ಈ ಪುಟವನ್ನು ಪರಿಶೀಲಿಸಲಾಗಿದೆ
"ಅ ದೇವರ ಮನೆಗೆ ಹೋಗಿ ಹಣತೆ ಹಚ್ಚಿಕೊಂಡು ಬಾರೇ." "ಹೂಂ ಅತ್ತೆ." ಪ್ರೀತಿಯ ಮಗುವಿಗೆ ಹೇಳಿದ ಹಾಗಿತು ಅತ್ರೆಯ ಮಾತು. ಸೊಸೆಯೂ ಅಷ್ಟೆ.
ಹೂವಿನಷ್ಟು ಕೋಮಲ ಆ ಮಾರುತ್ತರದ ಧ್ವನಿ.
ಮೊಗಸಾಲೆಯಲ್ಲಿ ಮಾವ ಕುಳಿತಿದ್ದರು. ಅವರೆದುರಿಂದ ಹಾದು ಹೋಗಿ ಆ ಹಣತೆ ಯನ್ನೆತ್ತಿಕೊಳ್ಳಬೇಕು. ಹನ್ನೆರಡು-ಹದಿಮೂರರ ಆ ಪಟ್ಟ ಹುಡುಗಿ ಮೈತುಂಬ ಸೆರಗು ಹೊದೆದುಕೊಂಡು ವಿನೀತಳಾಗಿ ಮಾವನೆದುರು ನಡೆದು ಬಂದಳು.
ಶಾಂತವಾದ ಸ್ವರದಲಿ ಅವರು ಕೇಳಿದರು: ಸಾಲ ದೀಪ ಹಚ್ತೀಯೇನಮ್ಮಣ್ಣಿ?"
ಹೂಂ, ಮಾವಯ."
"ಹೌದು, ಹಚ್ಚಿಡಿ. ಆಗ್ನಿಂದ ಪಟಾಕಿ ಸುಡೋಕೆ ಹುಡುಗರು ಕಾಯಾ ಇದಾರೆ." "ಹೂಂ..."
ಪಟಾಕಿಯ ಪದೋಚಾರ ಅಮ್ಮಿ ಲಗುಬಗೆಯಿಂದ ನಡೆಯುವಂತೆ ಮಾಡಿತು. ಎಣ್ಣೆ ತುಂಬಿದ್ದ ಹಣತೆಯನ್ನೆತ್ತಿಕೊಂಡು ಅವಳು ದೇವರ ಮನೆಗೆ ಹೋದಳು. ಹೊಸತಾಗಿ ಹೊಸೆದಿದ್ದ ಅರಳೆಯ ಬತ್ತಿ ಸೊಗಸಾಗಿ ಆ ಹಣತೆಯಲ್ಲಿ ಎಣ್ಣೆಯೊಡನೆ ಬೆರೆತು ಒರಗಿ ಕೊಂಡಿತು, ಒಂದು ವಾರಕ್ಕೆ ಹಿಂದೆಯೇ ದೀಪಾವಳಿಯ ಹಬ್ಬಕ್ಕೆಂದು ಅತ್ತೆಯೂ ಸೊಸೆಯನೂ ಜತೆಯಾಗಿ ಕುಳಿತು ಬತ್ತಿ ಹೊಸೆದಿದ್ದರು–ಮೆಲುದನಿಯಲ್ಲಿ ದೇವರ ನಾಮ
ಸಿಂಗರಿಸಿದ್ದ ದೇವರೆದುರು ದೀಪ ಉರಿಯುತ್ತಿತು. ಅಂಟಿಸಿಕೊಂಡಳು ಅಮ್ಮಿ, ಗಾಳಿಗೆ ಆರದಂತೆ ಸೆರಗಿನಿಂದ ಹಣತೆಯನ್ನು ಮರೆಮಾಡಿ, ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತ, ಅವಳು ಹೊರಬಂದಳು. ಹೊರಗೆ ಹುಡುಗರಿಬ್ಬರು ಗಲಾಟೆ ಮಾಡುತ್ತಿದ್ದರು. "ಅಪ್ಪಯ್ಯ–ನೋಡಪ್ಪಯ್ಯ, ಹೊಡೀತಾನೆ ರಂಗ." " ನಾನಲ್ಲ ಅಪ್ಪಯ್ಯ, ಸುಳ್ಳು ಹೇಳಾನೆ ಅಣ್ಣ." ಅಮ್ಮಿಯ ಮೈದುನಂದಿರು ಯಾವಾಗಲೂ ಹಾಗೆಯೇ.. ಹತು ವರ್ಷ-ಆರು ವರ್ಷ ವಯಸ್ಸಿನ ಆ ಹುಡುಗರು ಹೊರಗೆ ಗದ್ದೆಗಳಿಗೋ ತೋಟಕ್ಕೋ ಹೋದರೆ ಮನೆ ಬಿಕೋ ಎನ್ನುತ್ತಿತ್ತು, ಅದು ಸಹಿಸಲಾಗದ ಮೌನ. ಅಮ್ಮಿ ಯಾವಾಗಲೂ ಅವರು ಹಿಂತಿರುಗಿ ಬರುವುದನ್ನೇ ಇದಿರು ನೋಡುತ್ತಿದ್ದಳು. ಅತ್ತೆಯನೂ ಆಗಾಗ್ಗೆ ಕೇಳುತ್ತಿದ್ದರು : "ರಂಗ వెళ్లి ? నాణి ఎల్లె అమ్మి ? ಆ ಹುಡುಗರೆ, ಮಹಾ ತು೦ಟರು. ಆತ್ರಿಗೆ ಎ೦ದು ಒ೦ದು ದಿನವೂ అమ్మి