ಪುಟ:Banashankari.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

"ಅಡುಗೆ ಏನ್ಮಾಡ್ತಿಯೋ ನೋಡು ಅಮ್ಮಿ. ರಾತ್ರೆ ಬಹಳ ಹೊತ್ತಾಯ್ತು- ಬರೇ ಅನ್ನ ಸಾರು ಸಾಕು ಅಂತಾರೆ ಮಾವ." ಮಾವ ಸ್ನಾನ ಮಾಡಿ ಪೂಜೆಗೆ ಕುಳಿತರು. ಆ ಬಳಿಕ ಊಟ. ಎಲ್ಲರೂ ಮಲಗಿಕೊಂಡರು. ಆದರೆ ಅಜ್ಜಿ ಮೊಮ್ಮಗಳಿಗೆ ನಿದ್ದೆ ಬರಲಿಲ್ಲ. ಹೊರ ಜಗಲಿಯಲ್ಲೇ ಇಬ್ಬರೂ ಜತೆಯಾಗಿಯೇ ಮಲಗಿ, ಬೆಳಕು ಹರಿಯುವವರೆಗೂ ಮಾತನಾಡುತ್ತಲೆ ಇದ್ದರು ಆ ಅಜ್ಜಿಗಾದರೂ ಜೀವನದಲ್ಲಿ ಸುಖವಿತ್ತೆ? "ಸುಖ ಅನ್ನೋದು ಎಲ್ಲಿದೆ ಅಮ್ಮಿ? ಎಲ್ಲೂ ಇಲ್ಲ. ಸುಖ ಅನ್ನೊ ಮಾತಿಗೆ ಅಥ೯ವೇ ಇಲ್ಲ. ಮಕ್ಕಳ ಮನೆ ಅಂತ ಆ ಊರಿಂದ ಈ ಊರಿಗೆ ಬಂದೆ. ಈ ಊರಿಂದ ಆ ಊರಿಗೆ ಹೋದೆ. ಬಾಣಂತಿತನ ನೋಡ್ದೆ. ಮಕ್ಕಳನ್ನ ಆಡಿಸ್ದೆ. ಏನೋ ಮಾತು ಏನೋ ವಿರಸ. ಮನಸ್ಸಿಗೆ ಬೇಸರ. ಆಮೇಲೆ ಬಾಳೆಮಣ್ಣೂರಿಗೆ ಬಂದು ಈ ಕೆಂಪು ಸೀರೆ ಬಾವುಟ ಊರಿದೆ. ದೇವಸ್ಥಾನ ಇದೆ, ಮಠ ಇದೆ, ದೇವರ ಸೇವೆ ಮಾಡ್ಕೊಂ ಇದ್ಬಿಡೋಣ ಅಂತ...." ನೀನು ಪುಣ್ಯವಂತೆ ಅಜ್ಜಿ "ಎಂಥಾ ಮಾತು ಹೇಳ್ತಿಯಾ ಬಿಡು. ಪುಣ್ಯವಂತೆ!----" ಸಂಭಾಷಣೆ ಹರಿಯುತ್ತಿತು, ಹಾಗೆಯೇ ಹೂಂಗುಟ್ಟುತ್ತಲಿದ್ದ ಅಮ್ಮಿ ಸ್ವರ ತಗ್ಗಿಸಿ ತಗ್ಗಿಸಿ ಕೊನೆಗೆ ನಿದ್ದೆ ಹೊದಳು. ಅಜ್ಜಿಯೂ 'ಪರಮಾತ್ಮ' ಎಂದು ಉದ್ಗಾರವೆತ್ತುತ್ತಾ ಬಾಯಿ ಆಕಳಿಸಿ, ಚಿಟಿಕ ಬಾರಿಸಿ ಕಣ್ಣು ಮುಚ್ಚಿಕೊಂಡಳು. ಆದರೆ ಅಷ್ಟರಲ್ಲಿ ಕೋಳಿ ಕೂಗಿತು. ಆಕಾಶದಲ್ಲಿ ಬೆಳ್ಳಿ ಮೂಡಿತು. ಎಲ್ಲರಿಗಿಂತ ಮೊದಲಾಗಿ ಎದ್ದು ರಾಮಕೃಷ್ಣ ಹೊರಬ೦ದು ತಿರುಗಾಡುತ್ತ ದೇವರ ಸ್ತೋತ್ರದ ಶ್ಲೋಕಗಳನ್ನು ಗುಣುಗುಣಿಸಿದ. –ರಾಮಕೃಷ್ಣ ನೋಡಲು ಸುಂದರವಾಗಿದ್ದ, ತಂಗಿಯ ಹಾಗೆಯೇ. ಬಾಲಮೀಸೆ ಕುಡಿಯೊಡೆಯುತ್ತಿದ್ದ ಆ ಮುಖ ತೇಜಸ್ವಿಯಾಗಿತ್ತು. ಎಳೆತನದಲ್ಲೇ ಅನಿವಾಯ‍೯ವಾಗಿ ಹೊರಬೇಕಾಗಿ ಬಂದ ಬದುಕಿನ ಭಾರ ಆತನ ನಿಲುವಿಗೆ ಗಾಂಭೀರದ ಒಪ್ಪವಿಟ್ಟಿತು. ಅವ ನನ್ನು ಅಳಿಯನಾಗಿ ಒಪ್ಪಿಕೊಳ್ಳಲು ಸಿದ್ದರಿದ್ದ ಮಾವಂದಿರಿಗೆ ಕೊರತೆ ಇರಲಿಲ್ಲ. ಆತನಿಗೆ ಬೀಜ ಬಿತ್ತಿ ಬೆಳೆ ತೆಗೆಯಬಹುದಾದ ಒಂದಿಷ್ಟು ಹೊಲವಿತ್ತೆಂದಮೇಲೆ ಅದು ಎಲ್ಲರ ದೃಷ್ತಿಯಲ್ಲೂ'ಒಳ್ಳೆಯ ಸಂಬಂಧ'ವೇ.ತಾಯ್ತಂದೆಯರ ಅಕಾಲ ಮರಣದಂತಹ ಫೋರ ನಷ್ಟವನ್ನೂ ಸಹಿಸಿ ಆತ ಸ್ವಾವಲಂಬಿಯಾಗಿ ಬೆಳೆದಣೇಂಬ ವಿಷಯ ಅವನ ಬಗೆಗೆ ಕನಿಕರದೊಡನೆ ಮೆಚ್ಚುಗೆಯನ್ನೂಗಳಸಿತ್ತು. ವಯಸ್ಸು ಹದಿನೆಂಟೇ ಆದರೂ 'ಹುಡುಗ ಬುದ್ದಿಎಳೆ ನಿಂಬೇಕಾಯಿ' ಎಂದು ಯಾರೂ ರಾಮಕೃಷ್ಣನನ್ನು ದುರ್ಲಕ್ಷ್ಯ ಮಾಡುತ್ತಿರಲಿಲ್ಲ

ಇನ್ನಷ್ಟು ದಿನ ಒಂಟಿಯಾಗಿರಬೇಕೆಂದು ರಾಮಕೃಷ್ಣ ನಿರ್ಧರಿಸಿದ್ದ. ಆದರೆ ಅಮ್ಮಿಯ ವೈಧವ್ಯ ಆ ನಿರ್ಧರಾ ಬದಲಾಗಲು ಕಾರಣವಾಯಿತು. ಮದುವೆಯ ಮಾತನ್ನು ಪದೇ ಪದೇ ಆಡುತ್ತಿದ್ದ ಆ ಹಳ್ಳಯ ಸದ್ಗೃಹಸ್ಥರಾದ ಶಾನುಭೋಗರು ಸಮೀಪದ ಹಳ್ಳಿ