ನಾಲಗೆಗಳು ಬನಶಂಕರಿಯನ್ನು ತಿವಿಯದೆ ಬಿಡಲಿಲ್ಲ. ಹೀಗೆ ವಾತಾವರಣವೆಲ್ಲ ಇಂತಹ ಮಾತುಗಳಿಂದ ತುಂಬಿದ್ದರೂ ಅಜ್ಜಿಗೆ ಇದೊಂದು ವಿಷಯವೂ ಗೊತ್ತಿರಲಿಲ್ಲ. ಆಕೆಯೊಡನೆ ಮೊದಲು ಅದನ್ನು ಕುರಿತು ಮಾತನಾಡಿದ್ದು ದೇವಸ್ಥಾನದ ಅರ್ಚಕ. - "ಏನು ಸುಬ್ಬಕ್ಕ, ಏನೋ ನಡೆಸಿದೀಯಂತಲ್ಲಾ?" ಅಜ್ಜಿಗೆ ಅರ್ಥವಾಗಲಿಲ್ಲ. "ರಾಮಶಾಸ್ತ್ರಿ ನಿನ್ನ ಮೊಮ್ಮಗಳಿಗೆ ಇನ್ನೊಂದು ಮದುವೆ ಮಾಡಿಸ್ಬೇಕೂಂತ ಬಹಳ ಓಡಾಡ್ತಿದ್ದಾನಂತೆ." " ಅಯ್ಯೋ ಯಾರು ಹಾಗಂದೋರು?"
" ಏನೂ ತಿಳೀದವಳ ಹಾಗೆ ಮಾಡ್ರೀಯಲ್ಲ ಸುಬ್ಬಕ್ಕ ! ಏನೋಂತಿದ್ದೆ. ಪರವಾಗಿ
" ಅಯ್ಯೋ! ಉಂಟೇ ಎಲ್ಲಾದರೂ! ಸಾಯೋ ಕಾಲಕ್ಕೆ ಈ ಮುದುಕಿ ಸುಳಾಡಿದ ಳೂಂತ ಮಾಡ್ರಿದೀರಲ್ಲ." ಮುದುಕಿಗೊಂದೂ ತಿಳಿಯದೆಂಬುದು ಅಚ೯ಕನಿಗೆ ಅರಿವಾಯಿತು. ಮತ್ತೆ ಮನೆಯಲ್ಲಿ ಅಜ್ಜಿ-ಮೊಮ್ಮಗಳ ಪ್ರಕರಣ, ಆದರೆ ಸ್ವರವೆತ್ತಿ ಗದರಿಸುವ ಶಕ್ತಿಯೇ ಇರಲಿಲ್ಲ ಅಜ್ಜಿಗೆ ಮೊಮ್ಮಗಳನ್ನು ಜರೆದು ನಿಂದಿಸಿ ಶಪಿಸಿ ಕೂಗಾಡಬೇಕೆಂದು ಆಕೆಗೆ ತೋರುತ್ತಿತು, ಆದರೆ ಆ ಮಾತುಗಳೆಲ್ಲ ಗಂಟಲಲ್ಲೆ ತಡೆದು ನಿಲ್ಲುತ್ತಿದ್ದುವು. ಆಕೆಯ ಹೃದಯ ಸೀದು ಹೋಗಿ, ಕೈಕಾಲುಗಳು ಕೊನೆಯೇ ಇಲ್ಲವೆಂಬಂತೆ ಕಂಪಿಸುತ್ತಿ ಅಳುತಳುತ ಬನಶಂಕರಿ ಇಷ್ಟೇ ಅಂದಳು "ನನಗೊಂದೂ ತಿಳಿದು ಅಜ್ಜಿ, ಸುಂದರಮ್ಮ ಯಾವತ್ತೊ ಒಮ್ಮೆ ಏನೋ ಅಂದಿದ್ಲು " ಅಯ್ಯೋ ಅಮ್ಮೀ... ಮಾತಾಯ್ತಲ್ಲೇ ನಮ್ಮ ಸಂಸಾರ! ನನ್ನ ಮಾನ ಕಳೆದಿಯಲ್ಲೇ!" " ಅಜ್ಜಿ, ಸಾಕಜ್ಜಿ. ಇನ್ನೊಂದು ಮಾತು ಹೇಳಿದರೆ ಬಾವಿಗೆ ಹಾರಿ ಪ್ರಾಣ ಬಿಡ್ರೀನಿ." " ಓ ದೇವರೇ!" ಅಜ್ಜಿ ಮೊಮ್ಮಗಳನ್ನು ಮತ್ತೆ ಬಯ್ಯಲಿಲ್ಲ. ಅವಳ ಮೆದುಳು ಯೋಚಿಸುವುದನ್ನೆ ನಿಲ್ಲಿಸಿತು. ಯಾವುದು ತಪ್ಪೊ, ಯಾವುದು ಸರಿಯೊ, ಯಾರಿಗೆ ಗೊತ್ತು ? ತನ್ನನ್ನೊಮ್ಮೆ ಪರಮಾತ್ಮ ತನ್ನ ಸಾನ್ನಿಧ್ಯಕ್ಕೆ ಕರೆದುಕೊಳ್ಳಬಾರದೇ ಎಂದು ಅಜ್ಜಿ ಹಂಬಲಿಸಿದಳು.ಆದರೆ ಆ ಹಂಬಲಿಸಿದಳು.ಆದರೆ ಆ ಹಂಬಲವನ್ನು, ಅಮ್ಮಿಗೆ ನೋವಾಗಬಹುದೆಂದು, ಮಾತುಗಳು ರೂಪದಲ್ಲಿ ಆಕೆ ಹೊರಗೆಡವಲ್ಲಿಲ.ಮೊಮ್ಮಗಳ ಮೈದಡವುತ್ತ ಅಜ್ಜಿ ಮೆಲ್ಲನೆ ಹೇಳಿದಳು: "ದೇವರಿಗೆ ಕಣ್ಣಲ್ಲಿ ರಕ್ತವಿಲ್ಲ ಅಮ್ಮಿ... ನಮ್ಮ ಹಣೇಲಿ ಬರದದ್ದೇ ಹೀಗೆ... ಸಹಿಸ್ಕೋಬೇಕು ಮುದ್ದೂ......" ಬನಶಂಕರಿ ಸಹಿಸಿಕೊಂಡಳು. ಬಿಂದಿಗೆಯನ್ನು ಕೆಳಕ್ಕಿಳಿಸಿದಾಗ ಬಾವಿಯ ನೀರು ಅಮ್ಮಿಯನ್ನು ಕಂಡು ಅಣಕಿಸುತ್ತಿತ್ತು. ಆ ಅಣಕಕ್ಕೆ ಅಮ್ಮಿ ಅಂಜಲಿಲ್ಲ.ನೀರ
ಆ ಹಂಬಲವನ್ನು, ಅಮ್ಮಿಗೆ ನೋವಾಗಬಹುದೆಂದು, ಮಾತುಗಳ ರೂಪದಲ್ಲಿ ಆಕೆ ಹೊರ ಗೆಡವಲಿಲ್ಲ, ಮೊಮ್ಮಗಳ ಮೈದಡವುತ್ತ ಅಜ್ಜಿ ಮೆಲ್ಲನೆ ಹೇಳಿದಳು.:
ಸೊಬೇಕು ಮುದಸ್ಸೊ..." ಬನಶಂಕರಿ ಸಹಿಸಿಕೊಂಡಳು. ಬಿಂದಿಗೆಯನ್ನು ಕೆಳಕ್ಕಿಳಿಸಿದಾಗ ಬಾವಿಯ ನೀರು ಅಮ್ಮಿಯನ್ನು ಕಂಡು ಅಣಕಿಸುತ್ತಿತು, ಆ ಅಣಕಕ್ಕೆ ಅಮ್ಮಿ ಅಂಜಲಿಲ್ಲ, ನೀರಿನ ಆಳದ