಚ್ಚದೆಯೇ ಕತ್ತಲಲೇ ಕತೆ ಸಾಗಿತು. ತನಗೆ ತಿಳಿವಳಿಕೆ. ಬಂದಂದಿನಿದ, ತನ್ನ ಮಕ್ಕಳಿಗೆ ತಿಳಿವಳಿಕೆ ಬಂದ ಅವಧಿಯವರೆಗೆ.. ತಾನು ಬಅಲ ವಿಧವೆಯವರೆಗೆ..ತಾನು ವಿಧವೆಯಾದುದು_ಅಣ್ಣನ ಸಾವು_ಅಜ್ಜಿಯೊಡನೆ ಹಳ್ಳಿ ಬಿಟ್ಟುದು_ಬಾಳೆಮಣ್ಣೂರಲ್ಲಿ ಅನುಭವಿದ ಹಿಂಸೆ_ಅಜ್ಜಿಯ ಮರಣ ಬಳಿಕ ನಾರಾಯಣರಾಯರು ನೀಡಿದ ರಕ್ಷಣ_ ಆಕೆಗೆರಡು ಬಂಗಾರದಂತಹ ಮಕ್ಕಳು ಬಳಿಕ ದೊರೆತುದು_ಘಟಸ್ರಅದ್ದದ ಮಾತು-ಅದರೆ ಬದಲು ನಡೆದ ಬಹಿಷ್ಕಾರ- ಹಾಸನಕ್ಕೆ ಬಂದು ನಿಜವಅದ ಕಥೆಯನ್ನು ಜನರಿಂದ ಮರೆಸಿ ಜೀವನ ನಡೆಸಿದ್ದು....


"