ಪುಟ:Banashankari.pdf/೨೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ದಿಜೂಢಳಾದಳು. ಯಾರು ಬಂದರೆಂದು ತಲೆಯೆತ್ತಿ ನೋಡುವ ಧೈರ್ಯ ಅವಳಿಗಿರಲಿಲ.ನಡಿಗೆಯ ಸದು ಒಮೆಲೆ ನಿಂತಿತು.ಅಮಿ ಅಧೀರಳಾದಳು,ತಲೆಯೆತಿ ನೋಡ ಬೇಕು ನಿಜ.ಆದರೆ ಬಂದ ವ್ಯಕ್ತಿ ಗಂಡನಲ್ಲದೆ ಹೋದರೆ? ಅಂತಹ నిరాలేున్న నేట ಸಲು ಅವಳು ಸಿದ್ದಳಿರಲಿಲ್ಲ.ನಿಮಿಷಗಳು ಯುಗಗಳಾದ ಸನ್ನಿವೇಶ. " ಬನೂ-" ಆಃ! ಎಷ್ಟೊಂದು ದೀರ್ಘ ಕಾಲ ಅಂಥ ಪ್ರೀತಿಯ ಧ್ವನಿಗಾಗಿ ಅವಳು ಕಾದಿದ್ದಳು! “ಬನೂ--" ತನ್ನನ್ನೇ ಅಲ್ಲವೆ ಅವರು ಕರೆಯುತ್ತಿರುವುದು?'ಸ್ವರ ಕುಗ್ಗಿದೆಯಲ್ಲ? ಅಮ್ಮಿಯ ಮೈ ಬೆವತಿತು. ಹಣೆಯ ತುಂಬ ಬೆವರಿನ ಆಣಿ ಮುತ್ತುಗಳು. ರಾಮಚಂದ್ರನನ್ನು ನೋಡಲೆಂದು ಬಾಲೆ ಮುಖವೆತ್ತಿದಳು. ಕೈ ನಡುಗಿತು. ಗಾಜು ನೆಲಕ್ಕೆ ಬಿದ್ದು ಹತ್ತು ಹೋಳಾಯಿತು. " ಅಯ್ಯೋ!" " ಹಾ ! ಏನಾಯೇ?" ಆತ ಬಾಗಿ ಅವಳ ಕೈ ಹಿಡಿದುಕೊಂಡ.. ಕ್ಷಣ ಕಾಲ ಬವಳಿ ಬಂದಂತಾಯಿತು ಅಮ್ಮಿಗೆ. ರಾಮಚಂದ್ರ ಸಮಾಧಾನದ ಮಾತನಾಡಿದ: | “ಹೋಗಲಿ ಬಿಡು. ಅವರೆಲ್ಲಾ ಬರೋದರೊಳಗೆ ಗಾಜಿನ ಚೂರು ಎತ್ತಿ ಬಿಡೋಣ." ಆತ ಒಂದು ಹಣತೆ ಹಚ್ಚಿ ತಂದು, ಚೂರುಗಳನ್ನು ಆರಿಸಿದ. ಸೆರಗಿನಿಂದ ಮುಖ ಮುಚಿಕೊಂಡು ಆಮಿ ಅತಳು. ಗಾಜಿನ ಚೂರುಗಳನ್ನು ಎಸೆದು ಬಂದ ರಾಮಚಂದ್ರ ಹೇಳಿದ: "ಇಷ್ಟಕ್ಕೆಲ್ಲಾ ಅಳಾರೇನೇ? ಅಳಬಾರು..." ಆ ಕ್ಷಣದಲೆ ಹೃದಯ ಹಗುರವಾಯಿತು ಅಮ್ಮಿಗೆ.ಆಕೆ ಎದ್ದು ನಿಂತಳು.ಅವರಿಬ್ಬರೂ,ಪರಸ್ಪರ ಅಪೇಕ್ಷೆಗೆ ಅನುಸಾರವಾಗಿ ವರ್ತಿಸಿದವರಂತೆ, ಜಗಲಿಯತ್ತ ಸಾಗಿ, ಕತ್ತಲಲ್ಲಿ ಹೊಲಗಳನ್ನು ದಿಟಿಸುತ್ತ ನಿಂತರು. " ಹೆದರಿಕೆಯಾಯೆು ಬನೂ ?" ಹಾಗೆ ಕೇಳಿದವನು ರಾಮಚಂದ್ರ, ನಾಚಿಕೊಳ್ಳುತ್ತ ಅಮ್ಮಿ ಉತ್ತರವಿತ್ತಳು.: _ ಹಾಂ." "ನಿಜವಾಗ್ಲೂ?" ಹಿ-ಹಿ-- ಎಂದು ನಕ್ಕಳು. "ನಾನು ಬರಬಹುದೂಂತ ಕಾದಿದ್ದೆ ಅಲ್ಲವಾ?" ಅಂತಹ ಮಾತು ಕೇಳಿ ಹೃದಯಕ್ಕೆ ಸಂತೋಷವಾದರೂ, ಅಳಬೇಕೆಂದು ತೋರಿತು ಅಮ್ಮಿಗೆ ನಿಂತಲ್ಲಿಂದ ದೂರ ಸರಿಯಲೆಂದು ಆಕೆ ಮುಖ ತಿರುವಿದಳು. ಆಗ ರಾಮಚಂದ್ರ ಅವಳ ಕೈಯನ್ನು ಬಿಗಿಯಾಗಿ ಹಿಡಿದುಕೊಂಡ. ಮಾಡಬಾರ ದ್ದೇನನ್ನೋ ಮಾಡುವವರಂತೆ ಆ ಗಂಡ ಹೆಂಡತಿ ಒಬ್ಬರಿಗೊಬ್ಬರು ಸಮಿಾಪವಾಗಿ ನಿಂತರು. ಇಬ್ಬರ ಉಸಿರಾಟವೂ ತೀವ್ರವಾಗಿತು. 2