ಪುಟ:Banashankari.pdf/೮೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಚುಕ್ಕಾಣಿ ಇರಲಿಲ್ಲ. ಹಾಯಿ ಇರಲಿಲ್ಲ ದೋಣಿಗೆ, ಸುಮ್ಮ ಸುಮ್ಮನೆ ಗೊತ್ತು. ಗುರು ಇಲ್ಲದೆ ಅದು ನೀರ ಮೇಲೆ ತೇಲುತ್ತಿತ್ತು. ಮುಳುಗಿರಲಿಲ್ಲ, ತೇಲುತ್ತಿತ್ತು.

  ಸುಂದರಮ್ಮನೆಂದಳು : 
 " ಬನೂ, ಮೂದೇವಿಯಾಗ್ಬೇಡಮ್ಮಾ. ಏನಾಗಿದೇಂತ ಈ ಮೌನ ?"
 " ಮೂದೇಯಾಗಿದ್ದರೇ ಮೇಲಾಗಿತ್ತು ಅಕ್ಕಾ ಮಾತನಾಡೋ ಕಷ್ಟ ತಪ್ತಿತ್ತು."
 " ಹಾಗೆ ನೊಂದ್ಕೋ ಬಾರ್ದು ಬನೂ. ದಿವಸ್ದಿಂದ ದಿವಸಕ್ಕೆ ಅಜ್ಜಿ ಕ್ಷೀಣವಾಗ್ತಾ ಇದಾರೆ. ನೀನು ನಗುನಗ್ತಾ ಓಡಾಡ್ತಾ ಇದ್ರೆ ಆಕೆಗೂ ಅಮಾಧನವಾಗುತ್ತೆ." 
ಅಮ್ಮಿ ನಕ್ಕಳು. ನೋವು ನಗುವಾಗಿ, ಮಾಟವಾದ ಆ ತುಟಿಗಳ ಮೇಲೆ ವಿಶಾಲವಾದ ಮುಖದ ಮೇಲೆ ಕ್ಷಣಕಾಲ ಕುಣಿದು ಮರೆಯಾಯಿತು. 
 ಗೆಳತಿಯ ಸಂಕಟವನ್ನು  ಸಹಿಸಲಾರದೆ ಸುಂದರಮ್ಮನ ಕಂಠ ಗದ್ಗದಿತವಾಯಿತು. ಆಕೆ ತನ್ನ ಮನೆಗೆ ಹೊರಟುಹೊದಳು. ಮನೆಯಲ್ಲಿ ದೇವರ ಮೂರ್ತಿಯ ಮುಂದೆ ನಿಂತು ಕೈ ಜೋಡಿಯ ತಲೆಬಾಗಿ ಅತ್ತಳು. 
  "ಯಾರ ಪ್ರೀತ್ಯರ್ಥ ದೇವರೆ - ಇದು ಯಾರ ಪ್ರೀತ್ಯರ್ಥ ? " ಎಂದು ಮೌನದ ಮಹಾದೇವನನ್ನು ಆಕೆ ಕೇಳಿದಳು.

... ಪಟ್ಟಕ್ಕೆ ಬಂದ ಯುವಕ ಯತಿಗಳ ಧರ್ಮರಾಜ್ಯಭಾರ ಬಾಳೆಮಣ್ಣೂರಿನಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿತು. ತಮ್ಮ ಪ್ರೀತ್ಯರ್ಥವಾಗಿ ಏನನ್ನು ಮಾಡಿಸುವುದಕ್ಕೂ ಅವರು ಹಿಂದು ಮುಂದು ನೋಡಲಿಲ್ಲ. ಅವರ ವಿಷಯಲಂಪಟತನ ಗೋಪ್ಯದ ಆವರಣವನ್ನು ದಾಟಿ ಹೊರಬಂತು. ಅವರ ಹಸ್ತಕರ ಬಲೆಯೊಳಗಿಂದ ಪಾರಾಗುವುದು ದುಸ್ಸಾಧ್ಯವಾಯಿತು.

 ಅಜ್ಜಿ ಈಗಲೂ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಅಲ್ಲಿ ಮಠಕ್ಕೆ ಸಂಬಂಧಿಸಿದ ಹತ್ತಾರು ಕೆಟ್ಟ ವಾರ್ತೆಗಳು ಆಕೆಯ ಕಿವಿಯ ಮೇಲೆ ಬೀಳುತ್ತಿದ್ದವು. ಶ್ರವಣಕ್ಕೆ ಕಡಿಮೆ ಯಾಗಿತ್ತು ಆ ಕಿವಿಗಳಿಗೆ, ಹೀಗಿದ್ದರೂ ಆಕೆಗೆ ಸ್ವಷ್ಟವಾಗಿ ಕಢೇಳಿಸುವಂತೆ ಗಟ್ಟಿಯಾಗಿಯೇ ಜನ ಮಾತನಾಡುತ್ತಿದ್ದರು. ಮುದುಕಿ ಜೋಲುಮೋರೆ ಹಾಕಿಕೊಂಡು ಹಿಂತಿರುಗುತ್ತಿದ್ದಳು. 
ಆಕೆಯನ್ನು ಹಾದಿಯಲ್ಲೆ ತಡೆದು ಒಮ್ಮೆ ಮಠದವನೊಬ್ಬ ಸುಖ ದುಃಖ ವಿಚಾರಿಸಿದ. " ಏನು ಸುಬ್ಬಕ್ಕ, ಅಪರೂಪವಾದೆಯಲ್ಲಾ, ಹೊಸ ಯತಿಗಳು ಪಟ್ಟಕ್ಕೆ ಬಂದಮೇಲೆ ಮಠಕ್ಕೆ ನೀನು ಬರೋದೇ ಇಲ್ಲಾಮತೆ ಕಾಣುತ್ತೆ. " 
ಉಗುಳು ನುಂಗುತ್ತ ಅಜ್ಜಿ ಮೆಲ್ಲನೆ ಉತ್ತರವಿತ್ತಳು : 
" ಉಂಟೆ ಎಲ್ಲಾದರೂ ? ಬಂದಿದ್ದೆ .... ಬಂದಿದ್ದೆ.. ಆದರಡೆ ಈಗ ವಯಸ್ಸಾಗ್ತಾ ಬಂತು.."
" ಪುರಾಣ ಕೇಳೋಕೂ ಬರೋದಿಲ್ಲ ನೀನು ? ಹಿಂದೆಯಾದರಡೆ ಮೊಮ್ಮಗಳ್ನ ಕರೆಕೊಂಡೆ ಬಂದ್ಬಿಡ್ತಿದ್ದೆ... 
 "ಹೌದೌದು... ಈಗ ನಡೆಯೋಕೆ ಆಗಲ್ಲ... ಕಾಲು ನಡುಗ್ತದೆ..." 
 " ಸಾಯಂಕಾಲ ಮನೇಲೇ ಇರ್ತಿಯೇನೋ ? ... ಮೊಮ್ಮಗಳ್ನ ಪಾಪ...ಬಿಟ್ಟರೋ ಹಾಗೂ ಇಲ್ಲ."