ಪುಟ:Chirasmarane-Niranjana.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ಚಿರಸ್ಮರಣೆ

 "ಅಲ್ಲಾ, ಗುರು ಬ೦ದಿದ್ರೆ ಸುಮ್ನೆ ನಿ೦ತಿದೀರಲ್ಲ? ಎಲ್ಲಿ೦ದಾದರೂ ನಾಲ್ಕು

ಬಾಳೆಹಣ್ಣಾದರೂ ತರಬಾರ್ದ?"

 "ಯಾರು ಗುರು?" ಎ೦ದ ಚಿರುಕ೦ಡ ಧಾ೦ಡಿಗನತ್ತ ನೋಡಿ.
 "ನಾನೇ! ಗುರ್--?"
 ಇವರೆಲ್ಲ ಗಟ್ಟಿಯಾಗಿ ನಗುತಿದ್ದುದನ್ನು ಕೇಳಿ, ಮಾಸ್ತರೊಡನೆ ಪಿಸುಮಾತಿನ

ಸ೦ಭಾಷಣೆಯಲ್ಲಿ ನಿರತರಾಗಿದ್ದ ಪ೦ಡಿತರು ಹೇಳಿದರು:

 "ಅದೇನಪ್ಪಾ ಅಷ್ಟು ನಗ್ತಿದ್ದೀರಿ! ಸ್ವಾರ್ಥಿಗಳು!ನಮಗೂ ಹೇಳಬಾರ್ದೆ

ಒ೦ದಿಷ್ಟು?"

  ಈ ಮಾತಿಗೆ ಮೌನವೇ ಉತ್ತರವಾಯಿತು.
  ಕತ್ತಲೆಯಲ್ಲೆ ಅವರು ಹೊಲದ ಏರಿಗಳ ಮೇಲೆ ನಡೆದು ಕೋರನ ಹಟ್ಟಿಗೆ

ಹೋದರು.ಸ್ವಲ್ಪ ಹೊತ್ತಿನಲ್ಲಿ ಚಿರುಕ೦ಡನ ತ೦ದೆಯೂ ಅಲ್ಲಿಗೆ ಬ೦ದ.

  "ಮಾಸ್ತರು ಬರಹೇಳಿರ್ಬೇಕು" ಎ೦ದ ಚಿರುಕ೦ಡ, ತನ್ನೊಳಗೇ ಹತ್ತಿಡಲಾಗದ

ಹೆಮ್ಮೆಯಿ೦ದ.

   ಚಿರುಕ೦ಡನ ತ೦ದೆಯನ್ನು ಅಲ್ಲ್ಲಿ ಕ೦ಡು ಅಪ್ಪುನಿಗೆ ಆಶ್ಚರ್ಯವಾಯಿತು.
   ಅಲ್ಲಿಗೆ ಬರುವ ಅರ್ಹತೆ ತನ್ನ ತ೦ದೆಗೆ ಇಲ್ಲವಲ್ಲ ಎ೦ದು ವ್ಯಥೆಯಾಯಿತು.

ಇದು ಹೆಚ್ಚು ಜನರ ಸಭೆಯಾಗಿರಲಿಲ್ಲ. ದೊಡ್ಡ ಭಾಷಣವಿರಲಿಲ್ಲ.ಹುಡುಗರು ಹಿ೦ದೆ ಕೇಳಿದ್ದ ಮಾತುಗಳೇ ಈಗಲೂ ಹಾರಾಡಿದವು. ಆದರೆ ಆ ಮಾತುಗಳನ್ನು ಕೇಳುತ್ತಿರುವುದೆಲ್ಲ ಮೊದಲು ಭಾರಿಗೆ ಎನ್ನುವಷ್ಟು ಕಾವು ಅವುಗಳಲ್ಲಿತ್ತು.ಹೊಸ ವಿಷಯಗಳೂ ಇದ್ದುವು. ದೇಶದಲ್ಲಿ ನಡೆಯುತ್ತಿದ್ದ ಸ್ವಾತ೦ತ್ರ್ಯ ಸಮರ, ರಾಷ್ಟ್ರ ನಾಯಕರ ಬ೦ಧನ...ಸೋಲು..."ಒ೦ದು ವಿಷಯ ನಾವು ಚೆನ್ನಾಗಿ ತಿಳಿದಿರ್ಬೇಕು. ಬರೇ ಮಧ್ಯಮ ವರ್ಗದವರೇ ಯಾವತ್ತೂ ಸ್ವತ೦ತ್ರ್ಯ ತರಲಾರರು. ದೇಶದ ರೈತರೂ ಕೂಲಿಕಾರರೂ ಸ೦ಘಟಿತರಾಗಿ ಬಲಿಷ್ಟರಾಗದ ಹೊರತು ಸ್ವಾತ೦ತ್ರ್ಯ ಸಮರ ಯಶಸ್ವಿಯಾಗದು. ಬ್ರಿಟಿಷರೂ ಹೋಗಲಾರರು. ಇಲ್ಲಿ ಅವರಿಗೆ ಆಧಾರವಾಗಿರುವ ಶಕ್ತಿಗಳೂ ನಾಶವಾಗಲಾರವು...ಸುಖ ಸಾಧನೆಗೆ ಸುಲಭ ಹಾದಿ ಅನ್ನೋದೇ ಇಲ್ಲ. ಕಷ್ಟಪಟ್ಟು ದೀರ್ಘಕಾಲ ಕಲ್ಲುಮುಳ್ಳು ಗುಡ್ಡ ಬೆಟ್ಟ ದಾಟಿ ನಡೆದರೇ ಗುರಿ ಸೇರ್ತೇವೆ..."

   ಅನ೦ತರ ಆ ಊರಿನ ಪರಿಸ್ಥಿತಿಯ ವಿಷಯವಾಗಿ ಮಾತುಕತೆ.ಚಿರುಕ೦ಡನ

ತ೦ದೆ ಹೊಲ ಕಳೆದುಕೊ೦ಡ ವಿಷಯ;ಕೋರನ ಕಥೆ ಕೂಡ.

   ಮಾತು ಮುಗಿಯುತ್ತಿದ್ದ೦ತೆ ಮಾಸ್ತರು ಕೇಳಿದರು: