ಪುಟ:Chirasmarane-Niranjana.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ಚಿರಸ್ಮರಣಿ

 ಹೆಂಗಸರಿರಲಿಲ್ಲ;ಆದರೆ ಕರುಣಾಕರ ನಿಂತಿದ್ದ. ಆ ಹುಡುಗನಿಗೆ ಪಾಠ ಹೇಳಿ   
 ಕೊಡಲು ಒಪ್ಪಿದುದು ನೆನಪಾಗಿ,ಮಾಸ್ತರ ಹೃದಯ ಭರವಾಯಿತು.
 ಜಮೀನ್ದಾರರು ಮಗನನ್ನು ನೋಡದೆ ಇದ್ದರೂ ಮಾಸ್ತರೋಡನೆ ಹೊರಬರುತ್ತ
 ಹೇಳಿದರು:
     "ಅಂದ ಹಾಗೆ-ಕರುಣಾಕರನಿಗೆ ಪಾಠ ಹೇಳೋ ವಿಚಾರ,ನಾಳೆ ಸಂಜೆಯಿಂದ
 ಬರ್ತೀರೇನು?"    
     ಮಾಸ್ತರು ಮೆದುಳು ಒಂದು ನಿಮಿಷ ತೀವ್ರಗತಿಯಿಂದ ಚಲಿಸಿತು.
     "ಶಾಲೆಯ ಪಾಠಗಳೆಲ್ಲ ಆದಮೇಲೆ ಹುಡುಗರಿಗೆ ಸಾಮಾನ್ಯವಾಗಿ
  ಆಯಾಸವಾಗ್ತದೆ. ಅಲ್ಲದೆ ಅದು ಆಟ ಆಡೋ ಹೋತ್ತು. ಬೆಳಗ್ಗೆ ಪ್ಪಾಠ 
  ಇಟ್ಕೊಳ್ಳೋದು ಮೇಲು. ಅದರಿಂದ ಪ್ರಯೋಜನ ಜಾಸ್ತಿ."  
     ನಂಬಿಯಾರರು "ಹಾಗೇ ಆಗಲಿ" ಎಂದರು. ಆದರೆ ಆ ಕ್ಷಣವೇ, ಸಂಜೆ    ರೈತರಿಗೆ ಪತ್ರಿಕೆ ಓದಿ ಹೇಳಲು ತೊಂದರೆಯಾಗಬಾರದೆಂದು ಈ ಉಪಾಧ್ಯಾಯ ಆ    ರೀತಿ ಹೇಳಿದನೇನೋ ಎಂಬ ಸಂದೇಹ ಅವರಲ್ಲಿ ತಲೆದೋರಿತು. ಅಂತಹ ಓದಿಗೆ  
 ಅಸ್ವದವಿರಬಾರದೆಂದು ದೃಢವಾದ ಧ್ವನಿಯಲ್ಲಿ ಅವರೆಂದರು:
    "ಆದರೆ ರೈತರನ್ನು ಮಾತ್ರ ಸಾಯಂಕಾಲದ ಹೊತ್ತು ಶಾಲೆ ಜಗಲಿ ಸೇರಿಸ್ಬೇಡಿ,
 ನಿಮಗೆ ಒಬ್ಬರೇ ಇದ್ದು ಬೇಸರವಾದ್ರೆ ಇಲ್ಲಿಗೆ ಬನ್ನಿ.ಆಟವಿಲ್ಲದೆ ಹೋದ್ರೆ
 ಹರಟೆಯಾದರೂ ಹೊಡೆಯೋಣ. ಬೇಕಾದರೆ ನಮ್ಮನೇ ಪೇಪರೇ ನೀವು
 ಉಪಯೋಗಿಸ್ಬಹುದು. ಪ್ರತ್ಯೇಕ ತರಿಸಬೇಕೂಂತ್ಲೇ ಇಲ್ಲ."  
   ಉತ್ತರವಾಗಿ, ನೋವಿನ ಹಲವು ಪದರಗಳ ಆಳದಿಂದ, 'ಹೂಂ' ಎಂಬ ಧ್ವನಿ
 ಬಂತು.
   "ಬರ್ತೇನೆ, ನಮಸ್ಕಾರ" ಎಂದು ಹೇಳಿ, ಮಾಸ್ತರು ನಡೆದರು. ಜಮೀನ್ದಾರರು  
 ಉತ್ತರವಾಗಿ ತಲೆಯಾಡಿಸಿ ಮೌನ ನಮಸ್ಕಾರವಿತ್ತರು. ಅವರ ಆಳು, ದೊಡ್ಡ
 ಎರಡು ಪಪ್ಪಾಯಿ ಹಣ್ಣುಗಳನ್ನು ಬಾಳೆಯ ಹಗ್ಗದಲ್ಲಿ ಕಟ್ಟಿ ತಲೆಯ 
 ಮೇಲಿರಿಸಿಕೊಂಡು, ಮಾಸ್ತರನ್ನು ಹಿಂಬಾಲಿಸಿದ.
   ಮಾಸ್ತರಿಗೆ ಬೇಸರವಾಗಿತ್ತು. ಹಿಂಡಿಹೋಗಿದ್ದ ಪತ್ರಿಕೆತಯನ್ನು ಕಂಕುಳಲ್ಲಿ ಇರಿಸಿ,
 ಉಟ್ಟಿದ್ದ ಅಡ್ಡಪಂಚೆಯನ್ನು ಅರ್ಧಕ್ಕೆ ಎತ್ತಿ ಕಟ್ಟಿ ಅವರು ಮಾತಿಲ್ಲದೆ ಹಾದಿ 
 ನಡೆದರು.
   ಕತ್ತಲಾಗಲು ಇನ್ನೂ ಸ್ವಲ್ಪಹೊತ್ತಿತ್ತು. ರೈತರು ಕಾದು ನಿರಾಶರಾಗಿ ಹೊರಟು 
 ಹೋಗಿದ್ದರೂ ಇರಬಹುದೆಂದು ಮಾಸ್ತರು ಅಂದುಕೊಂಡರು. ಸಮಾಜದ