ಗುರುತು ಹಿಡಿಯಲಿಲ್ಲವೆಂದು ಅಪ್ಪು, ನಿರಾಸೆಗೊಂಡು, ಬಳಿ ಸಾರಿ, ಕೇಳಿದ: "ಏನ್ರಿ, ಮರತ್ತೋಯ್ತಾ? ನಮ್ಮನ್ನು ನೋಡಿದ್ದು ನೆನಪಿಲ್ವ?" ಧಾಂಡಿಗ ಯೋಚಿಸುತ್ತಿದ್ದಂತೆ ನಟಿಸಿ ಹೇಳಿದ: "ಹೂಂ.... ಹೂಂ. ನೆನಪಿದೆ. ದ್ವಾಪರ ಯುಗದ ತ್ರೇತಾಯುಗದಲ್ಲೋ ಯಾವಾಗಲೋ ಒಮ್ಮೆ ನೋಡಿದ್ದೇಕು. ಅಪ್ಪು ನಕ್ಕು, ಮತ್ತೊಂದು ಪ್ರಶ್ನೆ ಕೇಳಿದ: "ಈಗೇಲ್ಲಿಂದ ಬಂದಿರಿ?" "ಪಾತಾಳದಿಂದ ಬಂದವೂ ಸ್ವರ್ಗದಿಂದ ಬಂದವೂ ಎಲ್ಲಿಂದಲೋ ! ಮರೆತ್ತೊಗಿದೆಯಪ್ಪಾ ಮರತ್ತೊಆಗಿದೆ." ಅಂತಹ ಪ್ರಶ್ನೆ ಕೇಳಬೇಡವೆಂದು "ಶ್!" ಎಂದು ಚಿರುಕಂಡ ಅಪ್ಪುವಿನ ಕೈ ಮುಟ್ಟಿ ಸನ್ನೆ ಮಾಡಿದ. ಅಪ್ಪುವಿಗೆ ಕೆಡುಕೆನಿಸಿತು. ಆದರೆ ಒಂದು ವರ್ಷದ ಹಿಂದೆ ತಾವು ಕಂಡಿದ್ದ ಇತರರ ನೆನಪಾಗಿ ಪಿಸುಮಾತಿನಲ್ಲಿ ಅಪ್ಪು ಕೇಳಿದ: "ಓಹೋ! ರಾಮುಣ್ಣೆಯಂತೂ ನಿಮ್ಮ ವಿಷಯ ವಿಚಾರಿಸ್ತಾನೇ ಇದ್ರಪ್ಪ, ಸಾಲಮಾಡಿ ಬಂದಿದ್ರೆ ಅವತ್ತು!” “ಓ!” ಎಂದ ಅಪ್ಪು, ಧಾಂಡಿಗ ತಮಾಷೆಗೆ ಹಾಗೆ ಅಂದನೆಂಬುದರಲ್ಲಿ ಶಂಕ ಇರಲಿಲ್ಲ. ಆದರೂ ರಾಮುಣ್ಣಿಯನ್ನು ಆ ಬಳಿಕ ಕಾಣಲಿಲ್ಲ ಎಂದು ಅಪ್ಪುವಿಗೆ ಬೇಸರವೆನಿಸಿತು. "ಹೌದು ಕಣಿ, ಇಷ್ಟು ಸಮೀಪವಿದ್ದರೂ ಹೋಗೋದಕ್ಕೆ ಆಗಿಲ್ಲ. *ಮುಖ್ಯ. ಆ ಕಡೆ ಹೋಗುವ ಕೆಲಸವೇ ಇಲ್ಲ' ಎಂದು ಚಿರುಕಂಡ ವಿವರಣೆಯನ್ನಿತ್ತ. “ನೀಲೇಶ್ವರ ಜಾತ್ರೆಗೆ ಹೋಗುವಾಗ ಬರಬೇಕೂಂತಿತ್ತು. ಆದರೆ ಈ ಸಲ ಜಾತ್ರೆಗೆ ಹೋರಡೋದಾಗಲಿಲ್ಲ' ಎಂದು ಸಪ್ಪಗಿನ ಧ್ವನಿಯಲ್ಲಿ ಅಪ್ಪು ಹೇಳಿದ. ಹುಡುಗರಿಬ್ಬರನ್ನೂ ಧಾಂಡಿಗ ಬದಿಗೆಳೆದ. "ಅಲ್ರೊ! ಈ ಊರೇ ಪ್ರಪಂಚ ಅಂತ ಕಪ್ಪೆಗಳ ಹಾಗಿದ್ದೀರಲ್ಲೋ ಒಂದಿಷ್ಟು ಆಚೆ ಈಚೆ ಹಳ್ಳಿಗೆಲ್ಲಾ ಹೋಗಿ ಬರ್ಬಾರ್ದ ನೀವು?* "ಹೋಗಿ ಮಾಡೋದೇನು?” ಎಂದು ಚಿರುಕಂಡ, ಗಹನವಾದ ಯಾವುದೂ ವಿಷಯದ ಬಗೆಗೆ ಧಾಂಡಿಗ ಪ್ರಸ್ತಾಪಿಸುತ್ತಿರಬಹುದೆಂದು ಭಾವಿಸಿ, "ಹಲಸಿನ ಹಣ್ಣೋ ಮಾವಿನ ಹಣ್ಣೋ ಹೊತ್ವಾಕೋದು!" ಹಾಗೆ ಹೇಳುತ್ತಾ ಆತನೂ ನಕ್ಕ. ಆ ಮಾತನ್ನು ಕೇಳಿ ಹುಡುಗರೂ ನಕ್ಕರು.
ಪುಟ:Chirasmarane-Niranjana.pdf/೧೧೦
ಗೋಚರ