೧೨ ಬನಶಂಕರಿ
ಅದಾದ ಮೇಲೆ ಜೀವನಹಳ್ಳಿಯಿಂದ ಅವಳ ಒಡಹುಟ್ಟಿದ ಸೋದರ ರಾಮಕೃಷ್ಣ
ಬಂದು ಹೋದ. ತಂಗಿಯ ಮದುವೆಯಾದಾಗ ದೊಡ್ಡದೊಂದು ಹೊರೆ ತನ್ನ ತಲೆಯ
ಮೇಲಿಂದ ಇಳಿದ ಹಾಗಾಯಿತೆಂದು ಆತ ಭಾವಿಸಿದ್ದ.
ಆದರೆ ನಮ್ಕೈಲಿ ಏನಿದೆ ಮಾವ? ಎಲ್ಲಾ ಆ ಪರಮಾತ್ಮನ ಲೀಲೆ.
-ಇದೀಗ ಆ ಯುವಕ ಆಡಿದ ಮಾತು.
ಅಣ್ನನ ಮಡಿಲಲ್ಲಿ ಮುಖವಿಟ್ಟು ಮನದಣಿತೆ ಅತ್ತು ಹೃದಯ ಹಗುರಗೊಳಿಸ
ಬೇಕೆಂಬ ಬಯಕೆಯಾಯಿತು, ಅಮ್ಮಿಗೆ. ಆದರೆ ಮನೆಗೆಲಸ ಅತ್ತೆಯ ಆರೈಕೆಗಳ ನಡುವೆ
ಅಂತಹ ಮಾತುಕತೆಗೆ ಅವಕಾಶ ದೊರೆಯಲಿಲ್ಲ.
ಅಲ್ಲಿ ಎರಡು ದಿನಗಳಿದ್ದು ಹಳ್ಳಿಗೆ ಹೊರಟು ನಿಂತಾಗ ಆತ ಹೇಳಿದ:
ಊರಿಗೆ ಹೋದ್ಮೇಲೆ ಕಾಗದ ಬರೀತೀನಿ ಅಮ್ಮಿ..
ಇವತ್ತೇ ಹೊರಟುಬಿಡ್ತೀಯಾ ಅಣ್ಣಾ...?
ಹೂನಮ್ಮಾ...
ಅಣ್ಣಾ!
ಮತ್ತೆ ಅಳು. ಮಾವ ಅಂದರು: ಅಳಬಾರದಮ್ಮ: ಅತ್ತರೆ ಹೋದದ್ದು ವಾಪಸ್ಸು ಬರುತ್ಯೇ?ತಡೆಯಲಾಗದ ನೋವಿನಿಂದ ಕುಗ್ಗಿ ಬಾಗಿದ ಜೀವದಿಂದ ಬಲು ಕ್ಷೀಣವಾಗಿ ಆ ಮಾತುಗಳು ಹೊರಟಿದ್ದುವು. ಧುಮುಕುತ್ತ ಬರುತ್ತಿದ್ದ ಕಂಬನಿಯ ಪ್ರವಾಹವನ್ನು ಪ್ರಯಾಸದಿಂದ ತಡೆಗಟ್ಟುತ್ತ ಅಣ್ಣ ಹೊರಟು ಹೋಗಿದ್ದ.
ಅವನ ಕಾಗದ ಬಂದಿರಲಿಲ್ಲ. ಬಂದರೂ ಆತ ಏನು ಬರೆಯಬಹುದು? ದಿನಗಳು ಉರುಳಿದವು. ಒಂದರಂತೆಯೇ ಇನ್ನೊಂದು.
...ಹಲವು ದಿನಗಳ ಮೇಲೆ ಅತ್ತೆ ಎದ್ದು ಕುಳಿತುಕೊಳ್ಳಲು ಶಕ್ತರಾದರು.ಸೊರಗಿ ಕಡ್ಡಿಯಾಗಿದ್ದ ಆ ಜೀವ ಎಳೆಯ ಮಕ್ಕಳಿಗಾಗಿ ಬದುಕಿತು.
ಆ ಅತ್ತೆ ಮತ್ತು ಮಾವ... ನನ್ನ ಪ್ರಾರಬ್ಧ ಕಮ೯ಎನ್ನುತ್ತಿದ್ದರು ಅಮ್ಮಿಯ ಅತ್ತೆ. ಯಾರೇನು ಮಾಡೋಕಾಗುತ್ತೆ? ಅದೆಲ್ಲಾ ನಮ್ಕೈಲಿದ್ಯೇ? ಎನ್ನುತ್ತಿದ್ದರು ಮಾವ. ನೀನು ಈ ಮನೆಗೆ ಕಾಲಿಟ್ಟು ಹೀಗಾಯಿತು, ಎಂದು ಅವರೆಂದೂ ಅಮ್ಮಿಗೆ ಛೀಮಾರಿ ಹಾಕಲಿಲ್ಲ.
ಆದರೆ ಹೊರಗಿನಿಂದ ಅಲ್ಲೊಂದು ಇಲ್ಲೊಂದು ಸ್ವರ ಕೇಳಿಸಿತು:
ಹುಟ್ಟೋಕ್ಮುಂಚೆ ತಂದೆ; ಹುಟ್ಟೊತ್ಲೆ ತಾಯಿ;ಈಗ ಗಂಡ ಅಬ್ಬ-!
ಯಾವ ನಕ್ಷತ್ರವೊ!
ಅಮ್ಮಿ ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದ ಹುಡುಗಿ. ಅದು ಮುದ್ದಾದ ಹೆಸರಿನ ನಕ್ಷತ್ರ.ಅದರ ತಪ್ಪೇನೂ ಇರಲಿಲ್ಲ.
ಪಾಪ ! ಆ ಮಗೂನ ಯಾತಕ್ಕೆ ಅಂತೀರೆ?
-ನಿಂದೆಯ ಮಾತುಗಳೆಡೆಯಲ್ಲಿ ಹಾಗೆ ಕನಿಕದೊವೊಂದು ಸ್ವರವೂ ಕೇಳಿಸುತ್ತಿತ್ತು.
ಆಗಾಗ್ಗೆ.
ಮಾವ. ತೋಟ ಹೊಲಗಳ ಕೆಲಸಗಳಲ್ಲಿ ನಿರತರಾಗಿ ನೋವನ್ನು ಮರೆಯಲು ಯತ್ನಿಸಿ
ಪುಟ:Banashankari.pdf/೧೮
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿದೆ