ಪುಟ:Banashankari.pdf/೯೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

" ಏನಂದೆ?" ಅಂದುದನ್ನು ವಿವರಿಸಲು ಆಹೆಂಸರು ಅಲ್ಲಿದ್ದರಲ್ಲವೆ ! ಮತ್ತೋಂದು ದಿನ ಬೆನ್ನ ಹಿಂದಿನಿಂದಿ ಯಾರೋ ಅಂದುದು ಕೇಳಿತು : " ಬಕಾರಿ ! ಈಕೇನೆ ಗೊತ್ತು ಮಾಡಿದಾಳೋ ಏನೊ. ಇನ್ನೊಂದು ಇರ್ಲಿ ಗಂಡ ನಿಂಗೇತ."

ಸರಕ್ಕನೆ ತಿರುಗಿ ನೋಡಿದಳು ಸುಂದರಮ್ಮ, ಹಾಗೆ ಮಾತನಾಡಿದವರನ್ನು ಹರಿದು ತಿನ್ನುವ ಇಚ್ಛೆಯಾಯಿತು ಅವಳಿಗೆ. ಆದರೆ ಆಕೆಯ ಉಗುರುಗಳ ಪರಿಚಯ ಮಾಡಿಕೊಳ್ಳಲು ಇಷ್ಟವಿಲ್ಲದೆ, ಈ ಇಬ್ಬರು ಹೆಂಗಸರೂ ಸರಸರನೆ ಹೊರಟುಹೋಗಿದ್ದರು.

ಮನೆ ಸೇರಿದ ಸುಂದರಮ್ಮ ರೋಷ ತಡೆಯಲಾಗದೆ ಕೂಗಾಡಿದಳು.: " ಎಂಥೆಂಥಾ ಮನುಷ್ಯರಿದ್ದಾರೆ ಈ ಲೋಕದಲ್ಲಿ!" ಅಮ್ಮಿಗೆ ಅರ್ಥವಾಗುತ್ತಿತು, ಹೃದಯ ಹೆಪ್ಪುಗಟ್ಟಿ ಮೆದುಳು ಮುದುಡಿಕೊಂಡಿದ್ದರೂ ಆಕೆಗೆ ಅರ್ಥವಾಗುತ್ತಿತು.

  ಬಹಳ ದಿನ ಅಮ್ಮಿ ಮನಸ್ಸಿನಲ್ಲೆ ಮೆಲುಕು ಹಾಕಿದಳು: ಸುಂದರಮ್ಮನ ಮನೆಯಲ್ಲೇ ಇನ್ನೆಷ್ಟು ದಿನ ಇರುವುದು ಸಾಧ್ಯ? ಆಕೆಯ ಬಾಣಂತಿತನ ಮುಗಿಯುವವರೆಗೂ ಅಲ್ಲಿರ ಬೇಕಾದುದು ನಾಯ.. ಅದಾದ ಮೇಲೆ?

ಆ ಪ್ರಶ್ನೇ ಬಾರಿ ಬಾರಿಗೂ ಮುಖ ತೋರಿಸುತ್ತಿತ್ತು. ಎಂದೂ ಉತ್ತರ ದೊರೆಯುತ್ತಿರಲಿಲ್ಲ. ...ಮಧಾಹ್ನ ಬಟ್ಟೆಬರೆಯೊಡನೆ ಬನಶಂಕರಿ ನದಿಯ ದಡಕ್ಕೆ ಹೋಗುತ್ತಿದ್ದಳು. ಯಾರೂ ಇಲ್ಲದೊಂದು ಮೂಲೆಯಲ್ಲಿ ಬಟ್ಟೆಯೊಗೆದು ಹಿಂಡಿ ರಾಮಶಾಸ್ತ್ರಿಯ ಮನೆಗೆ ಹಿಂತಿರುಗುತ್ತಿದ್ದಳು.

ಜನರ ದೃಷ್ಟಿ ತನ್ನ ಮೇಲಿದ್ದರೂ, ನೆಲ ನೋಡಿಕೊಂಡೇ ಬರುವುದು ಆಕೆಗೆ ರೂಢಿ ಯಾಯಿತು...

ಬನಶಂಕರಿ ಬಟ್ಟೆ ಒಗೆಯುತ್ತಿದ್ದಾಗಲೊಮ್ಮೆ ಒಂದು ಮಧಾಹ್ನ ಹಿಂದಿನಿಂದ ಮಾತು ಕೇಳಿಸಿತು...

 " ಚೆನಾಗಿದಿಯೇನಮ್ಮ?" 
 ಪರಿಚಿತವಾಗಿತು ಸ್ವರ. ಅಮ್ಮಿ ಕುಳಿತಲ್ಲಿಂದಲೆ ಮುಖ ತಿರುಗಿಸಿ ನೋಡಿದಳು. ನಾರಾ ಯಣರಾಯರು ! ಆಕೆಯ ಗಂಟಲಿನಿಂದ ಸ್ವರ ಹೊರಡಲಿಲ್ಲ ಯಾಕಾದರೂ ಮಾತನಾಡಿಸಿ ದರೊ–ಎನ್ನಿಸಿತು. ಅವರಿಗೆ ಉತ್ತರ ಕೊಡಬೇಕೆ ಬೇಡವೆ? ದಿಗಿಲಾಯಿತು. ಕುಳಿತಲ್ಲೆ ಭೂಮಿಯಲ್ಲಿಳಿದು ಕಣ್ಮರೆಯಾಗುವುದು ಸಾಧ್ಯವಿದ್ದರೆ?
 "ಯಾಕೆ ಬನಶಂಕರಿ? ನನ್ದತೇಲಿ ಮಾತಾಡಾದ್ದೇನು? ನಾನೂ ಕೆಟ್ಟವನು–ಎಲ್ಲರ ಹಾಗೆ - ಅಂತ ತಿಳಿದಿದೀಯೇನು?"

ನಂಬುಗೆ ಹುಟ್ಟಿಸುವ ಮಾತು ! ತಾನು ಏನಾದರೂ ಉತ್ತರ ಕೊಡಬೇಕೆಂದು ತೋರಿತು ಅಮ್ಮಿಗೆ. ಆದರೆ ಮೆದುಳು ಯಾವ ಉತ್ತರವನ್ನೂ ಸಿದ್ದಗೊಳಿಸಲಿಲ್ಲ. ಮೈ ಮಾತ್ರ ಬೆವರಿಗೆ ಜನ್ಮವಿತ್ತಿತು.