ಪುಟ:Banashankari.pdf/೨೧೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ "ಎಲ್ಲಾದರೂ ಉಂಟೆ? ಇಲ್ಲೇ ಇದ್ಬಿಡು ಅಮ್ಮಿ,ಅಲ್ಲಿ ಯಾರಿದಾರೆ ನಿಂಗೆ?" "ಯಾಕೆ, ನಾನು ಹುಟ್ಟಿದ ಹಳ್ಳಿ ಅಲ್ವೆ ಅದು ? ಕಾವೇರಿ ಇಲ್ವೆ ಅಲ್ಲಿ?"

"ಬೇಕಿದ್ದರೆ ಹೋದರಾಯ್ತು. ಇಷ್ಟೇನು ಅವಸರ ? ಒಂದು ವಾರವಾದರೂ ಇದ್ದಿಟ್ಟು ಹೋಗು. "ಸುಳ್ಳೆಂದು ತಿಳಿದೂ ಅಮ್ಮಿ ಅಂದಳು: 
  "ಒಂದು ವಾರವಾದ್ಮೇಲೆ  ನಾನೇ ಬರ್ತೀನಪ್ಪ , ಒತ್ತಾಯ ಮಾಡ್ಬೇಡ..ನಂಗೇನೊ ಆಗ್ತಿದೆ. ನಾನಿವತ್ತು ಜೀವನಹಳ್ಳಿಗೆ ಹೋಗ್ಲೇಬೇಕು-ಖಂಡಿತ ಹೋಗ್ವೇಕು."

"ಆಗಲಿ ಅಮ್ಮಿ," ಎಂದ ನಾಣಿ ನಿರಾಶೆಯಿಂದ, ತಾನೂ ಅನ್ನ ಬಿಟ್ಟೆದ್ದು ಕೈ ತೊಳೆಯುತ್ತ, "ಒಂದು ವಾರ ಅಲ್ಲಿದ್ದು ನೀನು ಇಲ್ಲಿಗೇ ಬರಬೇಕು. ಇಲ್ಲಿಯೇ ಇರಬೇಕು.ಬರದೇ ಇದ್ರೆ, ನಾನೇ ಅಲ್ಲಿಗೆ ಬಂದು ಕರಕೊಂಡು ಬತ್ರೀನಿ:...ಕತ್ತಲಾಗುವುದರೊಳಗಾಗಿ ನಾಲ್ವತ್ತು ಮೈಲಿ ದೂರ ಸಾಗಿ ಬಂದು ಜೀವನಹಳ್ಳಿ ಸೇರಿತು ಮೋಟಾರು, ಮೋಟಾರಿಂದ ಇಳಿದಾಗ ಅಮ್ಮಿಯ ಮೈಯಲ್ಲಿ ಹೊಸ ಸಂಚಾರವಾಯಿತು. ತಾನು ಹುಟ್ಟಿದ ಹಳ್ಳಿಯ ಶೀತಲ ಗಾಳಿ ಕುಡಿದು ಮತ್ತೆ ಆಕೆ ಹರೆಯದ ಹುಡುಗಿಯಾದಳು.–ಹೇಗಿರುವಳೊ ಕಾವೇರಿ? ದಪ್ಪಗೆ-ಎಂದಿರಲಿಲ್ಲವೆ ರಾಜಣ್ಣ ? ಶಾನುಭೋಗರ ಮನೆಯ ಬಾಗಿಲು, ಅಸಹನೆ ತುಂಬಿದ ಸ್ವರದ ಕರೆ..ಆ ಮನೆಯ ಗೋಡೆಗಳ ನಡುವೆ ಎಲ್ಲಿಯೋ ಅವಿತಿದ್ದ ತನ್ನ ಬಾಲ್ಯದ ಗೆಳತಿಯನ್ನು ಕಾಣುವ ಆತುರ...ಆಕೆ ಬಂದಳು, ಆಕೆಗೆ ತನ್ನನ್ನು ಕರೆದ ಸ್ವರ ಪರಿಚಿತವಾಗಿ ತೋರಿತ್ತು,' ಯಾರು?' ಎಂದಾಕೆ ಪ್ರಶ್ನಿಸಲಿಲ್ಲ,"ಕಾವೇರಿ!ಇಲ್ಲಿದೀನಿ, ನಾನು!""ಅಮ್ಮಿ! ಬಂದೆಯೇನೇ ಅಂತೂ?" ಹೊರಗೆ ಇಂತಿದ್ದಳು ಆ ಅಮ್ಮಿ... ಕಾವೇರಿ ಕೈ ಹಿಡಿದು ಒಳಕ್ಕೆ ಕಡೆದು ತಂದಳು. ತನ್ನ ದೊಡ್ಡ ಮಗ, ಸೊಸೆ, ಯಜಮಾನರು, ಎಲ್ಲರಿಗೂ ಕೇಳಿಸುವ ಹಾಗೆ ಕಾವೇರಿ ಅಂದಳು ; " ಅಮ್ಮಿ ಬಂದಿದಾಳೆ. ಕೇಳಿಸ್ತೆ ? ಬೆಂಗಳೂರಿಂದ ಅಮ್ಮಿ ಬಂದಿದಾಳೆ." ಆದರೆ ಒಳಗೆ ಬೆಳಕಿನಲ್ಲಿ ಆ ಗೆಳತಿಯರು ಪರಸ್ಪರರನ್ನು ನೋಡಿದಾಗ? ಹೇಗಾಗಿದ್ದಳು ಅಮ್ಮಿ! ತನ್ನ ತಾಯಿಗೆ ಸೊಗಸಾದ ಗುಂಗುರು ಬೆಳ್ಳಿಕೂದಲಿದೆ ಎಂದಿದ್ದ ರಾಜಣ್ಣ ಆ ದಿನ, ಅಭಿಮಾನದಿಂದ. ಎಲ್ಲಿ ಆ ಕೂದಲು ? ಎಲ್ಲಿ? ಗುರುತೆ ಸಿಗದ ಹಾಗೆ ಆಳಆಳಕ್ಕೆ ಬತ್ತಿಹೋಗಿದ್ದ ಅ ಮುಖವೊ?....."ಮೈ ಸರಿಯಾಗಿಲ್ವೆ ಅಮ್ಮಿ?""ಸರಿಯಾಗಿದೀನಮ್ಮಾ.... ಸರಿಯಾಗಿಯೇ ಇದೀನಿ ಕಾವೇರಿ. ಇನ್ನೇನೂ ಭಯವಿಲ್ಲ, ಅಂತೂ ಬಂದೆನಲ್ಲ!""ಎಷ್ಟೋ ವರ್ಷಗಳ ಮೇಲೆ ನೀನು ಬಂದಿದೀಯಾ ಅಮ್ಮಿ, ಇನ್ನೆಲ್ಲಿಗೂ ಹೋಗ