ಬನಶಂಕರಿ ಕರಕೊಂಡು ಹೋಗುವುದು... ಅಮ್ಮಿಯ ಪಾಲಿಗಾದರೋ, ಕರಕೊಂಡು ಹೋಗು ವವರು ಯಾರೂ ಇರಲಿಲ್ಲ. - ಓಡಾಟ ಮಾತು ನಗೆ ಕೆಲಸಗಳ ನಡುವಿನಲ್ಲನೂ, ಅಕ್ಕಿಯೊಳಗಿನ ಪುಡಿಕಲ್ಲಿನ ಹಾಗೆ, ಕಹಿ ನೆನಪು ಅಮ್ಮಿಯನ್ನು ಬಾಧಿಸಿತು. ಊಟವಾಗಿ ಹೊತ್ತು ತಿರುಗಿದ ಮೇಲೆ ರಾಮಕೃಷ್ಣ ಹೊರ ಹೊರಟ. " ನಾಳೆ ಸ್ನೇಹಿತರು ಯಾರು ಯಾರು ಬರಾರೋ ನೋಡ್ಕೋಂಡು ಬಲ್ತಿನಿ." ಎಂದ. "ಇವತು ಚಂದ್ರ ಮೂಡೋದು ನಾಲು ಘಳಿಗೆಗೆ ಬೇಗನೆ ಬಂದ್ದಿಡು ರಾಮನೂ. ಹರಟೆ ಹೊಡೀತಾ ನಿಂತ್ಯೋ ಬೇಡ. ಹೊತ್ತು ಕಂತೋಕುಂಚೇನೇ ಬಂದ್ದಿಡಪ್ಪ," ಎಂದಳು ಅಜ್ಜಿ. "ಓಹೋ. ಬಂದ್ಬಿಡ್ತೀನಿ" ." ರಾಮಕೃಷ್ಣ ಅಂಗಳಕ್ಕಿಳಿದ. ಅಮ್ಮಿ ಅವನನ್ನು ಹಿಂಬಾಲಿಸಿ ನಾಲು ಹೆಜ್ಜೆ ಬಂದಳು. "ಅಣ್ಣ-ನಾಳೆ ಇಷ್ಟೊತ್ಸೆ–" "ಅಣ್ಣ __ನಾಳೆ ಇಷ್ಟೊತ್ಗೆ-" ಅವನ ಮುಖ ಕೆಂಪಗಾಯಿತ್ತು "ಹೋಗೇ ಹೋಗೇ." "ಮದುವೆ ಮಂಟಪ!"
"ಓ! ಈಗ್ಲೇ ಇಷ್ಟು ಜಂಭ !!"
"ಹೀ" "ಇನ್ನು ಅತ್ತಿಗೆ ಬಂದೆಲೆ ಯಾರೊ ನನ್ನನ್ನು ಕೇಳೋರು?" ಪ್ರೀತಿಯ ಆ ಮಾತುಗಳಿಂದ ಅಣ್ಣನ ಮುಖವರಳಿತು. ಆದರೂ ಕೋಪದ ನಟನೆ ಮಾಡುತ್ತ " ಹೊಡೀತೀನಿ ನೋಡು" ಎಂದು ಕೈಯೆತ್ತಿದ. ಅಜ್ಜಿ ಒಳಗಿನಿಂದಲೇ, " ಏನೋ ಅದು ಗಲಾಟೆ?" ಎಂದು ನಗುತ್ತ ಕೇಳಿದಳು. ನೋಡಜ್ಜಿ ಹೊಡೀತಾನೆ " ಎಂದು ರಾಗವೆಳೆದಳು ದೂರು ಕೊಡುತ್ತಾ. ಅಜ್ಜಿ ಹೊರ ಬಂದು ಆಡಬಹುದಾದ ನಗೆ ಮಾತುಗಳನ್ನು ಕಲ್ಪಿಸಿಕೊಳ್ಳುತ್ತ, ರಾಮಕೃಷ್ಣ ನಸುನಗುತ್ತ ಹೊಲದ ಅಂಚನ್ನೇರಿ ಬೇಗ ಬೇಗನೆ ನಡೆದು ಹೋದ. ಊಟವಾದ ಬಳಿಕ ಅಮ್ಮಿಯ ಮಾವ ಬಲು ಹೊತ್ತಿನವರೆಗೆ ನಿದ್ದೆ ಹೋದರು. ಅಮ್ಮಿ ಕ್ಷಣವೂ ಸುಮ್ಮನಿರಲಿಲ್ಲ. ಆ ಮೂರು ವರ್ಷಗಳ ಕಾಲ ಒಂಟಿ ಬಾಳ್ವೆ ನಡೆಸಿದ್ದ ನ ಕೈಯಲ್ಲಿ ಅವರ ಮನೆ ಒಪ್ಪ ಓರಣವಿಲ್ಲದೆ ಅಂದಗೆಟ್ಟಿತು. ಮದುವೆಯಾದ ಮೇಲೆ ಆದಷ್ಟು ಬೇಗನೆ ಬರಲಿದ್ದ ಅತ್ತಿಗೆಯನ್ನು ಮನಸಿನಲ್ಲೇ ಅಮ್ಮಿ ಚಿತ್ರಿಸಿಕೊಂಡಳು. ಅಣ್ಣ ಯೊಡನೆ ಸುಖವಾಗಿ ಸಂಸಾರ ಮಾಡುವುದನ್ನು ಕಣುಂಬ ನೋಡಬೇಕೆಂಬುದೇ ಅವಳ ಅತ್ತಿಗೆಯೊಡನೆ ಸುಖವಾಗಿ ಸಂಸಾರವನ್ನು ಸುಖಮಯ ಮಾಡಲು ತಾನು ನೆರವಾಗಭೇಕೆಂಬುದೇ." ಈಗಿನ ಬಯಕೆ. ಆ ಸಂಸಾರವನ್ನು ಸುಖಮಯ ಮಾಡಲು ತಾನು ನೆರವಾಗಬೇಕೆಂಬುದೇ ಅವಳ ಆಸೆ.. ಅದನ್ನು ಈಡೇರಿಸಲು ಮೊದಲ ಹೆಜ್ಜೆ ಎಂಬಂತೆ ಅಮ್ಮಿ ಮನೆಯ ಒಳ ಹೊರಗನ್ನು ಸಾರಿಸಿ ಗುಡಿಸಿ, ಚೊಕ್ಕಟಗೊಳಿಸಿದಳು. ಬೆಳಿಗ್ಗೆ ಗೆಳತಿಯನ್ನು ಕಾಣಲು ಬಂದಾಗ ಕಾವೇರಿ ಕೇಳಿದ್ದಳು.: t