ಪುಟ:Banashankari.pdf/೯೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

 ಬನಶಂಕರಿ

  • ಹೋಗಲಿ ಬಿಡು! ನನ್ನ ಗುರುತಾದರೂ ಇದೆ ತಾನೆ ? "

ಅನುಭವಿಯಾದ ನಾರಾಯಣರಾಯರ ನಯ ನುಡಿ !

" ಅಯ್ಯೋ, ಹಾಗಂದರೇನು ?" 

ತನ್ನ ಸ್ವರವನ್ನೇ ಕೇಳುತ್ತ ಅಮ್ಮಿಗೆ ಆಶ್ಚರ್ಯವಾಯಿತು. ತಾನು ಮಾತನಾಡಿದಂತಾ ಯಿತು ಹಾಗಾದರೆ ! ಸೋಲನ್ನು ಯಾವ ಕಾಲದಲ್ಲೂ ಒಪ್ಪದ ನಾರಾಯಣರಾಯರು ಮುಗುಳ್ನಕ್ಕರು :

" ಮತ್ತೆ ಯಾಕಿಷ್ಟು ಭಯ ? ಒಳ್ಳೆ ಗುಮ್ಮನ್ನು ಕಂಡಹಾಗೆ ಮಾಡ್ತೀಯಲ್ಲ. ಹೊರಡ್ತೀನಮ್ಮ ನಾನು. " 
ಅಮ್ಮಿಯ ಮುಖ ಭಾಡಿತು. ಅಜ್ಜಿ ತೀರಿದ ದಿನ ಮುಂಜಾವದಲ್ಲಿ ಅವರು ಬಂದಿದ್ದರು. ಭೂಮಿಯಲ್ಲಿ ತನ್ನವಳಾಗಿ ಉಳಿದಿದ್ದ ಆ ಒಬ್ಬಳೇ ಒಬ್ಬಳು ಅಜ್ಜಿ ತನ್ನಿಂದ ಮರಳಿ ಬರದ ರೀతియుల్లి ಹೊರಟುಹೋದುದನ್ನು ಅವರು ಕಂಡಿದ್ದರು. ದು:ಖದ ಮಹಾ ತೆರೆಗಳು ಬಲು ಭೀಕರವಾಗಿ ತನ್ನನ್ನು ಮುತ್ತಿದಾಗ ಸಾಂತ್ವನದ ಎರಡು ಮಾತುಗಳನ್ನು ಅವರು ಆಡಿದ್ದರು.

ಕಹಿಯಾಗಿರಲಿಲ್ಲ ಆ ನೆನಪು : ಬದಲು, ಹಿತಕರವಾಗಿತ್ತು.

ಈಗ ಮತ್ತೆ ಅವರೊಡನೆ ಒಂದೆರಡು ಮಾತು ಆಡುವ ಸುಯೋಗ. ಅದಕ್ಕೂ ಭಾಗ್ಯ ಬೇಕು. ತಾನು ಸರಿಯಾಗಿ ಉತ್ತರ ಕೊಡಲಿಲ್ಲವೆಂದು ಅವರು ಹೊರಟೇ ಬಿಟ್ಟರಲ್ಲ?

ಅಮ್ಮಿ ತಿರುಗಿ ನೋಡಿದಳು. ಅಲ್ಲೇ ಇದ್ದುವು ಆ ಪಾದಗಳು. ಲಜ್ಜೆಯಿಂದ ಅಮ್ಮಿಯ ಮುಖ ಕೆಂಪಾಗಾಯಿತು. ಕಣ್ಣುಗಳಿಗೆ ಕತ್ತಲು ಕವಿದ ಹಾಗಾಯಿತು. ನಾರಾಯಣರಾಯರು ನಗುತ್ತ ಅಂದರು :

" ಪಿಶಾಚಿ ತೊಲಗ್ತು ಅಂತ ಇದ್ದೆಯೇನು ? ಇಲ್ಲವಮ್ಮಾ, ಇನ್ನೂ ಇಲ್ಲೇ ನಿಂತಿದೀನಿ." ಮತ್ತೊಮ್ಮೆ ಮೆಲ್ಲನೆ ಹೊರಬಿದ್ದ ಅಮ್ಮಿಯ ಸ್ವರ :
"ಸುಮ್ಮನೆ ಯಾಕೆ ಗೋಳುಹುಯಿಸ್ತೀರಿ ಇನ್ನೊಬ್ಬರನ್ನು? " ಅದಕ್ಕೆ ಉತ್ತರ ನಗು. ಜತೆಯಲ್ಲೆ–
"ಅಂತೂ ನಾನೂ ಕೆಟ್ಟವನೂಂತ ಅಂದ ಹಾಗಾಯ್ತು ನೀನು!" ಅಮ್ಮಿ ಮಾತನಾಡಲು ತಿಳಿಯದೆ ಸುಮ್ಮನಾದಳು. ಅದನ್ನು ಕಂಡು ನಾರಾಯಣ ರಾಯರು ಮಾತಿನ ಸರಣಿ ಬದಲಾಯಿಸಿದರು.

ಬನಶಂಕರೀ..."

ಮತ್ತೊಮ್ಮೆ ತನ್ನ ಹೆಸರು ಹಿಡಿದು ಅವರು ಕರೆದಿದ್ದರು!

ಹೂಂ ?"

రాಮಶಾಸ್ರಿಯರ  ಮನೇಲೆ ಇದೀಯೇನು? "
"ಹೂಂ?"
"ಎಲ್ಲ ಅನುಕೂಲವಾಗಿದೆ ತಾನೆ?"
"ಇದೆ."

"ಪಾಪ! ಅಜ್ಜಿ ಇಲ್ತಿದ್ರೆ ನಿನಗೆ ಈ ಗೋಳಾಗ್ತಿರ್ಲಿಲ್ಲ." ఆ ಮಾತಿಗೆ ಅರ್ಥವಿಲ್ಲವೆಂಬುದು) ನಾರಾಯಣರಾಯರಿಗೆ ಗೊತ್ತಿದ್ದರೂ ಅವರು