ಪುಟ:Chirasmarane-Niranjana.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಚಿರಸ್ಮರಣೆ

ಬದುಕಬೇಕು, ನನ್ನ ಬಾಳನ್ನು ರೂಪಿಸಬೇಕು." ನನ್ನ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯಲಿಲ್ಲ. ಮಂಗಳೂರಿಗೆ ಹೊರಟುಬಿಟ್ಟೆ, ಪ್ರತಿಕೋದ್ಯೋಗಿಯಾಗಲು(ಮುಂದೆ ಬಿಂಕದ ಪ್ರಮಾಣಪತ್ರ ಬಂದಾಗ ಅದನ್ನು ದೃಢವಾಗಿ ನಿರಾಕರಿಸಿದೆ. ನಾನು ಹೀಗೆ ಮಾಡಿದೆನೆಂದು ಮುಖಯ್ಯೋಪಾಧಾಯ ರಾಮಕೃಷ್ಣರಾಯರಿಗೆ ಬಹಳ ಬೇಸರವಾಯಿತಂತೆ.'ವಿಚಿತ್ರ ಹುಡುಗ' ಎಂದು ಅರಿತಿದ್ದರೂ, ಪ್ರತಿಭಾವಂತ ಶಿಷ್ಯ ಎ೦ದು ನನ್ನ ಮೇಲೆ ಅವರಿಗೆ ವಾತ್ಸಲ್ಯವಿತ್ತು.*)
ಖಚಿತವಾಗಿ ಹೇಳಬಲ್ಲೆ: ಮಂಗಳೂರಿಗೆ ಹೊರಟ ನನ್ನ ಗಂಟುಗದಡಿಗಳಲ್ಲಿ ಕಯ್ಯೂರಿನ ಅಗ್ನಿಕು೦ಡದ ಒ೦ದು ಕಿಡಿ ಇತ್ತು-ಆರದ ಕಿಡಿ.
ಹದಿಮೂರು ವರ್ಷಗಳ ಅನಂತರ'ಚಿರಸ್ಮರಣೆ' ಕಾದಂಬರಿಯನ್ನು ಬರೆಯಲು ಅದು ಕಾರಣವಾಯಿತು.

ನಾನು ಉದ್ಯೋಗಿಯಾದದ್ದು'ರಾಷ್ಟಬಂಧು'ವಿನಲ್ಲಿ (ಖಾತ ಸಾಹಿತಿ ಕಡೆಂಗೋಡ್ಲು ಶಂಕರಭಟ್ಟರ ಸಂಪಾದಕತ್ವ; ಪ್ರಸಿದ್ದ ರಾಜಕಾರಣಿ ಕೆ. ಆರ್. ಆಚಾರ್ಯರ ಒಡೆತನ).
ಕಯ್ಯೂರು ಹೋರಾಟಕ್ಕೆ ಸ೦ಬ೦ಧಿಸಿದ೦ತೆ 60 ಜನರನ್ನು ಬ೦ಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ. ನಾನು ಪತ್ರಕರ್ತ ಎಂದು ಜೈಲರು ಕಣ್ಣುಮಿಟಿಕಿಸಿದರು. ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ದೀರ್ಘ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿದಿನವೂ ಅವರ ಸಾಮಿಪ್ಯದ ಸವಿಯುಂಡೆ.
ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದು ನ್ಯಾಯಮೂರ್ತಿ ತೀರ್ಪು ನೀಡಿದ ದಿನ. ನಾಲ್ವರಿಗೆ ಮರಣದಂಡನೆ. ಒಟ್ಟು ಎರಡು ವರ್ಷ ಸಂದುವು ಅಪೀಲು ಇತ್ಯಾದಿ ಮುಗಿದಾಗ.
ಕಯ್ಯೂರಿನ ನಾಲ್ವರು ರೈತಮಕ್ಕಳು ಹುತಾತ್ಮರಾದುದಕ್ಕೆ ತುಸು ಮುನ್ನ ನಾನು ಕಯ್ಯೂರಿಗೆ ಹೋಗಿದ್ದೆ.-ಜನತೆಯ ಸಮರದಲ್ಲಿ ದೇಶದ ನಾನಾ ಕಡೆ ಜೀವ ತೇದವರ ಜತೆ. ಒಂದು ವರ್ಷದ ಬಳಿಕ ಮತ್ತೊಮ್ಮೆ ಹೋದೆ, ಕಯ್ಯೂರು

  • ಮುಂದೆ 1947ರ ಅಂತ್ಯದಲ್ಲಿ ಕನ್ನಡ ಸಾಹಿತ ಸಮ್ಮೇಳನ ಕಾಸರಗೋಡಿನಲ್ಲಿ ಜರಗಿದಾಗ ರಾಮಕೃಷ್ಣರಾಯರನ್ನು ಅಲ್ಲಿ ಕಂಡೆ.23ಜವ್ವನಿಗೆ ಕುಳುಕುಂದ ಶಿವರಾಯನನ್ನು ('ಜನಶಕ್ತಿ'ಯ ಸ೦ಪಾದಕ) ಮಾಜಿ ಶಿಷ್ಯನನ್ನು ಪ್ರೀತಿಯಿ೦ದ ಅವರು ಮಾತನಾಡಿಸಿದರು. ಮುಟ್ಟದೇಹೋದ ಸರ್ಟಿಫಿಕೇಟಿನ ಬಗ್ಗೆ ಏನನ್ನೂ ಹೇಳಲಿಲ್ಲ!