ಪುಟ:Banashankari.pdf/೨೨೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ ೨೧೭

ಕಾವೇರಿ ಕಲ್ಲು ಬೊಂಬೆಯ ಹಾಗೆ ನಿಂತಿದ್ದ ರಮೆಯನ್ನು ನೋಡಿದಳು. ಯಾವುದೂ ಸ್ಪಷ್ಟವಾಗದೆ, "ಬೊಂಬಾಯಿಗೆ ಬರ್ದಿದ್ದೀಯೇನು?" ಎಂದಳು. " ಹೂನಮ್ಮಾ. ಈಗಿನ ಸ್ಥಿತೀಲಿ ಸುಶೀಲ ಪ್ರವಾಸ ಮಾಡ್ಬಾರ, ನಾನು ನೋಡ್ಕೋತೀನಿ.. ಬರಬೇಡ, ಅಂತ ಬದ್ದದೀನಿ." " ಒಳ್ಳೇದು ಮಾಡ್ದೆ," ಎಂದಳು ಕಾವೇರಮ್ಮ. ಹಾಗೆ ಹೇಳಿ ಮತ್ತೊಮ್ಮೆ ರಮೆಯನ್ನು ನೋಡಿದಳು. " ಈಕೆ ನಮ್ಮ ಪಕ್ಕದ ಮನೆಯೋಳು, ಈಕೇಂದ್ರೆ ಅಮ್ಮಿಗೆ ತುಂಬಾ ಇಷ್ಟ." ಪರಿಸ್ಥಿತಿಯನ್ನು ಸುಧಾರಿಸಲೆಂದು ರಾಜಣ್ಣ ಅನಿವಾರ್ಯವಾಗಿ ಸುಳ್ಳು ಹೇಳಿದ. ಕಾವೇರಮ್ಮನ ಯಜಮಾನರು ನಿದ್ದೆ ಹೋಗಿದ್ದರು. ಹಿರಿಯ ಮಗ ತೋಟಗಳನ್ನು ನೋಡಿ ಬರಲು ಹೊರ ಹೋಗಿದ್ದ ಮನೆಯ ಸೊಸೆ ಮಗುವನ್ನೆತ್ತಿಕೊಂಡು ಒಳಬಾಗಿಲ ಬಳಿ ನಿಂತು ಇಣುಕಿ ನೋಡಿದಳು,ಯಾರು ಬಂದರು ಎಂದು. " ರಾಜಣ್ಣ ಬಂದಿದ್ದಾನೆ ನೋಡೆ.. ಇವರಿಗೊಂದಿಷ್ಟು ಊಟ ಬಡಿಸ್ತೀಯೇನು? - ಎಂದು ಕಾವೇರಮ್ಮ ಪ್ರಶ್ನೆಯ ರೂಪದ ನಿರ್ದೆಶವನ್ನು ಸೊಸೆಗೆ ಕೊಟ್ಟಳು. ಒಳಗೆ ಅಮ್ಮಿ ನರಳಿದ ಸದ್ದಾಯಿತು. ಆಕೆಗೆ ಎಚ್ಚರವಾಗಿತು. ಕಾವೇರಮ್ಮನೂ ಹಿಂದಿನಿಂದ ರಾಜಣ್ಣ ರಮೆಯರೂ ಒಳ ಹೋದರು. ಒಣಗಿದ ಕಡ್ಡಿಯಾಗಿ ಸೊರಗಿದ ತಾಯಿ ಅಲ್ಲಿ ಮಲಗಿದ್ದಳು. ಕಣ್ಣಿವೆಗಳು ಮುಚ್ಚಿದ್ದುವ ಇಷ್ಟು ವರ್ಷ ಸೋತು ಸುಣ್ಣವಾದ ಮೇಲೆ ಈಗ, ಕೊನೆಗಾಲದಲ್ಲಿ, ಮಲಗಲು, ಮೆತ್ತನೆಯ ಹಾಸಿಗೆ ದೊರೆತಿತ್ತಲ್ಲವೆ ಆಕೆಗೆ ? ಶ್ವಾಸೋಚಛ‍್ವ್ಸದ ಒತ್ತಡಕ್ಕೂ ಮಿಸುಕ್ಕುತ್ತಿರಲಿಲ್ಲ ಆ ಜೀವನ ಹಂದರ.ಚಲಿಸುತ್ತಿದ್ದ ಹುಬು ತುಟಿಗಳಷ್ಟೇ ಅನುಭವಿಸುತ್ತಿದ್ದ ನೋವಿಗೆ ಸಾಕ್ಷ್ಮವಾಗಿದ್ದುವು. ಬಲು ಮುದುವಾಗಿ ಕಾವೇರಮ್ಮನೆಂದಳು.: "ಅಮ್ಮೀ." ಕರೆದುದು ತನಗೆ ಕೇಳಿಸಿತೆನ್ನುವಂತೆ ಆಕೆಯ ಗಂಟಲಲ್ಲೇನೋ ಸಪ್ಪಳವಾಯಿತು ; " ಅಮ್ಮಿ, ಯಾರು ಬಂದಿದಾರೆ ನೋಡು..." ಆಂ..." ಅಮ್ಮಿ ಕಣ್ಣ ತೆರೆದಳು-ಎತ್ತರದಿಂದ ಬಾಗಿ ತನ್ನನ್ನೆ ಎರಡು ಮುಖಗಳು ನೋಡುತ್ತಿದ್ದುವು. ಮುದ್ದು ಮುಖಗಳು. ಪರಿಚಿತ. ರಾಜಣ್ಣನಲ್ಲವೆ? ಸುಶೀಲೆಯಲ್ಲವೆ? ಬಲು ಕ್ಷೀಣವಾಗಿ ಸ್ವರ ಹೊರಟಿತು. "ರಾಜಾ..ಸುಶೀ..." ರಾಜಣ್ಣ ಮತ್ತು ರಮಾ ಮಂಡಿಯೂರಿ ಕುಳಿತು ಮಂಚಕ್ಕೆ ಮುಖ ಆನಿಸಿದರು. ಅಮ್ಮಿಯ ಬಲಗೈ ಬೆರಳುಗಳು ಆ ಎಳೆಯರ ತಲೆಗಳನ್ನು ತಡವಿದುವು. ರಾಜಣ್ಣನ ಕ್ರಾಪು.. ರಮೇಯ ತಲೆಗೂದಲು-ಕೈ ಅಲ್ಲೆ ತಡೆದು ನಿಂತಿತು. "ಸುಶೀ ಚೆನ್ನಾ..ಗಿದ್ದೀ..ಯಾ? -- ದೃಢ ಹೃದಯದ ದಿಟ್ಟಿ ರಮೆ ಬಿಕ್ಕಿಬಿಕ್ಕಿ ಅತ್ತಳು.