ಪುಟ:Banashankari.pdf/೩೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

 ನಡೆದು ರಾಮಕೃಷ್ಣನ ಮನೆ ಸೇರಿದರು. ಅರವತ್ತು ದಾಟಿದ್ದ ಮುದುಕಿ, ಅಮ್ಮಿಯ ಅಜ್ಜಿ, ಅಂಗಳದಲ್ಲೆ ನಿಂತು ಮೊಮ್ಮಗಳನ್ನು ಬರಸೆಳೆದುಕೊಂಡಳು. ಹಿಂದೆ ಅವಳ ಬೆನ್ನಿಗೆ ಅಂಟಿ! ಕೊಂಡೇ ಬೆಳೆದ ಪುಟ್ಟ ಹೆಣ್ಣು ಮಗು ಅಮ್ಮಿ ಈ ದಿನ ಮೈನೆರದ ಹುಡುಗಿ. ಅದು ತನ್ನದೇ ಮಾಂಸದೊಂದು ತುಣುಕು–ತನ್ನ ಮಗನ ಅಂಶ, ಅಮ್ಮಿಗೂ ಅಷ್ಟೇ. ವರ್ಷ ವರ್ಷಗಳು ಉರುಳಿದರೂ ಬಾಗದೆ ನಿಂತಿದ್ದ ಅಜ್ಜಿಯ ಬಲಶಾಲಿ ದೇಹ ಅವಳಿಗೊಂದು ಆಧಾರ ಸ್ತಂಭವಾಗಿತು, ಅದನ್ನು ಆತುಕೊಂಡು ಅವಳು ಮನದಣಿಯೆ ಅತ್ತಳು. ಕಿವಿ ಮಾತು ಎನ್ನಿಸುವಂತಹ ಇಳಿದನಿಯಲ್ಲಿ ಅಜ್ಜಿ ಹೇಳಿದಳು : "ನಿನ್ನ ಮದುವೆಗೆ ನಾನು ಬರಲೇ ಇಲ್ಲ ಮಗೂ." ನ್ನ ಮದುವೆ ಕತೆ ಮುಗೀತು ಅಜ್ಜೀ "ಕಂದಾ" ಅಣ್ಣನ ಮದುವೆ ಹೊತ್ತಿಗಾದರೂ ಬಂದಿರಲ್ಲ ಅಜ್ಜಿ".... ಬಂದಿದೀನಿ ಚಿನ್ನಾ"ಆ ಮುದುಕಿಯ ಸ್ವರ ಕಂಪಿಸಿ, ಕಣ್ಣಗಳಲ್ಲಿ ಕಂಬನಿ ತುಂಬಿ, ಹನಿ ತೊಟ್ಟಿಕ್ಕಿತು.ಬದುಕಿನಲ್ಲಿ ಹಲವು ಸಹಸ್ರ ಬಾರಿ ಆತ್ತರೂ ಇಂಗದ ಅಳಲಿನ ಕಡಲು ಅವಳು.

ಅಮ್ಮಿಯ ಮಾವ ಕೈಕಾಲು ತೊಳೆದುಕೊಂಡರು. ಗಾಡಿಯವನನ್ನು ಕರೆದು ಅವನ ಎತ್ತುಗಳ ಉಸ್ತುವಾರಿಗೆ ಏಪಾ೯ಟು ಮಾಡಿದರು.ಆ ಪುಟ್ಟ ಮನೆಯೊಳಗೆ ಬಂದು ರಾಮಕೃಷ್ಣ ಹಾಸಿದ ಹೊಸ ಚಾಪೆಯ ಮೇಲೆ ಕುಳಿತರು. ಅವರ ಕಿರಿಯ ಮಗ ತಂದೆಯು ತೊಡೆಯ ಮೇಲೆ ತಲೆ ಇಟು, ಮೈಗೆ ಮೈ ಆನಿಸಿ, ನಿದ್ದೆ ಹೋದ. ಹಿರಿಯ ಮಗನನ್ನು ಕಳೆದುಕೊಂಡಾಗ ಆದ ಗಾಯ ಇನ್ನೂ ಹಸುರಾಗಿತು. ಆ ಪಟ್ಟ ಮನೆ, ತಾನು ಹಿಂದೆ ಇಲ್ಲಿಗೆ ಬಂದು ಸಂಬಂಧ ಬೆಳೆಸುವ ಮಾತನಾಡಿದ್ದು, ನಡೆದು ಹೋದ ಮದುವೆ..ಆ ನೆನಪು ಗಳೂ ಹಸುರಾಗಿದ್ದುವು. ಅವರಿಗನಿಸುತಿತು.: ತನಗಾದ ಅನಾಯ, ಅಮ್ಮಿಯ ದುಃಖಿ ದೆದುರಲ್ಲಿ ಯಾವ ಲೆಕ್ಕ? ತನಗಾದರೋ ಬೇರೆ ಇಬ್ಬರು ಮಕ್ಕಳಿದ್ದಾರೆ. ಆದರೆ ಈ ಹುಡುಗಿ ಅಮ್ಮಿ? ಬದುಕೆಂದರೇನೆಂಬುದನ್ನು ಕಂಡು ಕೇಳಿ ಅನುಭವಿಸಿ ತಿಳಿಯುವ ಮೊದಲೇ ಮಣ್ಣಿನ ಗಡಿಗೆಯ ಹಾಗೆ ಅವಳ ಭವಿತವ್ಯ ಒಡೆದು ಹೋಯಿತಲ್ಲ? ಹೊರಗೆ ಅಂಗಳದಲ್ಲಿ ಅಜ್ಜಿ ಮೊಮ್ಮಗಳ ಮಾತು ಕತೆ ನಡೆದೇ ಇತು. "ಇದೆಲ್ಲ ಭಗವಂತನ ಮಾಯೆ, ಅಮ್ಮಿ, ಇಲ್ಲದೇ ಇದ್ದರೆ ನನ್ನಂಥ ಮುದುಕಿಗೆ ಮಾರಿ ರೋಗವೂ ಬರದೆ, ಎಳೇ ಕಸುಗಾಯಿಗಳನ್ನೇ ದೇವರು ಬಲಿ ತಗೋತಾನೆಯೇ?" " ನಾನೂ ಸತ್ತಿದ್ದರೆ ಅಜ್ಜಿ ? " " ಹಾಗನ್ಬಾರ್ದು ಚಿನ್ನಾ... ಅದೆಲಾ ನಾವು ಹೇಳಿದ ಹಾಗೆ ಆಗುತ್ಯೆ? ರಾಮಕೃಷ್ಣ ಬಂದು ಮೆಲ್ಲನೆಂದ: "ಸರೆನ್ಸ್ಟ್ರೀಯು! ಏಳು ಅಮ್ಮಿ.. ಅಳೋದಕ್ಕೂ ಒಂದು ಮಿತಿ ಮೇರೆ ಬೇಡವೆ? ಕೈಕಾಲು ತೊಳಕೊಂಡು ಒಳಗೊಾಗು. ಏಳಜ್ಜೀ ನೀನು" ಅಜ್ಜಿ ಮೊಮ್ಮಗಳು ಎದ್ದರು. ಅಣ್ಣ ಹೇಳಿದ