ಪುಟ:Banashankari.pdf/೩೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಸೋದರನ ಸಮಿಾಪದಲ್ಲಿ ಕುಳಿತಳು ತಂಗಿ. "ಘಟಿ ನನ್ನಣ್ಣ!" ಅಲ್ಲವೇ ಮತ್ತೆ ?" " ಯಾವತ್ತಣ್ಣ ಮದುವೆ?" ನೀನು ಬಂದ ಮೇಲೆ" "ಓ!" " ಅಣ್ಣನ ಮದುವೆ... ತಾನು ಹುಟ್ಟಿದ ಜೀವನಹಳ್ಳಿ.ಅಲ್ಲಿ ಆಕೆಯ ಮದುವೆ ಯಾಗಿತ್ತು. " ಎಲ್ಲಣ್ಣ, ಮದುವೆ ?" " ಅಯ್ಯೋ ಹುಚ್ಚಿ–ವಧು ಇರೋ ಹಳ್ಳಿಲೆ ಅಲ್ವೇನೆ?" ಅದು ನಿಜ...ತಾನು ಇದ್ದ ಹಳ್ಳಿಯಲ್ಲಿ ತನ್ನ ಮದುವೆಯಾಗಿತ್ತು.ವಧುವಿನ ಮನೆಗೆ ವರನ ದಿಬ್ಬಣ...ವಾದ್ಯ ವಾಲಗ...ಬಾಸಿಂಗ..ಆಗ ಶುಭಮುಹೂರ್ತದಲ್ಲಿ ಅಮ್ಮಿಯ ಯೋಚನೆಯ ಸರಣಿ ಕಡಿದು ಒಮ್ಮೆಲೆ ಮೆದುಳನ್ನು ಶೂನ್ಯ ಆವರಿಸಿತು. ಮುಖದಿಂದ ಗೆಲುವು ಆರಿತು.. ದು:ಖದ ನೆನಪುಗಳು ಕರಿಕುದುರೆಗಳಾಗಿ ನಾಗಾಲೋಟದಿಂದ ಗುಡುಗುಟ್ಟಿಕೊಂಡು ಬಂದುವು. ಅದನ್ನು ಊಹಿಸಿಕೊಳ್ಳುತ್ತ ರಾಮಕೃಷ್ಣ ಕೇಳಿದ: "ಅಮ್ಮಿ, ಚೆನಾಗಿದ್ದೀಯಾ?" "ಏನಣಾ ಚೆನಾಗಿರೋದು ಅಂದ್ರೆ?" "ನೀನು ಮೈ ನೆರೆದೀಂತ ಕಾಗದ ಬರೆದಿದು.ಅದಕ್ಕೆ ಏನು ಉತ್ತರ ಕೊಡ್ಬೇಕೋ ತೋಚ್ಚೆ ಇಲ್ಲ ನಂಗೆ." "ಹೂಂ..." ಅಮ್ಮಿ,ನೀನು ಸರಿಯಾಗಿ ನೋಡ್ಕೋತಾರಾ?" ಅದ್ಯಾಕಣ್ಣಾ ಹಾಗೆ ಕೇಳಿಡ್ತೀಯಾ?" " ನಿನ್ನನು ಸರಿಯಾಗಿ ನೋ? " " ಇಲ್ಲವಪ್ಪ.ಏನೂ ಇಲ್ಲ–" ಮೌನದ ಆ ನಾಲ್ಕು ನಿಮಿಷಗಳಲ್ಲಿ ಇಬ್ಬರ ಒಂದೇ ದಿಕ್ಕಿನತ್ತ. ಬ೦ದುವು. ಆ ವಿಷಯ ಮಾತು ಬಂದಿತ್ತೇನು?"

ಯಾವ ವಿಷಯೆಂಬುದು ಹೇಳಬೇಕಾಗಿರಲಿಲ್ಲ.
 "ಬಂದಿತ್ತು."
 "ಏನೆಂದರು" 
 "ಬೇಡ ಅಂತ ತೀರ್ಮಾನ ಮಾಡಿದು ಮಾವ." 
   “ಹಾಆ"

_ ರಾಮಕೃಷ್ಣ,ಕೃತಜ್ಞತೆಯಿಂದ ಕ್ಷಣಕಾಲ ಮೂಕನಾದ .

 ಅವರು ದೇವರು ಕಣೇ, ಸಾಕ್ಶಾತ್ ದೇವರು"