○○応 - ひぶごに引○ ರೂಪಾಯಿ ಕಳುಹಿಸುತ್ತಿದ್ದ ಪಾಠ ಹೇಳಿಕೊಡುವುದರಿಂದಲೂ ರಾಜಣ್ಣನಿಗೆ ರಾಜಣ್ಣ ಕಾಲೇಜು ಸೇರಿದ. ಹಿತಮಿತವಾದ ಮಾತುಕತೆಯಿಂದ ಆತ ಪಾಧಾಪಕರ ಪ್ರೀತಿ ಗಳಿಸಿದ. ನಿಯಮಬದ್ದ ಅಧ್ಯಯನದಿಂದ ಸಾಕಷ್ಟ ಅಂಕಗಳನ್ನು, ಉಚಿತ ವೇತನ బెన్ను, దేJPరెడిసిరే.2ండె. ಬೇಗನೆ ಡಿಗ್ರಿ ಪರೀಕ್ಷೆ ಮುಗಿಸಿಕೊಂಡು ಪದವೀಧರನಾಗಬೇಕು; ಆದಷ್ಟು ಒಳ್ಳೆಯ ಕೆಲಸ ದೊರಕಿಸಿ ತನ್ನ ಕಾಲ ಮೇಲೆ ತಾನು ನಿಂತು ಅಮ್ಮಿಯನ್ನು ಸಲಹ ಬೇಕು: ಬಾಳಿನಲ್ಲಿ ಆಕೆಗಾಗಿದ್ದ ಹಳೆಯ ಗಾಯಗಳು ಮಾಯುವಂತೆ ಸೌಕಠ್ಯ ಒದಗಿಸಬೇಕು. ణద్విగ ఆలే లేనే చేుందిరిసికేJండా గురి. - ಅದೇನಾ ಸಾಧಿಸಲಸಾಧ್ಯವಾದಂತಹ ಗುರಿಯಾಗಿರಲಿಲ್ಲ. ಅಷ್ಟನ್ನು ಸುಲಭವಾಗಿ ಸಾಧಿಸುವೆನೆಂಬ ಆತ್ಮವಿಶ್ವಾಸ ರಾಜಣ್ಣನಿಗಿತು. ಮತ್ತೆ ಅಮ್ಮಿಯ ದೇಹಾರೋಗ್ಯ ಕೆಟ್ಟಿತು. ಆಕೆಗೆ ರಾತ್ರೆಯೆಲ್ಲ ಕೆಟ್ಟ ಕನಸುಗಳು ಹೀಗೆಯೇ ಸತ್ತರೂ ಸುಖ, ಮಗನೆದುರಲ್ಲಿ,–ಎಂದೂ ಆಕೆ ಯೋಚಿಸಿದಳು. ಆದರೂ ಹೃದಯದ ಆಳದಲ್ಲಿ ಅಪೂರ್ಣವಾದೊಂದು ಆಸೆ ಹುದುಗಿತು, ಅದು ರಾಜಣ್ಣನ ಮದುವೆ. ತಾನು ಮುದ್ದು ಸೊಸೆಯ ಮುಖ ನೋಡುವಂತಾದರೆ? Jಾಸೆಯು ಕೈಯಡುಗೆಯನ್ನು ತಾನೊಮ್ಮೆ ಉಣುವಂತಾದರೆ? ಹಿಂದೆ-ಬಲು ಹಿಂದೆ–ರಾಯನ ಹಳ್ಳಿಯಲ್ಲಿ ಅತ್ತೆ ತನ್ನನ್ನು ಪ್ರೀತಿಸಿದ್ದಂತೆ ತಾನೂ ಸೊಸೆಯನ್ನು ಪ್ರೀತಿಸುವಂತಾದರೆ ? ಸುಶೀಲಳ ಮದುವೆಯೇನೋ ಸುಲಭವಾಗಿ ನಡೆದುಹೋಯಿತು. ಅದು ಸಾಧ್ಯ ವಾದುದು ಮಾಧವನಂತಹ ಯುವಕನಿದ್ದುದರಿಂದ. ಆದರೆ ರಾಜಣ್ಣನ ವಿಷಯ ಹಾಗಲ್ಲ, ಹೆಣ್ಣುಕೊಟ್ಟು ಓದಿಸುವ ಮಾತು ಹಾಗಿರಲಿ ; ಇನ್ನು ನಾಲ್ಕು ವರ್ಷಗಳಲ್ಲಿ ಆತ ಪಧವೀಧರನೂ ಆಗಬಹುದು: ಒಳ್ಳೆಯ ಉದ್ಯೋಗ ದೊರೆಯಬಹುದು; ಆಗಲಾದರೂ ಸ್ವಜಾತಿಯವನೆಂದು ಗೌರವಿಸುವವರು ಯಾರು? ಹೆಣು ಕೊಡುವವರು ಯಾರು? - `ಆತನ ಮದುವೆಯಾಗದೆ ಹೋದರೆ, ತಮ್ಮ ವಂಶದ ಬಳ್ಳಿ ಬೆಳೆಯುವ ಬಗೆ ಹೇಗೆ? ಹೀಗೆ ಅಮ್ಮಿಗೆ, ಶರೀರದ ಬೇನೆಗಿಂತಲೂ ಮನಸ್ಸಿನ ವೇದನೆಯೇ ಹೆಚ್ಚಾಯಿತು. " ರಾಜ, ಸುಶೀ ಬಹಳ ದಿನದಿಂದ ಬರೆದೇ ಇಲ್ವಲ್ಲೆಯೋ?" "ಯಾಕಮ್ಮಿ , ಹೋದ ವಾರ ಭಾವ ಬರೆದಿದ್ನಲ್ಲ? " "ಹೌದು, ಬರೆದಿದ್ದ, ಅಲ್ವೆ? ಯಾಕೊ ಮರವೆ ಷುರುವಾಯ್ತಪ್ಪ ನಂಗೆ." ಅಥವಾ ಎ೦ದಾದರಾ ಸ೦ಜೆ– " ಅನ್ನ ಸಾರು ಇಟ್ಟಿದೀನಿ. ನೀನು ಉಣ್ಣಪ್ಪ ಏನೂ ಉಳಿಸ್ಬೇಡ, ನಂಗೆ ಹಸಿವಿಲ್ಲ. " యూరేమి ? " "ಯಾಕೋ ತಿಂದದ್ದು ಜೀರ್ಣವೇ ಆಗಾ ಇಲ್ಲ. "ಔಷಧಿ ತಲ್ಲೇನು?" " ಇದಕ್ಕೆಲ್ಲಾ ಎಂಥ ಔಷಧಿ ? ಹಾಗೇ ಸರಿಹೋಗುತ್ತೆ." नी
ಪುಟ:Banashankari.pdf/೧೯೪
ಗೋಚರ