ಪುಟ:Chirasmarane-Niranjana.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೧೧೫

ಅಂದ್ಮೇಲೆ, ಈಗ ರೈತರು ತಮಗೂ ವಿದ್ಯೆ ಬೇಕೂಂತ ಕೇಳಿದರೆ ವಿರೋಧಿಸೋದು ಸರಿಯಲ್ಲ. ಆದರೆ ಈ ಮಹಾರಾಯರಿಗೆ ಆ ಅಭಿಪ್ರಾಯ ಸಮ್ಮತವಿಲ್ಲ, ಏನು ಮಾಡೋಣ?"

  ಇಬ್ಬರು ಪ್ರಮುಖರು ವೈಯಕ್ತಿಕ ಪ್ರತಿಷ್ಟೆಗಾಗಿ ತಮ್ಮೊಳಗೆ ಸೂಕ್ಷ್ಮವಾಗಿ 

ವಾದಿಸುತ್ತಿದ್ದ ರೀತಿ ನೋಡಿ ಮಾಸ್ತರಿಗೆ ಮೋಜೆನಿಸಿತು.

  ಈಗ ನ೦ಬಿಯಾರರು ಏನು ಹೇಳುವರೋ ಎ೦ದು ಅವರು ಕುತೂಹಲ  

ತಳೆದರು. ಯಾವ ಅಸ್ತ್ರವನ್ನು ಹೇಗೆ ಪ್ರಯೋಗಿಸಬೇಕೆಂದು ನಂಬಿಯಾರರು ಚಡಪಡಿಸುವ೦ತೆ ತೋರಿತು.

 "ಇದಕ್ಕೆಲ್ಲ ಅರ್ಥವಿಲ್ಲ.ಇಲ್ಲಿ ತತ್ತ್ವದ ಪ್ರಶ್ನೆಯೇ ಎಲ್ಲ.ಇವರೆಲ್ಲ ವಿದ್ಯೆ 

ಕಲಿತೇ ಪ್ರಪಂಚ ಉದಾರವಾಗ್ಬೇಕೇನೋ. ಚಿಕ್ಕವರು ಆದಷ್ಟು ಜನ ಕಲಿಯೋದು ಸರಿ. ಆದರೆ ದೊಡ್ಡವರು ಕೂಡ ಕಲಿಯೋದು ಅಂದರೇನು?"

  ನಂಬೂದಿರಿಗೆ, ಮಾಸ್ತರು ತಮ್ಮ ಕಡೆಗೇ ಇರುವರೆಂಬ ಆತ್ಮವಿಶ್ವಾಸ ಹೆಚ್ಚಿನ 

ಬಲವನ್ನು ಕೊಟ್ಟಿತು. ಅವರು ನಂಬಿಯಾರರತ್ತ ತಿರುಗಿ 'ನಾನೇ ಗೆದ್ದೆ' ಎನ್ನು ಧ್ವನಿಯಲ್ಲಿ ಹೇಳಿದರು:

  "ಬೆಳಗ್ಗಿನಿಂದ ಚರ್ಚೆ ಮಾಡ್ತಾ ಇಲ್ಲಿವರೆಗೂ ಬಂದಿದ್ದೇವ. ಏನಪ್ಪಾ, ಆವತ್ತು 

ಏನು ಹೇಳಿದ್ದಿರಿ? ಕಾಲಧರ್ಮಕ್ಕೆ ಸರಿಯಾಗಿ ನಾವು ನಡೀಬೇಕೂ ಅಂತ. ಇವತ್ತು ನಾನು ಹೇಳೋದೂ ಅದೇ ಮಾತು."

  ನ೦ಬಿಯಾರರ ಧ್ವನಿ ಏರಿತು:
  "ಹೊಲದಲ್ಲಿ ಅವರು ದುಡಿಯೋದು ಕಮ್ಮಿ ಯಾದರೆ?" 
  "ಉಪವಾಸ ಬಿದ್ದು ಸಾಯ್ತಾರೆ ಅಷ್ಟೆ! ಅದಕ್ಕೆ ನೀವ್ಯಾಕೆ ಚಿ೦ತಿಸ್ತೀರಿ?"
  "ಹಾಗೆಲ್ಲ ಪರಿಸ್ಥಿತಿ ಕೈಬಿಟ್ಟು ಹೋಗದಂತೆ ನೋಡ್ಕೊಳ್ಬೇಕು" ಎಂದು ತನ್ನನ್ನೇ ಕೇಳಿಕೊಂಡರು. ಆದರೆ ಅವರಿಬ್ಬರೂ ಮಾಸ್ತರರ ಮಾತಿಗೆ ಲಕ್ಷ್ಯ ಕೊಡಲಿಲ್ಲ.
  ನ೦ಬಿಯಾರರು ರೇಗಿ ನುಡಿದರು:
  "ಹಾಳಾಗಿ ಹೋಗಲಿ! ನನಗೇನು?"
  "ಅಬ್ಬ!ಅ೦ತೂ ಈ ಸಲ ನಾನು ಗೆದ್ದೆ!"
  ನ೦ಬಿಯಾರರಿಗಿ೦ತ ವಯಸ್ಸಿನಲ್ಲಿ ದೊಡ್ಡವರಾಗಿದ್ದ ಈ ನ೦ಬೂದಿರಿಯ

ಮಾತಿನಲ್ಲಿ ಮಗುವಿನ ಮ೦ಗತನವಿತ್ತು.

  ಮುಖ ಸಿ೦ಡಿರಿಸಿ ನ೦ಬಿಯಾರರು ನುಡಿದರು:
  "ಆಗಲಿ! ಆದರೆ ಆ ವಿದ್ಯಾಭ್ಯಾಸ ಈ ಶಾಲೇಲಿ ನಡೀಕೂಡ್ದು.ಇದು ಮಕ್ಕಳ